Saturday, December 6, 2025

Latest Posts

ನಿಮ್ಮ ಋಣ ನಮ್ಮ ಮೇಲಿದೆ ಅದನ್ನು ತೀರಿಸಬೇಕು. ಹಾಗಾಗಿ ಈ ಸಭೆ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

- Advertisement -

Hassan News: ಹಾಸನ : ಹಾಸನ ನಗರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆದಿದ್ದು, ಈ ವೇಳೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ನಮ್ಮ ಸಾಧನೆಗಳನ್ನು, ಈ ಜಿಲ್ಲೆಗೆ ಕೊಟ್ಟಿರುವ ಕೊಡುಗೆಗಳನ್ನು ಹೇಳಿ ನಮ್ಮ ಬೆನ್ನು ತಟ್ಟಿಕೊಳ್ಳಲು ಸಭೆ ಕರೆದಿಲ್ಲ. ಈ ಜಿಲ್ಲೆಯ ಜನರು ನಮಗೆ ಶಕ್ತಿ ಕೊಟ್ಟಿದ್ದಾರೆ ನಿಮ್ಮಗಳ ಋಣ ನಮ್ಮ ಮೇಲಿದೆ, ಅದನ್ನು ತೀರಿಸಬೇಕು ಎಂದು ಹೇಳಿದ್ದಾರೆ.

ದೇವೇಗೌಡರಿಗೆ 91 ನೇ ವಯಸ್ಸಿನಲ್ಲಿ ನಡೆಯಲು ಸಮಸ್ಯೆ ಇದ್ದರು, ರಾಜ್ಯಸಭೆಯಲ್ಲಿ ನೀರಾವರಿ, ಕೊಬ್ಬರಿ ಸಮಸ್ಯೆ ಬಗ್ಗೆ ಮಾತನಾಡುತ್ತಿದ್ದೇವೆ. ಅವರ ಮಾರ್ಗದರ್ಶನದಲ್ಲಿ ನಾವು ನಡೆಯುತ್ತಿದ್ದೇವೆ. ಲೋಕಸಭಾ ಚುನಾವಣೆ ದಿನಾಂಕ ಪ್ರಕಟ ಆಗುವುದು ಸಮೀಸುತ್ತಿದೆ. ಚುನಾವಣೆ ದಿನಾಂಕ ನಿಗದಿಗೂ ಮುನ್ನವೇ ಒಂದು ಸಭೆ ಮಾಡಬೇಕಿತ್ತು. ಜೆಡಿಎಸ್-ಬಿಜೆಪಿ ಮೈತ್ರಿ ಆಗುವ ಸನ್ನಿವೇಶ ಪ್ರಾರಂಭವಾಯ್ತು. ಹಾಸನದ ಶ್ರೀರಾಮದೇವರ ಕಟ್ಟೆಯಲ್ಲಿ ದೇವೇಗೌಡರು ಮೊದಲ ಸಭೆ ಮಾಡಿದ್ರು. ಕಾರ್ಯಕರ್ತರ ಅಭಿಪ್ರಾಯ ಕೇಳುವ ಮುನ್ನವೇ ಪ್ರಜ್ವಲ್‌ರೇವಣ್ಣ ಅವರೇ ಅಭ್ಯರ್ಥಿ ಎಂದು ದೇವೇಗೌಡರು ಪ್ರಕಟ ಮಾಡಿದ್ರು. ನಮ್ಮ ವಿರೋಧಿಗಳು ಏನು ಚರ್ಚೆ ಮಾಡ್ತಿದ್ದಾರೆ, ಜಿಲ್ಲೆಯ ಹೊರಗಡೆ ಏನು ಚರ್ಚೆ ನಡಿತಿಸೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಇದೆಲ್ಲವನ್ನೂ ಗಂಭೀರವಾಗಿ ಪರಿಗಣಿಸಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಪ್ರಾರಂಭವಾಗಿದೆ. ಈಗಾಗಲೇ ಒಂದು ವರ್ಷ ಪೂರೈಸುತ್ತಿದ್ದಾರೆ. ಐದು ಗ್ಯಾರಂಟಿಗಳ ಮೇಲೆ ಚುನಾವಣೆ ಪ್ರಚಾರ ಪ್ರಾರಂಭಿಸಿದ್ದಾರೆ. ರಾಜ್ಯದ ಸಿಎಂ, ಡಿಸಿಎಂ, ಸಚಿವರುಗಳು ಭಾಗವಹಿಸುತ್ತಿದ್ದಾರೆ. ಪ್ರತಿದಿನ ಒಂದಲ್ಲ ಒಂದು ಕ್ಷೇತ್ರದಲ್ಲಿ ಗ್ಯಾರೆಂಟಿ ಕಾರ್ಯಕ್ರಮ ನಡಿತಿದೆ. ಪ್ರತಿದಿನ ಪೇಪರ್ ನೋಡಿದ್ರಿ ಸಿದ್ದರಾಮಯ್ಯ ಅವರ ಫೋಟೋ. ಡಿಸಿಎಂ ಪೇಪರ್ ಪೆನ್ನು ಕೊಡಿ ಎಂದರು, ಈಗ ಜನರು ಕೊಟ್ಟಿದ್ದಾರೆ. ಆ ಪೇಪರ್, ಪೆನ್ನನ್ನು ಹೇಗೆ ಸದ್ಬಳಕೆ ಮಾಡುತ್ತಿದ್ದಾರೆ ನೀವೆಲ್ಲಾ ನೋಡಿದ್ದೀರಾ.

