Political News: ನಿನ್ನೆ ಸಿಎಂ ಸಿದ್ದರಾಮಯ್ಯನವರು ಕೋಲಾರಕ್ಕೆ ಭೇಟಿ ನೀಡಿ, ಅಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಮರಳಿ ಬರುವಾಗ, ಟ್ರಾಫಿಕ್ ಜಾಮ್ ಆಗಿದ್ದು, ಹಲವು ವಾಹನ ಸವಾರರು ಪರದಾಡುವಂತಾಗಿತ್ತು. ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ, ಮುಖ್ಯಮಂತ್ರಿಗಳೇ,ಜೀರೋ ಟ್ರಾಫಿಕ್ ಬೇಡ ಅಂದಿದ್ದಾರಲ್ಲಾ, ನಿಮಗಾಗಿ ಕೋಲಾರ ಬಳಿ ಹೈವೇಯನ್ನೇ ಅರ್ಧ ಗಂಟೆಯಿಂದ ಬಂದ್ ಮಾಡಿದ್ದೀರಲ್ಲ ಸಾರ್! ಎಂದು ಕುಟುಕಿದ್ದಾರೆ.
ಇನ್ನು ಪ್ರತಾಪ್ ಸಿಂಹ ಬಗ್ಗೆ ಕಾಂಗ್ರೆಸ್ ತಮ್ಮ ಎಕ್ಸ್ ಖಾತೆಯಲ್ಲಿ ಅಣ್ಣ ಪ್ರತಾಪ್ ಸಿಂಹ ನಾಡಕಳ್ಳ, ತಮ್ಮ ವಿಕ್ರಮ್ ಸಿಂಹ ಕಾಡುಗಳ್ಳ ಟ್ವೀಟ್ ಮಾಡಿ ವ್ಯಂಗ್ಯವಾಡಿತ್ತು. ಅಲ್ಲದೇ, ಪ್ರಧಾನಿ ನರೇಂದ್ರ ಮೋದಿಯವರಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿ, ಟ್ವೀಟ್ ಮಾಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಪ್ರತಾಪ್ ಸಿಂಹ, ಕಾಂಗ್ರೆಸ್ಸಿಗರೇ, ಬೇರೆಯವರಿಗೆ ಏಕವಚನ, ಬಹುವಚನ ಮತ್ತು ವ್ಯಾಕರಣದ ಪಾಠ ಹೇಳುವ ಮೊದಲು ಸ್ವತಃ ತಿದ್ದಿಕೊಳ್ಳಿ ಎಂದು ತಿರುಗೇಟು ಕೊಡುವ ಮೂಲಕ ಟ್ವೀಟ್ ಮಾಡಿದ್ದರು.
ಮುಖ್ಯಮಂತ್ರಿಗಳೇ,ಜೀರೋ ಟ್ರಾಫಿಕ್ ಬೇಡ ಅಂದಿದ್ದಾರಲ್ಲಾ, ನಿಮಗಾಗಿ ಕೋಲಾರ ಬಳಿ ಹೈವೇಯನ್ನೇ ಅರ್ಧ ಗಂಟೆಯಿಂದ ಬಂದ್ ಮಾಡಿದ್ದೀರಲ್ಲ ಸಾರ್! @CMofKarnataka pic.twitter.com/wbV2UR9DFK
— Pratap Simha (@mepratap) December 27, 2023
ಕಾಂಗ್ರೆಸ್ಸಿಗರೇ, ಬೇರೆಯವರಿಗೆ ಏಕವಚನ, ಬಹುವಚನ ಮತ್ತು ವ್ಯಾಕರಣದ ಪಾಠ ಹೇಳುವ ಮೊದಲು ಸ್ವತಃ ತಿದ್ದಿಕೊಳ್ಳಿ… pic.twitter.com/Zb9T8QYfG4
— Pratap Simha (@mepratap) December 27, 2023