Web News: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದ್ರೆ, ಯೂಟ್ಯೂಬ್‌ನ ಚಾಲೆಂಜಿಂಗ್ ಸ್ಟಾರ್ ವಿಕಾಸ್ ಗೌಡ ಅಂತನೇ ಹೇಳ್ಬಹುದು. ಯಾಕಂದ್ರೆ ಅವರು ಹಲವು ರೀತಿಯ ಪ್ರಯೋಗಗಳನ್ನು ಮಾಡಿ, ಜನರಿಗೆ ಮನರಂಜನೆ ನೀಡಿದ್ದಾರೆ. ಆದರೆ ಕೆಲವು ಚಾಲೆಂಜ್‌ಗಳು ಅವರಿಗೆ ಸಂಕಷ್ಟ ತಂದಿದ್ದು ಸುಳ್ಳಲ್ಲ. ಆ ಬಗ್ಗೆ ಅವರೇ ಮಾತನಾಡಿದ್ದಾರೆ ನೋಡಿ.
ವಿಕಾಸ್ 1 ಸಲ ಮಂಗಳಮುಖಿಯ ವೇಷ ಧರಿಸಿ, ರಾತ್ರಿ ವೇಳೆ ರಸ್ತೆಯಲ್ಲಿ ನಿಂತು ಜನರ ಬಳಿ ದುಡ್ಡು ಕೇಳಿದ್ದರು. ಆಗ ಅವರಿಗೆ ಯಾವ ರೀತಿಯ ಎಕ್ಸ್‌ಪಿರಿಯನ್ಸ್ ಆಗಿತ್ತು ಅಂತಾ ಅವರು ವಿವರಿಸಿದ್ದಾರೆ.
ಪೂರ್ತಿ ಶೇವ್ ಮಾಡಿ, ಮೇಕಪ್ ಆರ್ಟಿಸ್ಟ್ ಬಳಿ 3 ಗಂಟೆ ಮೇಕಪ್ ಮಾಡಿಸಿಕ“ಂಡು, ಸೀರೆಯುಟ್ಟು ಮಂಗಳಮುಖಿಯ ರೀತಿ ರೆಡಿಯಾಗಿದ್ದು ವಿಕಾಸ್ ಗೌಡ. ಬಳಿಕ ಅವರ ಸ್ನೇಹಿತರಿಬ್ಬರು ಅವರನ್ನು 2 ಬದಿಯಿಂದ ಶೂಟ್ ಮಾಡುತ್ತಿದ್ದರು. ಮಂಗಳಮುಖಿಯರ ಪರಿಸ್ಥಿತಿ ಹೇಗಿರತ್ತೆ ಅಂತ ತಿಳಿಯಬೇಕು ಅಂತಲೇ, ವಿಕಾಸ್ ಈ ವೀಡಿಯೋ ಮಾಡಿದ್ದರು.
ವಿಕಾಸ್ ಮಂಗಳಮುಖಿಯ ರೀತಿ ಮಾತನಾಡುತ್ತ ಶಾಪ್‌ಗೆ ಹೋಗಿ, ಕೆಲಸ ಕೇಳಿದರು. 20 ರಿಂದ 25 ಅಂಗಡಿಯಲ್ಲಿ ವಿಕಾಸ್ ಕೆಲಸ ಕೇಳಿದ್ದಾರೆ. ಆದರೆ ಮೈಕ್ ಸರಿಯಾಗಿ ವರ್ಕ್ ಆಗದ ಕಾರಣ, ಅದನ್ನೆಲ್ಲ ವೀಡಿಯೋದಲ್ಲಿ ಹಾಕಲಿಲ್ಲ ಎಂದಿದ್ದಾರೆ ವಿಕಾಸ್.
ಆ 20ರಿಂದ 25 ಅಂಗಡಿಯಲ್ಲಿ ನಿಯತ್ತಾಗಿ ದುಡಿತೀನಿ ಕೆಲಸ ನೀಡಿ ಅಂದ್ರು ಕೂಡ ಯಾರೂ ಅವರಿಗೆ ಕೆಲಸ ನೀಡಲಿಲ್ಲ. ಅಲ್ಲದೇ ತಾನು ಎಂಬಿಎ ಮಾಡಿದ್ದೇನೆ, ಆಫೀಸಿನಲ್ಲಾದರೂ ಕೆಲಸ ನೀಡಿ ಅಂತಾ ಕೇಳಲು ಹೋದರೆ, ಮಂಗಳಮುಖಿ ವೇಷದಲ್ಲಿದ್ದ ವಿಕಾಸ್ ಅವರನ್ನು ಬಿಡಲೇ ಇಲ್ಲವಂತೆ. ಬಂದ ದಾರಿಯಿಂದಲೇ ವಾಪಸ್ ಕಳುಹಿಸಲಾಯಿತು.
ಬಳಿಕ ಮಂಗಳಮುಖಿಯರು ಸಿಗ್ನಲ್‌ನಲ್ಲಿ ನಿಂತು ಬೇಡುವ ರೀತಿ ವಿಕಾಸ್ ಕೂಡ ಸಿಗ್ನಲ್‌ನಲ್ಲಿ ನಿಂತು ಬಂದು, ಹೋಗುವವರ ಬಳಿ ಹಣ ಕೇಳಿದ್ದಾರೆ. ಅಷ್ಟು ಸಮಯ ನಿಂತು ಹಣ ಕೇಳಿದರೂ, ವಿಕಾಸ್‌ಗೆ ಸಿಕ್ಕಿದ್ದು ಬರೀ 5 ರೂಪಾಯಿ ಮಾತ್ರವಂತೆ. ಮುಂದೇನಾಯ್ತು ಅಂತಾ ಅವರಿಂದಲೇ ಕೇಳಿ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.




