ಕೇವಲ 15 ಗಂಟೆಯಲ್ಲಿ 120 km ಒಂಟಿ ಎತ್ತಿನ ಚಕ್ಕಡಿ ಮೂಲಕ ಯಲ್ಲಮ್ಮನ ಹರಕೆ ತೀರಿಸಿದ ಯುವಕರು

Hubballi News: ಹುಬ್ಬಳ್ಳಿ: ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ನಿಂಗಪ್ಪ ಶಿವಪ್ಪ ತಟ್ಟಿಮನಿ ಅವರ ಗೆಳೆಯರ ಬಳಗದ ಮುತ್ತು ಶಿವಕಲ್ಲಪ್ಪ ಗೌರಿ, ಗಂಗಾಧರ ತಟ್ಟಿಮನಿ ಗೆಳಯರು ಸೇರಿ ಸುಕ್ಷೇತ್ರ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಕೇವಲ 12 ಗಂಟೆಗಳಲ್ಲಿ ಒಂಟಿ ಎತ್ತಿನ ಚಕ್ಕಡಿ ಮೂಲಕ ತೆರಳಿ ದರ್ಶನ ಪಡೆದು ವಿಶೇಷ ಸಾಧನೆ ಮೆರೆದಿದ್ದಾರೆ.ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ಶಿವಪ್ಪ ಕ ತಟ್ಟಿಮನಿ ಅವರು ಸಾಧನೆ ಮಾಡಿದವರು. ಆರಾಧ್ಯ ದೇವತೆ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಒಂಟಿ ಎತ್ತಿನ ಚಕ್ಕಡಿ ಮೂಲಕ ತೆರಳಿ ಹರಿಕೆ ತೀರಿಸಿರುವ ಇವರು ಹೋಗುವ, ಬರುವ ದಾರಿ ಸೇರಿ ಸುಮಾರು 120 ಕಿ.ಮೀ ದೂರವನ್ನು ಕೇವಲ 15 ಗಂಟೆಯಲ್ಲಿ ಪೂರ್ಣಗೊಳಿಸಿದ್ದು ವಿಶೇಷವಾಗಿದೆ.

15 ಗಂಟೆಯಲ್ಲಿ ಬಂದು ದಾಖಲೆ

ಗ್ರಾಮದ ಹಿರಿಯರ ಸಮ್ಮುಖದಲ್ಲಿ ಸುಕ್ಷೇತ್ರ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಒಂಟಿ ಎತ್ತಿನ ಚಕ್ಕಡಿ ಮೂಲಕ ತೆರಳಿ ದೇವಿ ದರ್ಶನ ಪಡೆಯುವ ಹರಿಕೆ ಹೊತ್ತಿದ್ದರು. ಗ್ರಾಮದಿಂದ ಬೆಳಗ್ಗೆ ಬಿಟ್ಟು ಯಲ್ಲಮ್ಮನ ಗುಡ್ಡಕ್ಕೆ ತೆರಳಿ ದೇವಿ ದರ್ಶನ ಪಡೆದು ಸಂಜೆ 6 ಗಂಟೆ ವೇಳೆಗೆ ಮರಳಿ ಗ್ರಾಮಕ್ಕೆ ಬರಬೇಕು ಎಂಬ ಶರ್ಯತ್ತು ವಿಧಿಸಲಾಗಿತ್ತು. ಅದರಂತೆ ಯುವಕರು ಬೆಳಗ್ಗೆ 3ಕ್ಕೆ ಗ್ರಾಮದಿಂದ ಯಲ್ಲಮ್ಮನ ಗುಡ್ಡಕ್ಕೆ ಪಯಣ ಬೆಳೆಸಿದ್ದರು.

ಯುವಕರಿಗೆ ಗ್ರಾಮದಲ್ಲಿ ಮೆರವಣಿಗೆ
ನಿಗದಿತ ಸಮಯಕ್ಕೆ ಮರಳಿ ಗ್ರಾಮಕ್ಕೆ ಆಗಮಿಸಿದ ನಿಂಗಪ್ಪ ಶಿವಪ್ಪ ತಟ್ಟಿಮನಿ ಗೆಳಯರ ಬಳಗದ ಯುವಕರ ಸಾಹಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗ್ರಾಮದ ಹಿರಿಯರಾದ ಅರ್ಜುನಪ್ಪ ಮೆಣಸಿನಕಾಯಿ, ಬಸವರಾಜ್ ಹೋಟಗಿ, ಮಲ್ಲಿಕಾರ್ಜುನ ಅಸುಂಡಿ, ನಿಂಗಪ್ಪ ಕರಡಿ, ಮುದಕ್ಕಣ್ಣ ಹೆಬ್ಬಾಳ ಅವರ ನೇತೃತ್ವದಲ್ಲಿ ಅವರನ್ನು ಒಂಟಿ ಎತ್ತಿನ ಚಕ್ಕಡಿ ಜೊತೆಗೆ ಗ್ರಾಮಸ್ಥರು ಮೆರವಣಿಗೆ ನಡೆಸಿ ಸನ್ಮಾನಿಸಿ ಗೌರವಿಸಿದ್ದಾರೆ.

ಒಂದು ದಿನದಲ್ಲಿ ಚಕ್ಕಡಿ ಮೂಲಕ 50,60 ಕಿ.ಮೀ ಚಕ್ಕಡಿ ಮೂಲಕ ಪ್ರಯಾಣ ಮಾಡುವುದನ್ನು ಕೇಳಿದ್ದೇವೆ. ಸುಮಾರು 120 ಕಿ.ಮೀ ದೂರವನ್ನು ಕೇವಲ 15 ಗಂಟೆಯಲ್ಲಿ ಕ್ರಮಿಸಿದ್ದು ಸುಲಭದ ಮಾತಲ್ಲ. ಇಂತಹ ಸಾಹಸ ಮೆರೆದಿರುವ ಸುಳ್ಳ ಗ್ರಾಮದ ಯುವಕರ ಧೈರ್ಯ-ಸ್ಥೈರ್ಯ ಶ್ಲಾಘನೀಯವಾದದ್ದು. ಯುವಕರು ಸುಳ್ಳ ಗ್ರಾಮದ ಕೀರ್ತಿ-ಗೌರವ ಹೆಚ್ಚಿಸಿದ್ದಾರೆ ಎಂದು ನವಲಗುಂದ ಶಾಸಕರು ಎನ್ ಏಚ್ ಕೋನರೆಡ್ಡಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಅಯೋಧ್ಯಾ ರಾಮ ಮಂದಿರದ ಮೇಲೆ ಬಾಂಬ್ ದಾಳಿ ಬೆದರಿಕೆ, ಯೋಗಿ ಆದಿತ್ಯನಾಥ್ ಹತ್ಯೆಗೂ ಸಂಚು..!

ಚುನಾವಣಾ ರಾಜಕಾರಣ ಬದಿಗಿಟ್ಟು ಮುಗ್ಧ ರೈತರ ನೆರವಿಗೆ ಧಾವಿಸಿ: ಬಿ.ವೈ.ವಿಜಯೇಂದ್ರ ಆಗ್ರಹ

ಫೋಟೋಶೂಟ್ ಮಾಡಿಸಬೇಡ ಎಂದಿದ್ದಕ್ಕೆ, ಯುವತಿ ಆತ್ಮಹತ್ಯೆ..

About The Author