ನಾನು ಎರಡು ತಿಂಗಳಿನಿಂದ ಸುಮ್ಮನಿದ್ದೇನೆ. ಯಾರ ಬಗ್ಗೆಯೂ ಕಠಿಣವಾಗಿ ಮಾತನಾಡುತ್ತಿಲ್ಲ. ನಾಡಿನ ಜನತೆಗೆ ಕೇಳಲು ಬಯಸುತ್ತೇನೆ. ಪ್ರತಿನಿತ್ಯ ನುಡಿದಂತೆ ನಡೆದಿದ್ದೇವೆ ಎನ್ನುತ್ತಿದ್ದಾರೆ. ಒಂದು ಕಡೆ ಪ್ರಧಾನಮಂತ್ರಿ ಗ್ಯಾರೆಂಟಿ, ಇನ್ನೊಂದೆಡೆ ರಾಜ್ಯದ ಗ್ಯಾರೆಂಟಿ. ಇದರಿಂದ ನಾಡಿನ ಜನತೆ ನೆಮ್ಮದಿಯಾಗಿರಲು ಸಾಧ್ಯವಾ..? ಪ್ರತಿದಿನ ಪ್ರಚಾರಕ್ಕೆ ಕೋಟ್ಯಾಂತರ ರೂ ಖರ್ಚು ಮಾಡುತ್ತಿದ್ದಾರೆ. 7600 ಹಳ್ಳಿಗಳಲ್ಲಿ ಅಂತರ್ಜಲ ಕುಸಿದಿದೆ, ಕುಡಿಯುವ ನೀರಿಗೆ ಹಾಹಾಕಾರವಿದೆ. ಪಾಪಾ ಮಹಾನ್ ಭಾವ ಡಿಸಿಎಂ ಹೇಳಿದ್ದಾನೆ. ದೇವೇಗೌಡರು ಅವರ ಕುಟುಂಬಕ್ಕಾಗಿ ಕಣ್ಣೀರು ಹಾಕ್ತಾರೆ ಅಂತ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹರಿಯಾಣಾದ ನೂತನ ಸಿಎಂ ಆಗಿ ನಯಾಬ್ ಸಿಂಗ್ ಸೈನಿ ಪ್ರಮಾಣವಚನ ಸ್ವೀಕಾರ

ಯುವರಾಜರೇ ರಾಜರಾಗಿರಿ ಮಂತ್ರಿಯಾಗಬೇಡಿ: ಯದುವೀರ್ ಒಡೆಯರ್ ಅಭಿಮಾನಿಗಳ ಅಭಿಯಾನ

ಸರಕಾರಿ ಕಾರ್ಯಕ್ರಮಕ್ಕೆ ಬರದಿದ್ದರೆ ಗ್ಯಾರಂಟಿ ಯೋಜನೆ ಬಂದ್‌: ಅಂಗನವಾಡಿ ಕಾರ್ಯಕರ್ತೆಯ ‘ಗ್ಯಾರಂಟಿ’ ಬೆದರಿಕೆ

- Advertisement -

Latest Posts

Don't Miss