Thursday, December 12, 2024

Latest Posts

ರಾಜಸ್ಥಾನದ ಯುವತಿ- ಬಾಗಲಕೋಟೆ ಯುವಕನ ಮೂಕ ಪ್ರೀತಿ, ಯುವತಿಯ ಎಳೆದೊಯ್ದ ಸಹೋದರರು

- Advertisement -

Bagalakote News: ಬಾಗಲಕೋಟೆ: ಆಕೆ ರಾಜಸ್ಥಾನದವಳು. ಈತ ಬಾಗಲಕೋಟೆ ಮೂಲದವ. ಇಬ್ಬರಿಗೂ ಮಾತುಬರುವುದಿಲ್ಲ. ಆದರೂ ಇನ್ಸ್ಟಾಗ್ರಾಮ್ ಮೂಲಕ ಪರಿಚಯ, ಲವ್ ಆಗಿ ಇಬ್ಬರು ಮೂಕ ಪ್ರೇಮಿಗಳು ಮದುವೆಯೂ ಆಗಿದ್ದರು. ಆದರೆ ಯುವತಿಯನ್ನು ಸಹೋದರರು ಕರೆದೊಯ್ದಿದ್ದು, ಈಗ ಆ ಎರಡೂ ಪ್ರೇಮಪಕ್ಷಿಗಳು ಮೂಕ ರೋದನೆ ಅನುಭವಿಸುತ್ತಿದ್ದಾರೆ.

ಪ್ರೀತಿಗೆ ಕಣ್ಣಿಲ್ಲ ಅದಕ್ಕೆ ಭಾಷೆ ಬೇಕಿಲ್ಲ ಗಡಿ ಹಂಗಿಲ್ಲ… ಎಲ್ಲ ನಿಜ. ಅದೇ ಪ್ರಕಾರ ಇವರಿಬ್ಬರು ಮಾತು ಬಾರದಿದ್ದರೂ ಇನ್ಸ್ಟಾಗ್ರಾಮ್ ಮೂಲಕ ಪರಿಚಯ, ಪ್ರೀತಿ ಆಗಿ ಮದುವೆ ಆಗಿದ್ದವರು. ಇವರು ಸಿದ್ದಾರ್ಥ್ ಕಾಂಬಳೆ ಹಾಗೂ ರೊದಿಯಾ ಕಂವರ್. ಸಿದ್ದಾರ್ಥ್ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ನಾಗನೂರು ಗ್ರಾಮದವ. ರೊದಿಯಾ ರಾಜಸ್ಥಾನ‌ದ ರಾಜಸಮಂಡ ಜಿಲ್ಲೆ ದಾಸಣಾ ಗ್ರಾಮದವಳು.

ಏಳು ತಿಂಗಳ ಹಿಂದೆ ಇಬ್ಬರು ಇನ್ಸ್ಟಾ ಗ್ರಾಮ್ ಮೂಲಕ ಮೂಕ ಭಾಷೆ ಮೂಲಕವೇ ಪರಿಚಯ ಆಗಿದ್ದರು. ಪರಿಚಯ ಸ್ನೇಹಕ್ಕೆ ತಿರುಗಿ ಪ್ರೀತಿಯಾಗಿತ್ತು. ಕೊನೆಗೆ ರಾಜಸ್ಥಾನಕ್ಕೆ ಹೋಗಿ ಸಿದ್ದಾರ್ಥ ಆಕೆಯನ್ನು ಊರಿಗೆ ಕರೆತಂದು ಮದುವೆಯಾಗಿದ್ದ. ಆದರೆ ಆಕೆಯನ್ನು ಸಹೋದರರು ರಾಜಸ್ಥಾನ ಪೊಲೀಸರ ಜೊತೆ ಬಂದು ಮರಳಿ ರಾಜಸ್ಥಾನಕ್ಕೆ ಕರೆದೊಯ್ದಿದ್ದಾರೆ. ಎಷ್ಟು ಬೇಡಿಕೊಂಡರೂ ಬಿಡದೆ ಕರೆದೊಯ್ದಿದ್ದು, ಇತ್ತ ಸಿದ್ದಾರ್ಥ ನನಗೆ ಆಕೆ ಬೇಕು ಎಂದು‌ ಕೈ ಮುಗಿದು ಕೇಳಿಕೊಳ್ಳುತ್ತಾ ಮೂಕರೋದನೆ ಪಡುತ್ತಿದ್ದಾನೆ.

ಆ ಇಬ್ಬರೂ ಅದಾಗಲೇ ಪ್ರತ್ಯೇಕವಾಗಿ ಮದುವೆಯಾಗಿದ್ದರು ಎಂಬ ಮಾಹಿತಿಯೂ ಇದೆ. ಆದರೆ ಆ ಬಗ್ಗೆ ನಿಖರತೆಯಿಲ್ಲ. ಇಲ್ಲಿ ಸಿದ್ದಾರ್ಥ ಮತ್ತು ರೊದಿಯಾ ಇಬ್ಬರೂ ಇನ್ಸ್ಟಾ ಮೂಲಕ ಪ್ರೀತಿ ಮಾಡಿ, ಅಗಸ್ಟ್​​ ೨೭, ೨೦೨೩ ರಂದು ಜಮಖಂಡಿ ತಾಲ್ಲೂಕಿನ ‌ನಾಗನೂರು ಗ್ರಾಮದ ಸಿದ್ದಾರ್ಥ್ ಮನೆ ಮುಂದೆ ಮದುವೆ ಆಗಿದೆ. ಆದರೆ ಮದುವೆ ನೊಂದಾವಣಿ ಮಾಡಿಸಿಲ್ಲ. ಶಾಸ್ತ್ರೋಕ್ತವಾಗಿ ಮದುವೆಯಾಗಿದೆ.

