Political News: ಮಾಜಿ ಸಿಎಂ ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ಬಗ್ಗೆ ಬಿಜೆಪಿಯ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ, ಮೊದಲಿನಿಂದಲೂ ಆಕ್ರೋಶ ಇದ್ದೇ ಇತ್ತು. ಆದರೆ ಯಾವಾಗ ಮಗ ವಿಜಯೇಂದ್ರಗೆ, ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಸಿಕ್ಕಿತೋ, ಅಂದಿನಿಂದ ಅವರಿಗೆ ಯಡಿಯೂರಪ್ಪ ಬಗ್ಗೆ ಇದ್ದ ಸಿಟ್ಟು ಇನ್ನಷ್ಟು ಹೆಚ್ಚಾಗಿದೆ. ಈ ರೀತಿ ಕುಟುಂಬ ರಾಜಕಾರಣ ಮಾಡುವುದರಿಂದ ಪಕ್ಷದಲ್ಲಿ ಹಲವು ವರ್ಷಗಳಿಂದ ಇರುವವರಿಗೆ ಅವಕಾಶ ಸಿಗುತ್ತಿಲ್ಲ ಎಂಬುದು ಯತ್ನಾಳ್ ಆಕ್ರೋಶ.
ಹೀಗೆ ಆಕ್ರೋಶ ವ್ಯಕ್ತಪಡಿಸಿ ಇಂದು ಮಾಧ್ಯಮದ ಜೊತೆ ಮಾತನಾಡಿದ ಯತ್ನಾಳ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಲಿಂಗಾಯತರೇ ಅಲ್ಲ. ಅವರು ಬಳೆಗಾರ ಶೆಟ್ಟರು. ಅವರ ಹುಟ್ಟೂರಾದ ಮಂಡ್ದ ಬೂಕನಕೆರೆಗೆ ಹೋಗಿ, ಅಲ್ಲಿನ ಜನರಿಗೆ ಕೇಳಿ, ಸತ್ಯ ಗೊತ್ತಾಗುತ್ತದೆ ಎಂದು ಬಿಜೆಪಿ ಹಿರಿಯ ನಾಯಕ ಯತ್ನಾಳ್ ಹೇಳಿದ್ದಾರೆ. ವೀರೇಂದ್ರ ಪಾಟೀಲ್, ಜೆ.ಎಚ್.ಪಟೇಲ್ ಬಳಿಕ ಸಮುದಾಯದಲ್ಲಿ ನಾಯಕರು ಇರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಜನರು ಯಡಿಯೂರಪ್ಪನವರನ್ನು ಒಪ್ಪಿಕೊಂಡರು. ಆದರೆ ಅವರು ವೀರಶೈವ ಮತ್ತು ಪಂಚಮಸಾಲಿಗಳಿಗೆ ಮೀಸಲಾತಿ ನೀಡದೇ ಮೋಸ ಮಾಡಿದರು ಎಂದು ಯತ್ನಾಳ್ ಆರೋಪಿಸಿದರು.
ಯಡಿಯೂರಪ್ಪ ಲಿಂಗಾಯತ ಹೆಸರಿನಲ್ಲಿ ಬಿಜೆಪಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್‌ಗೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ನಮ್ಮ ಆಕ್ಷೇಪ ಇರುವುದು ರಾಷ್ಟ್ರರಾಜಕಾರಣದ ಬಗ್ಗೆ ಮಾತ್ರ ನರೇಂದ್ರ ಮೋದಿ ಕೂಡ ಕುಟುಂಬ ರಾಜಕಾರಣ ಒಪ್ಪುವುದಿಲಲವೆಂದು ಹೇಳಿದ್ದಾರೆ.
ಇನ್ನು ರೇಣುಕಾಾಚಾರ್ಯ, ತಮಗೆ ನಾಯಿ ನರಿ ಎಂದು ಕರೆದ ಬಗ್ಗೆ ಪ್ರತಿಕ್ರಿಯಿಸಿರುವ ಯತ್ನಾಳ್, ನಾಯಿಗಳಿಗೆ ನಿಯತ್ತು ಇರುತ್ತದೆ. ಹಂದಿಗಳಿಗೆ ಇರುವುದಿಲ್ಲ. ವಿಜಯೇಂದ್ರ ಮತ್ತು ಯಡಿಯೂರಪ್ಪ ಪರ ಇಂದು ರಾಣುಕಾಚಾರ್ಯ ಮಾತನಾಡುತ್ತಿದ್ದಾರೆ. ಆದರೆ ಇವರನ್ನು ಅಧಿಕಾರದಿಂದ ಕೆಳಗಿಳಿಸಲು ಗೋವಾಗೆ ಹೋಗಿ ಸಂಚು ಮಾಡಿದ್ದು, ಇದೇ ರೇಣುಕಾಸ್ವಾಮಿ ಎಂದು ಯತ್ನಾಳ ಕಿಡಿಕಾರಿದ್ದಾರೆ.