ಪಂಚರಾಜ್ಯದ ಚುನಾವಣೆ ಫೆಬ್ರವರಿ 10 ರಂದು ಶುರುವಾಗಲಿದೆ. ಈಗಾಗಿ ಉತ್ತರ ಪ್ರದೇಶದಲ್ಲಿ ಚುನಾವಣಾ ಕಾವು ರಂಗೇರಿದೆ. 7 ಹಂತಗಳಲ್ಲಿ ಉತ್ತರಪ್ರದೇಶದ ಚುನಾವಣೆ ನಡೆಯುತ್ತದೆ. ಇಂದು ನಾಯಕರ 57 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಬಿಡುಗಡೆ ಮಾಡಲಾಗಿದೆ. ಈಗಾಗಿ ಹೆಸರು ಪ್ರಕಟಗೊಂಡಿರುವ ನಾಯಕರುಗಳಿಗೆಲ್ಲಾ ಯೋಗಿ ಆದಿತ್ಯನಾತ್‌ರವರು ಶುಭಾಶಯ ಕೋರಿದ್ದಾರೆ.
ಟ್ವಿಟರ್‌ನಲ್ಲಿ ತಿಳಿಸಿರುವ ಅವರು “ಇಂದು ಅಭ್ಯರ್ಥಿಗಳಾಗಿ ಹೆಸರು ಘೋಷಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು.ಅಭಿವೃದ್ದಿ ಬಿಜೆಪಿಯ ಏಕೈಕ ನೀತಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹುಟ್ಟಿಕೊಂಡಿರುವ ನವಭಾರತದ ನವ ಪ್ರದೇಶ” ನಿಮ್ಮಲೆಲ್ಲರ ಮುಂದೆ ಇದೆ ಜನರು ಮತ್ತೊಮ್ಮೆ ಜನರು ಮತ್ತೊಮ್ಮೆ ಬಿಜೆಪಿಯನ್ನು ಆಶೀರ್ವದಿಸುವ ಮೂಲಕ ರಾಜ್ಯದ ಅಭಿವೃದ್ದಿಯ ಪ್ರಯಾಣವನ್ನು ಮುಂದುವರೆಸುತ್ತಾರೆ ಎನ್ನುವ ಪೂರ್ಣ ನಂಬಿಕೆ ನನಗಿದೆ ಎಂದು ಯೋಗಿ ಆದಿತ್ಯನಾಥ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.