Political News: ಬೆಂಗಳೂರು: ಈ ದೇಶವನ್ನು ನೀನು ಬಿಟ್ರೆ ಬೇರೆ ಯಾರೂ ಕೂಡ ಆಳೋಕೆ ಸಾಧ್ಯ ಇಲ್ಲ ಕಣಪ್ಪ. 2028ಕ್ಕೂ ನೀನೇ ಬಂದು, ನೀನೇ ಈ ರಾಜ್ಯ ಆಳಬೇಕು ಕಣಪ್ಪ ಎಂದು ಸಿಎಂ ಸಿದ್ದರಾಮಯ್ಯಗೆ ಕೈ ಕಾರ್ಯಕರ್ತ ಹಾರೈಸಿದ್ದಾರೆ.
ಟಿ. ನರಸೀಪುರದ ಕಾಂಗ್ರೆಸ್ ಕಾರ್ಯಕರ್ತ ನಿಂಗಯ್ಯ ಅವರು ಜನತಾ ದರ್ಶನದಲ್ಲಿ ಈ ರೀತಿ ಸಿಎಂಗೆ ಹಾರೈಸಿದ್ದಾರೆ. ಆಶ್ರಯ ಕಮಿಟಿಗೆ ನನ್ನ ಅಳಿಯನನ್ನು ಸದಸ್ಯನಾಗಿ ಮಾಡಿ. 30 ವರ್ಷಗಳಿಂದ ನಾವು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇವೆ ಎಂದು ಮನವಿ ಮಾಡಿದ್ದಾರೆ. ಮನವಿ ಕೇಳಿ ‘ಆಯ್ತು.. ನಡೀ ಮಾಡಿಕೊಡೋಣ’ ಎಂದು ಸಿಎಂ ಸಿದ್ದರಾಮಯ್ಯ ಹೇಳಿ ಕಳುಹಿಸಿದ್ದಾರೆ.
ಮಂಡ್ಯ ಜಿಲ್ಲೆಯ 96 ವರ್ಷದ ಪರಂಧಾಮಯ್ಯ ಅವರು ನಾಗಮಂಗಲದಿಂದ ತಾಳವಾಡಿಯ ಮಾರ್ಗ ಮಧ್ಯೆಯ ಜಮೀನು ಹೊಂದಿದ್ದು, ವ್ಯವಸಾಯ ಮಾಡುವ ಜಮೀನನ್ನು ಬೈಪಾಸಿಗೆ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಜನತಾ ದರ್ಶನದಲ್ಲಿ ದೂರು ನೀಡಿದರು.
ಆರೋಗ್ಯವಾಗಿ ಗಟ್ಟಿಯಾಗಿರಿ
ಕೂಡಲೇ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಆನ್ ಲೈನ್ ಮೂಲಕ ಮಾತನಾಡಿದ ಸಿದ್ದರಾಮಯ್ಯ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದರು. 96 ವರ್ಷದ ಪರಂದಾಮಯ್ಯ ಜೀವನೋತ್ಸಾಹಕ್ಕೆ ಸಿದ್ದರಾಮಯ್ಯ ಅವರು ಮೆಚ್ಚುಗೆ ಸೂಚಿಸಿ, ಇನ್ನಷ್ಟು ಕಾಲ ಹೀಗೇ ಆರೋಗ್ಯವಾಗಿ ಗಟ್ಟಿಯಾಗಿರಿ ಎಂದು ಶುಭ ಕೋರಿದರು.
‘ಈ ಬಾರಿ ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ಖಚಿತ’
ಒಂದೇ ಕುಟುಂಬದ ಐದು ಮಂದಿ ಆತ್ಮಹತ್ಯೆ ಪ್ರಕರಣ: ಐವರು ಪೊಲೀಸ್ ವಶಕ್ಕೆ: ಸಚಿವ ಪರಮೇಶ್ವರ್