Wednesday, September 11, 2024

Latest Posts

ಹೆಣ್ಣು ಮಕ್ಕಳ ಮಾನ ಹರಾಜು ಹಾಕಿದ ಸರ್ಕಾರ ನಿಮ್ಮದು: ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವರ ಆಕ್ರೋಶ

- Advertisement -

Political News: ಕೇಂದ್ರ ಸಚಿವರಾದ ಬಳಿಕ ಹೆಚ್.ಡಿ.ಕುಮಾರಸ್ವಾಮಿ ಮೊದಲ ಬಾರಿ ಬೆಂಗಳೂರಿನ ಜೆಡಿಎಸ್ ಕಚೇರಿಗೆ ಬಂದಿದ್ದು, ಕುಮಾರಸ್ವಾಮಿ ಅವರಿಗೆ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದ್ದಾರೆ.

ಈ ವೇಳೆ ಮಾತನಾಡಿದ ಕುಮಾರಸ್ವಾಮಿ,  ಪಕ್ಷ ಉಳಿಸಿಕೊಳ್ಳಲು ಆರ್ಥಿಕ ಸ್ಥಾನ ಬಹಳ ಮುಖ್ಯ. ನಾನು ಸಿಎಂ ಆಗಿ ಹಣದ ವ್ಯಾಮೋಹ ಬಲಿಯಾಗಿಲ್ಲ. ಆನ್ ಲೈನ್ ಗೇಮ್, ಸರಾಯಿ ನಿಷೇಧ ಮಾಡ್ದೆ. ನಾನು ಒಂದು ಹೆಸರು ಮಾಡಬೇಕು ಪಕ್ಷವನ್ನು ಉಳಿಸಬೇಕು. ಜನತಾ ದರ್ಶನಾ ಆರಂಭ ಮಾಡ್ದೆ. ಐದು ವರ್ಷಗಳ ಸರ್ಕಾರ ರಚನೆ ಮಾಡೋಕೆ ಪ್ರಾಮಾಣಿಕವಾಗಿ ಕೆಲಸ ಮಾಡ್ದೆ. ಐತಿಹಾಸಿಕ ಪಂಚರತ್ನ ಯಾತ್ರೆ ಮಾಡ್ದೆ. ಆ ಪಂಚರತ್ನ ತರ ತರ ಹಾರ ಹಾಕಿದ್ರು. ಅದು ಗಿನ್ನಿಸ್ ದಾಖಲೆಯಾಗಿದೆ.

ಜೆಡಿಎಸ್ ೧೯ ಸ್ಥಾನಕ್ಕೆ ಬಂದರು. ಕಾಂಗ್ರೆಸ್ ೧೩೬ ಸ್ಥಾನ ಬಂದರು ನೀವು ಬನ್ನಿ ಅಂತ ನಮ್ಮ ಶಾಸಕರಿಗೆ ಕರೆದ್ರು. ೧೨ ಜನ ಶಾಸಕರು ಒಪ್ಪಿದ್ದಾರೆ ನೀವು ಬಂದರೆ ೧೩ ಅವರು ಅಂತ ಹೇಳಿದ್ರ ಕಾಂಗ್ರೆಸ್ ನಾಯಕರು. ಮೋದಿಯವರು ಭೇಟಿ ಮಾಡಿದಾಗ ಒಂದುವರೆ ಗಂಟೆ ಮಾತುಕತೆ ಮಾಡಿದರು. ನಿನ್ನ ಶಕ್ತಿ ನನಗೆ ಗೊತ್ತಿದೆ ಅಂತ ಹೇಳಿ, ನೀನು ತೀರ್ಮಾನ ಮಾಡು ನಾನು ನಿನಗೆ ಶಕ್ತಿ ನೀಡುತ್ತೇನೆ ಎಂದು ಮೋದಿ ಹೇಳಿದ್ರು. ಕೇಂದ್ರ ಸರ್ಕಾರದ ಜವಾಬ್ದಾರಿ ಮುಖಂಡರ ಮನೆಗೆ ಕರೆದುಕೊಂಡರು. ನಮ್ಮ ಜೊತೆಗೂಡಿ ಕೆಲಸ ಮಾಡು ಅಂದರು. ನಾನು ಇವತ್ತು ಗೌರವ ಬಂದಿದ್ರೆ ಅದು ಕಾರ್ಯಕರ್ತರಿಂದ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

