Uttara Pradesh News: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದ್ದು, ಕೋಟಿ ಕೋಟಿ ಜನ ಮಹಾಕುಂಭ ಮೇಳವನ್ನು ಕಣ್ತುಂಬಿಕೊಳ್ಳಲು ಪ್ರಯಾಗ್‌ರಾಜ್‌ಗೆ ಬಂದಿದ್ದಾರೆ.
ಹೀಗೆ ಪ್ರಯಾಗ್‌ರಾಜ್‌ಗೆ ಬಂದಿರುವ ರಿಪೋರ್ಟರ್‌ಗಳು, ಕಂಟೆಂಟ್ ಕ್ರಿಯೇಟರ್ಸ್, ಯೂಟ್ಯೂಬರ್ ಹೀಗೆ ಹಲವರು ನಾಗಾಸಾಧುಗಳನ್ನು ಕಂಡು, ಅವರನ್ನು ಮಾತನಾಡಿರುವುದು ಕಾಮನ್. ಅವರ ಜೀವನದ ಬಗ್ಗೆ, ಜೀವನ ಶೈಲಿ, ಮಹಾಕುಂಭ ಮೇಳದ ಬಗ್ಗೆ ಎಲ್ಲ ಕೇಳುತ್ತಾರೆ. ಆದರೆ ಓರ್ವ ಯೂಟ್ಯೂಬರ್ ನಾಗಾಸಾಧುಗಳಿಗೆ ಕಿರಿಕಿರಿ ಮಾಡುವ ಪ್ರಶ್ನೆ ಕೇಳಿ, ಪೆಟ್ಟು ತಿಂದು ಓಡಿದ್ದಾನೆ.
ಹಾಗಾದ್ರೆ ಯೂಟ್ಯೂಬರ್ ಕೇಳಿದ್ದಾದರೂ ಏನು ಎಂಬ ಪ್ರಶ್ನೆಗೆ ಉತ್ತರ, ಆತ ಮೊದ ಮೊದಲು ನಾರ್ಮಲ್ ಆಗಿ ಕುಂಭ ಮೇಳದ ಬಗ್ಗೆ ಪ್ರಶ್ನೆ ಕೇಳಿದ್ದಾನೆ. ಆಗ ನಾಗಾಸಾಧು ಸಮಾಧಾನವಾಾಗಿ ಉತ್ತರಿಸಿದ್ದು, ಬಳಿಕ ತಾಳ್ಮೆ ಕಳೆದುಕೊಂಡ ನಾಗಾಸಾಧು, ಆತನನ್ನು ಹೊಡೆಯಲು ಹೋಗಿದ್ದಾರೆ. ಬಳಿಕ ಯೂಟ್ಯೂಬರ್ ಓಡಿದ್ದಾನೆ.
ನಾಗಾಸಾಧುವಿನ ಬೆರಳಿನಲ್ಲಿ ಉದ್ದೂದ್ದ ಉಗುರು ಬೆಳೆದಿದ್ದು, ಒಂದು ಕೈ ಮೇಲೆತ್ತಿ ಅವರು ಕುಳಿತಿದ್ದರು. ಈ ವೇಳೆ ನೀವು ಸನ್ಯಾಸಿಯಾಗಿದ್ದು ಯಾವಾಗ ಎಂದು ಪ್ರಶ್ನೆ ಕೇಳಿದ್ದಾನೆ. ನಾನು ಬಾಲ್ಯದಿಂದಲೇ ದೇವರ ಮೊರೆ ಹೋಗಿದ್ದೇನೆ ಎಂದು ಸನ್ಯಾಸಿ ಹೇಳಿದ್ದಾರೆ. ಬಳಿಕ ಯಾವ ಭಜನೆ ಮಾಡುತ್ತೀರಿ ನೀವು ಎಂದು ಯೂಟ್ಯೂಬರ್ ಕೇಳಿದ್ದಾನೆ. ಮೊದಲೇ ಕೋಪದಲ್ಲಿದ್ದ ಮಹಾರಾಜರು, ಕೈಯಲ್ಲಿದ್ದ ಚಿಮುಟದಿಂದಲೇ ಪೆಟ್ಟು ಕೊಟ್ಟು ಯೂಟ್ಯೂಬರ್‌ನನ್ನು ಓಡಿಸಿದ್ದಾರೆ.