ಧಾರವಾಡ ಪೋಲಿಸ್ ನಿರ್ಲಕ್ಷ್ಯ ಯುವಕ ಸಾವು

Dharwad News: ಧಾರವಾಡ ಜಿಲ್ಲೆಯ ನವಲಗುಂದ ಪಿ ಎಸ್ ಐ ಜನಾರ್ಧನ ಬಟ್ಟರಹಳ್ಳಿ, ಮತ್ತು ಸಿಪಿಐ ಕಪ್ಪತ್ತನ್ನವರ ದಿವ್ಯ ನಿರ್ಲಕ್ಷ್ಯಕ್ಕೆ ತಾಲೂಕಿನ ಗುಡಿಸಾಗರ ಗ್ರಾಮದ ಸಿದ್ದಪ್ಪ ಗಡಾದ ಎಂಬ ಯುವಕ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ..

ಡಿಸೆಂಬರ್ 14 ರಂದು ಕ್ಷುಲ್ಲಕ ಕಾರಣಕ್ಕೆ ಸಿದ್ದಪ್ಪ ಗಡಾದ ಮತ್ತು ಸಿದ್ದಪ್ಪ ಹಡಗಲಿ ಇಬ್ಬರ ಮಧ್ಯೆ ಗಲಾಟೆಯಾಗಿ ಮಾರಣಾಂತಿಕ ಹಲ್ಲೆಯಾಗಿದೆ. ಈ ಕುರಿತು ಡಿಸೆಂಬರ್ 14 ರಂದು ನವಲಗುಂದ ಪೋಲಿಸ್ ಠಾಣೆಗೆ ದೂರು ಕೊಡಲು ಹೋದಾಗ ಸಿದ್ದಪ್ಪ ಗಾಡದ ಅವರ ದೂರನ್ನ ದಾಖಲಿಸಿಕ್ಕೊಳ್ಳದೆ ಸತಾಯಿಸಿದ್ದಾರೆ..

ಇನ್ನು ದೂರು ಕೊಡಲು ಹೋದ ಸಿದ್ದಪ್ಪನಿಗೆ ಮತ್ತೆ ಜೀವ ಬೆದರಿಕೆ ಹಾಕಿರುವ ಸಿದ್ದಪ್ಪ ಹಡಗಲಿ ಎಂಬುವರ ಬೆದರಿಕೆಗೆ ಅಂಜಿ ಡಿಸೆಂಬರ್ 20 ರಂದು ವಿಷ ಸೇವಿಸಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗುತ್ತಾನೆ.. ಬಳಿಕ ಎಚ್ಚೆತ್ತುಕ್ಕೊಂಡ ನವಲಗುಂದ ಪೋಲಿಸರು ಅವತ್ತೆ ಡಿಸೆಂಬರ್ 20 ರಂದು 8 ಜನರ ಮೆಲೆ‌ ದೂರು ದಾಖಲಿಸಿಕ್ಕೊಳ್ಳುತ್ತಾರೆ ನವಲಗುಂದ ಪೋಲಿಸರು.

ಬಳಿಕ ಚಿಕಿತ್ಸೆ ಫಲಕಾರಿಯಾಗಿದೆ ಡಿಸೆಂಬರ 24 ರಂದು ಸಾವನ್ನಪ್ಪಿದ್ದಾನೆ. ಸದ್ಯ ಪಿಎಸ್ಐ, ಸಿಪಿಐ ಮಾಡಿದರು ದಿವ್ಯ ನಿರ್ಲಕ್ಷ್ಯಕ್ಕೆ ಯುವಕ ಸಾವನ್ನಪ್ಪಿದ್ದಾನೆ. ಆ ಇಬ್ಬರ ಪೋಲಿಸ್ ಅಧಿಕಾರಿಗಳನ್ನ ಅಮಾನತು ಮಾಡಬೇಕು ಎಂದು ಸಂಗೋಳ್ಳಿ ರಾಯಣ್ಣ ಹಿತ ರಕ್ಷಣಾ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಮುತ್ತನ್ನವರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬ್ಯಾಕೋಡ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಒಂದು ವೇಳೆ ಅಮಾನತು ಮಾಡಿಲ್ಲ ಎಂದರೆ ನವಲಗುಂದ ತಾಲೂಕು ಬಂದ್ ಮಾಡಲಾಗುವುದು ಎಂದು ಎಸ್ಪಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಡ್ರಗ್ಸ್ ಪಾರ್ಸೆಲ್ ಬಂದಿದೆ ಎಂದು ಹೇಳಿ ನಟಿಗೆ 5 ಲಕ್ಷ ವಂಚನೆ..

‘ಇಂಥವರನ್ನು ಬಂಧಿಸದೇ, ರಾಜಾರೋಷವಾಗಿ ತಿರುಗಾಡಲು ಬಿಟ್ಟರೆ ಶ್ರೀರಾಮಚಂದ್ರನೂ ಕ್ಷಮಿಸಲಾರ’

ಮಹಿಳೆಗೆ ನೆರವು: ಕೊಟ್ಟ ಮಾತಿನಂತೆ ಭರವಸೆ ಈಡೇರಿಸಿದ ಸಚಿವ ಸಂತೋಷ್‌ ಲಾಡ್‌

About The Author