೧೫ ,೧೬ ವರ್ಷ ಕಷ್ಟ ಪಟ್ಟಿರಿರುವ ಶ್ರಮ ಇವತ್ತು ನಿಂತಿದ್ದೇವೆ. ಹಾಸನ ಜನತೆ ದೋಷ ಕೊಡಲ್ಲ. ದೇವೇಗೌಡ ಶಕ್ತಿ ತುಂಬಿದ್ದು ಹಾಸನ ಜಿಲ್ಲೆ. ನಾನು ಯಾವತ್ತಿಗೂ ಮರೆಯಲ್ಲ. ನಾನು ಸಿಎಂ,ಕಾಂಗ್ರೆಸ್ ನಾಯಕರಿಗೆ ಹೇಳಿತ್ತೀನಿ. ೮೨ ವರ್ಷಗಳ ಯಡಿಯೂರಪ್ಪರನ್ನ ಅಡಳಿತ ದುರುಪಯೋಗ ಮಾಡ್ಕೊಂಡು ಜನತೆ ಗೊತ್ತಿದೆ. ಈ ರಾಜ್ಯದ ನಾಲ್ಕು ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮೇಲೆ ಕೈಯಾಗಲು ಕುತಂತ್ರ ಮಾಡ್ತಾ ಇದ್ದೀರಾ. ದೇವೇಗೌಡ ಕುಟುಂಬ ಮುಗಿಸಿದ್ದೇವೆ ಅಂತ ಈಗ ಯಡಿಯೂರಪ್ಪ ಕುಟುಂಬಕ್ಕೆ ಕೈ ಹಾಕಿದ್ದೀರಾ. ಇದು ಕಾಂಗ್ರೆಸ್ ಪಕ್ಷದ ಸರ್ವನಾಶ ಶುರುವಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಇನ್ನು ಯಡಿಯೂರಪ್ಪ ಪ್ರಕರಣದ ಬಗ್ಗೆ ಮಾತನಾಡಿರುವ ಹೆಚ್.ಡಿ. ಕುಮಾರಸ್ವಾಮಿ, ನಾಲ್ಕು ತಿಂಗಳ ಕೇಸ್ ಟಚ್ ಮಾಡ್ದೆ. ಈಗ ಜಾಮೀನು ರಹಿತ ವಾರೆಂಟ್ ತಂದು ಕೈ ಹಾಕಿದ್ದೀರಾ. ನಿಮ್ದು ಏನು ಇಲಾಖೆ ಅದು. ನನ್ನ ಕುಟುಂಬ ನಾಶ ಮಾಡಲು ಬಂದ್ರಿ. ಈಗ ಆ ಕುಟುಂಬ. ಇದು ಕಾಂಗ್ರೆಸ್ ಗೆದ್ದಿರುವುದು ೯ ಸೀಟು ಗೆದಿಲ್ಲ. ನಮ್ಮವರು ಶ್ರಮ ಕಡಿಮೆ ಆಗಿದೆ ಅದಕ್ಕೆ ನೀವು ಗೆದ್ದಿದ್ದೀರಾ. ಹಾಸನದಲ್ಲಿ ಪೆನ್ ಡ್ರೈವ್ ಹಂಚಿದ್ರಿ. ಹೆಣ್ಣುಮಕ್ಕಳ ಮಾನ ಹರಾಜು ಮಾಡಿದ ನಿಜ ಸರ್ಕಾರ ಇದು ಎಂದು ಕಾಂಗ್ರೆಸ್ ವಿರುದ್ಧ ಹೆಚ್ಡಿಕೆ ಕಿಡಿಕಾರಿದ್ದಾರೆ.

ಪೋನ್ ಸಂಭಾಷಣೆ ನಡೆಸಿದರು ಸಿಡಿ ಶಿವು. ಅವರ ಲೇವೆಲ್ ಗೆ ಇಳಿಯಬಾರದು. ನಾನು ಕೇಂದ್ರ ಸಚಿವ ಹಾಗಾಗಿ ಇಳಿಯಬಾರದು. ನಾನು ಕೇಂದ್ರ ಸಚಿವ ಅಂತ ಸಭೆ ಮಾಡಿದ್ದಾರೆ ಸಿಎಂ. ನಾನು ರಾಜ್ಯದ ಜನತೆ ಪರ ಅಭಿವೃದ್ಧಿ ನಾನು ಇರೋದು. ನಾನು ಬೃಹತ್ ಕೈಗಾರಿಕಾ ಸಚಿವನಾಗಿರಬಹುದು. ನಾನು ಏನು ಕೆಲಸ ಮಾಡಬಹುದು ಚರ್ಚೆ ಮಾಡಿದ್ದೇನೆ. ರಾಜ್ಯದಲ್ಲಿ ಸಿಎಂ ಆಗಿ ಮೊದಲು ಅನುಭವ ಇರಲಿಲ್ಲ. ದೇವೇಗೌಡ ಮಗ ಅಂತ ಬಿಟ್ಟು ಬೇರೆ ಏನು ಗೊತ್ತಿರಲಿಲ್ಲ. ಅದರು ತಿಳಿದುಕೊಂಡು ಕೆಲಸ ಮಾಡಿದ್ದೇನೆ. ಯಾವ ರೀತಿ ಉದ್ಯೋಗ ತರಬೇಕು ಅಂತ ಚರ್ಚೆ ಮಾಡಿದ್ದೀನಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಬಿಎಸ್‌ವೈ ವಿರುದ್ಧ ರಾಜಕೀಯ ವೈಷಮ್ಯ: ಕಾಂಗ್ರೆಸ್ ವಿರುದ್ಧ ಪ್ರಹ್ಲಾದ್ ಜೋಶಿ ಕಿಡಿ

ಹಲವು ಒತ್ತಡಗಳ ನಡುವೆಯೇ ದರ್ಶನ್‌ನನ್ನು ಅರೆಸ್ಟ್ ಮಾಡಿದ ಪೊಲೀಸ್ ಅಧಿಕಾರಿ ಯಾರು ಗೊತ್ತಾ..?

Sandalwood News: ಕೊನೆಗೂ ಸತ್ಯ ಬಾಯ್ಬಿಟ್ಟ ದರ್ಶನ್ ಮತ್ತು ಪವಿತ್ರಾ

- Advertisement -

Latest Posts

Don't Miss