Bengaluru News: ಭಾರತದಲ್ಲಿ ಹಲವು ಸ್ಥಳಗಳಲ್ಲಿ ಪಾರ್ಕಿಂಗ್ ಚಾರ್ಜ್ ಹೆಚ್ಚಂದ್ರೆ ನೂರು ರೂಪಾಯಿ ವರೆಗೂ ಇರಬಹುದು. ಅದು ಪಾರ್ಕಿಂಗ್ ಸ್ಥಳ ಮತ್ತು ಸಮಯದ ಮೇಲೆ ಡಿಪೆಂಡ್ ಆಗಿರುತ್ತದೆ. ಆದರೆ ಬೆಂಗಳೂರಿನ ಈ ಸ್ಥಳದಲ್ಲಿ ಪಾರ್ಕಿಂಗ್ ಮಾಡಬೇಕು ಅಂದ್ರೆ, ನೀವು 1 ಸಾವಿರ ರೂಪಾಯಿ ಕೊಡಬೇಕಂತೆ. ಅದು ಬರೀ 1 ಗಂಟೆ ಗಾಡಿ ಪಾರ್ಕ್ ಮಾಡುವುದಕ್ಕೆ. ಸಮಯ ಹೆಚ್ಚಾದಂತೆ ಚಾರ್ಜ್ ಕೂಡ ಹೆಚ್ಚು ಮಾಡಲಾಗುತ್ತದೆ.
ಹಾಗಾದ್ರೆ ಬೆಂಗಳೂರಿನಲ್ಲಿರುವ ಎಕ್ಸ್‌ಪೆನ್ಸಿವ್ ಪಾರ್ಕಿಂಗ್ ಪ್ಲೇಸ್ ಯಾವುದು ಅಂತಾ ಕೇಳ್ತೀರಾ..? ಅದೇ ಯುಬಿ ಸಿಟಿ. ಕಸ್ತೂರಬಾ ರಸ್ತೆಯಲ್ಲಿರುವ ಯುಬಿ ಸಿಟಿ ಮಾಲ್‌ಗೆ ನೀವು ಹೋಗಬೇಕು ಅಂದ್ರೆ, ಪಾರ್ಕಿಂಗ್ ಚಾರ್ಜ್ 1ಗಂಟೆಗೆ 1 ಸಾವಿರ ಕೊಡಬೇಕು. ಈ ಸ್ಥಳಕ್ಕೆ ಬಂದ ಹಲವರು ಪಾರ್ಕಿಂಗ್ ಚಾರ್ಜ್ ನೋಡಿಯೇ, ಗಾಡಿ ರಿವರ್ಸ್ ತೆಗೆದುಕೊಂಡಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಜನ, ಇದು ಬರೀ ವಿವಿಐಪಿಗಳಿಗಷ್ಟೇ ಅನ್ನೋ ರೀತಿ ಪಾಾರ್ಕಿಂಗ್ ಚಾರ್ಜ್ ಇಟ್ಟಿದ್ದಾರೆ. ಈ ರೀತಿ ಮಾಡುವುದು ತಪ್ಪು. ಯಾರಿಗೇ ಆಗಲಿ, ಗಾಡಿಯನ್ನು ಎಲ್ಲಿ ಬೇಕೆಂದರಲ್ಲಿ ಇಟ್ಟು, ಹೋಗಲಾಗುವುದಿಲ್ಲ. ಹಾಾಗಾಗಿ ಪಾರ್ಕಿಂಗ್ ಚಾರ್ಜ್ ಕಡಿಮೆ ಮಾಡಬೇಕು ಎಂದು ಹೇಳಿದ್ದಾರೆ. ಇನ್ನು ಕೆಲವರು ಸರ್ಕಾರ ಜನಸಾಮಾನ್ಯರನ್ನು ಈ ರೀತಿಯಾಗಿ ಲೂಟಿ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.