- Advertisement -
Chikkamagaluru News: ಚಿಕ್ಕಮಗಳೂರಿನ ಮೂಡಿಗೆರೆಯ ಕೊಟ್ಟಿಗೆಹಾರದಲ್ಲಿ ಯುವ ಕೃಷಿಕನೋರ್ವ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. 35 ವರ್ಷ ವಯಸ್ಸಿನ ಹೆಚ್.ಆರ್.ಚೇತನ್ ಎಂಬಾತನೇ ಮೃತ ದುರ್ದೈವಿಯಾಗಿದ್ದು, ಇವರು ಬಿಜೆಪಿಯ ಯುವ ಮುಖಂಡರಾಗಿದ್ದರು.
ಕೂವೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ರಮೇಶ್ ಗೌಡ ಅವರ ಏಕೈಕ ಪುತ್ರನಾದ ಚೇತನ್ ವಿವಾಹಿತರಾಗಿದ್ದರು. ಅವರಿಗೆ ಇಬ್ಬರು ಪುಟ್ಟ ಪುಟ್ಟ ಮಕ್ಕಳೂ ಇದ್ದಾರೆ. ಬೆಳಿಗ್ಗೆ ಹೊತ್ತು ಕಾಫಿ ಕಣದಲ್ಲಿದ್ದಾಗ, ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಬಾಳೆ ಹೊನ್ನೂರು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಮಾರ್ಗಮಧ್ಯದಲ್ಲೇ ಚೇತನ್ ಸಾವನ್ನಪ್ಪಿದ್ದಾರೆ.
ಚೇತನ್ ಹಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿ ಲವಲವಿಕೆಯಿಂದ ಇರುತ್ತಿದ್ದ ಹುಡುಗ, ಇವರು ತಂದೆ ತಾಯಿ, ಶತಾಯುಷಿ ಅಜ್ಜಿ, ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
- Advertisement -