Saturday, September 21, 2024

Latest Posts

ಸನ್ ರೈಸರ್ಸ್ ಮುಳುಗಿಸಿ ಸೇಡು ತೀರಿಸಿಕೊಂಡ ವಾರ್ನರ್

- Advertisement -

ಮುಂಬೈ:ಸನ್ ರೈಸರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವು ದಾಖಲಿಸಿದೆ. ಸನ್ ರೈಸರ್ಸ್ ಮುಳುಗಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದು ಡ್ಯಾಶಿಂಗ್ ಓಪನರ್ ಡೇವಿಡ್ ವಾರ್ನರ್.

ವಾರ್ನರ್ ಸನ್ ರೈಸರ್ಸ್ ವಿರುದ್ಧ ಚೆನ್ನಾಗಿ ಆಡಿದ್ದರ ಹಿಂದೆ ಒಂದು ಕಾರಣವಿದೆ. ಡೇವಿಡ್ ವಾರ್ನರ್ ಕಳೆದ ಸೀಸನ್ಗಳಲ್ಲಿ ಸನ್ ರೈಸರ್ಸ್ ಪರ ಆಡಿದ್ದರು. ನಿನ್ನೆ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಒಂದು ರೀತಿಯಲ್ಲಿ ಸೇಡು ತೀರಿಸಿಕೊಂಡಿದ್ದಾರೆ.

ವಾರ್ನರ್ ಒಟ್ಟು 58 ಎಸೆತ ಎದುರಿಸಿ 12 ಬೌಂಡರಿ 3 ಸಿಕ್ಸರ್ ನೆರೆವಿನಿಂದ ಅಜೇಯ 92 ರನ್ ಗಳಿಸಿದರು.

ಜೊತೆಗೆ ಹಲವಾರು ಮೈಲುಗಲ್ಲುಗಳನ್ನು ಮುಟ್ಟಿದರು. ಕಳೆದ ಐಪಿಎಲ್ನನಲ್ಲಿ ಸನ್ ರೈಸರ್ಸ್ ಆಡಳಿತದೊಂದಿಗೆ ಮುಸುಕಿನ ಗುದ್ದಾಟ ನಡೆಸಿದ್ದ ವಾರ್ನರ್ ರನ್ನು ಈ ಆವೃತ್ತಿಗೂ ಮುನ್ನ ಕೈಬಿಟ್ಟಿತ್ತು.

ನಂತರ ಡೆಲ್ಲಿ ಸೇರಿದ್ದ ವಾರ್ನರ್ ಅವರನ್ನು 6.5 ಕೋಟಿ ರೂ.ಗೆ ಡೆಲ್ಲಿ ಸೇರಿದ್ದರು. ಉತ್ತಮ ಫಾರ್ಮ ನಲ್ಲಿರುವ ಈ ಆಸಿಸ್ ಕ್ರಿಕೆಟಿಗ 58 ಎಸೆತ ಎದುರಿಸಿ 12 ಬೌಂಡರಿ 3 ಸಿಕ್ಸರ್ ಚಚ್ಚಿದ್ದರು.

ಟಿ20 ಕ್ರಿಕೆಟ್ನಲ್ಲಿ 400 ಸಿಕ್ಸರ್ ಪೂರೈಸಿದ ವಾರ್ನರ್ ಐಪಿಎಲ್ನಲ್ಲಿ 54ನೇ ಅರ್ಧ ಶತಕ ಪೂರೈಸಿದರು. ಟಿ20ಯ್ ಲ್ಲಿ ಅತಿ ಹೆಚ್ಚು ಅರ್ಧ ಶತಕ (89) ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದರು.ಕ್ರಿಸ್ ಗೇಲ್ ಅವರ 88 ಅರ್ಧ ಶತಕಗಳ ದಾಖಲೆಯನ್ನು ವಾರ್ನರ್ ಮುರಿದರು.

ಒಂದೆಡೆ ವಿಕೆಟ್ ಬೀಳುತ್ತಿದ್ದರೂ ನೆಲಕಚ್ಚಿ ನಿಂತ ಡೇವಿಡ್ ವಾರ್ನರ್ ತಂಡಕ್ಕೆ ಬೆನ್ನಲುಬಾದರು.ಬಳಿಕ ಮಧ್ಯಮ ಕ್ರಮಾಂಕದಲ್ಲಿ ರೋವಮನ್ ಪೊವೆಲ್ ಜೊತೆಗೂಡಿ ತಂಡದ ಸ್ಕೋರ್ ಹೆಚ್ಚಿಸಿದರು.

ಹೈದ್ರಾಬಾದ್ ದಾಳಿಯನ್ನು ಧ್ವಂಸ ಮಾಡಿದ ಈ ಜೋಡಿ ಮುರಿಯದ 4ನೇ ವಿಕೆಟ್ಗೆ 122 ರನ್್ ಸೇರಿಸಿ ಅಬ್ಬರಿಸಿದರು. ಡೆಲ್ಲಿ 207 ರನ್ ಗಳಿಸಲು ಶಕ್ತವಾಯಿತು.

 

 

 

 

 

 

 

 

 

- Advertisement -

Latest Posts

Don't Miss