ಇನ್ನೊಂದು ಕಡೆ ರೊದಿಯಾ ಕುಟುಂಬಸ್ಥರು ರಾಜಸ್ಥಾನದಲ್ಲಿ ರೊದಿಯಾ ಕಿಡ್ನಾಪ್ ಆಗಿದ್ದಾಳೆ ಎಂದು ದೂರು ನೀಡಿದ್ದರು. ಇದರಿಂದ ನಾಗನೂರಿಗೆ ಬಂದ ರಾಜಸ್ಥಾನ ‌ಪೊಲೀಸರು ಹಾಗೂ ಆಕೆಯ ಸಹೋದರರು ಸೆಪ್ಟೆಂಬರ್ ೧೬, ೨೦೨೩ ರಂದು ರೊದಿಯಾಳನ್ನು ಕರೆದೊಯ್ದಿದ್ದಾರೆ. ಮದುವೆಯಾಗಿ ೨೦ ದಿನದಲ್ಲಿ ಇಬ್ಬರು ದೂರ ಆಗಿದ್ದಾರೆ.

ರೊದಿಯಾ ವಿಡಿಯೊ ಕಾಲ್ ಮಾಡಿ ನನ್ನ ಕರೆದುಕೊಂಡು ಹೋಗು ಇಲ್ಲದಿದ್ರೆ ಇವರು ನನ್ನ ಸಾಯಿಸ್ತಾರೆ ಎಂದು ಸನ್ನೆ ಮೂಲಕವೇ ಸಿದ್ದಾರ್ಥ ಗೆ ದಿನಾಲು ಹೇಳುತ್ತಿದ್ದಾಳೆ. ಇದರಿಂದ ಸಿದ್ದಾರ್ಥ ಮತ್ತಷ್ಟು ಆತಂಕ್ಕೆ ಈಡಾಗಿದ್ದಾನೆ. ಹೇಗಾದರೂ‌ ಮಾಡಿ‌ ರೊದಿಯಾಳನ್ನು ವಾಪಸ್ ಕರೆ ತನ್ನಿ ಅಂತಿದ್ದಾನೆ. ಇದಕ್ಕಾಗಿ ತಂದೆ ಹಾಗೂ ವಕೀಲ ಎನ್ ಬಿ ಗಸ್ತಿ ಅವರ ಮೂಲಕ ಬಾಗಲಕೋಟೆ ಎಸ್ ಪಿ ಅಮರನಾಥ ರೆಡ್ಡಿ ಅವರ ಮೊರೆ ಹೋಗಿದ್ದಾನೆ. ಸಮಸ್ಯೆ ಆಲಿಸಿದ ಎಸ್ ಪಿ ಅವರು ಇದಕ್ಕೆ ಕಾನೂನಾತ್ಮಕ ರೀತಿಯಲ್ಲಿ ಏನು ಮಾಡಬಹುದು ಎಂದು ಯೋಚಿಸಿ ಕ್ರಮ ಕೈಗೊಳ್ಳೋದಾಗಿ ಭರವಸೆ ನೀಡಿದ್ದಾರೆ.

ಇನ್ಸ್ಟಾಗ್ರಾಮ್‌ನಲ್ಲಿ ಅರಳಿದ ಮೂಕ ಪ್ರೇಮ, ಮದುವೆ ಜೀವನವಾಗಿ ಈಗ ವಿರಹ ವೇದನೆ ಮೂಕರೋದನೆಯಾಗಿ ಬದಲಾಗಿದೆ. ಇಲ್ಲಿ ಇಬ್ಬರೂ ಪ್ರತ್ಯೇಕವಾಗಿ ಮೊದಲೇ ಮದುವೆಯಾದ ಸುದ್ದಿ ‌ಇರುವ ಕಾರಣ ಈ ಮೂಕ‌ಪ್ರೇಮ ಪ್ರಕರಣ ಯಾವ ತಿರುವು ಪಡೆದುಕೊಳ್ಳುತ್ತೊ ನೋಡಬೇಕಿದೆ.

ಹುಬ್ಬಳ್ಳಿಯಲ್ಲಿ ಉದ್ಯಮಿ ಗಣೇಶ್ ಸೇಟ್ ಮನೆ, ಕಚೇರಿ, ಹೊಟೇಲ್ ಮೇಲೆ ಐಟಿ ರೇಡ್

ತಂದೆ-ತಾಯಿಗೆ ಟಾರ್ಚರ್ ಆರೋಪ: ಹುಬ್ಬಳ್ಳಿ ಮಿನಿ ವಿಧಾನಸೌಧದಲ್ಲಿ ವ್ಯಕ್ತಿಗಳಿಬ್ಬರ ಮಧ್ಯೆ ಹೊಡೆದಾಟ

ಸುಪ್ರಿಂ ಕೋರ್ಟ್ ವರೆಗೂ ಹೋಗಿರುವ ಕುರ್ಚಿಗಾಗಿ ಅಧಿಕಾರಿಗಳ ಕಿತ್ತಾಟ: ಏನಿದು ಪ್ರಹಸನ?

- Advertisement -

Latest Posts

Don't Miss