Saturday, July 20, 2024

Latest Posts

“ಆಚಾರ್ಯ” ಸಿನಿಮಾ ನೋಡಿ ಆವರೇಜ್ ಎಂದ ಫ್ಯಾನ್ಸ್..!

- Advertisement -

ವರ್ಕೌಟ್​ ಆಗ್ಲಿಲ್ವಂತೆ ಅಪ್ಪ-ಮಗನ ಕಾಂಬೋ!

ಟಾಲಿವುಡ್ ಅಂಗಳದಲ್ಲಿ ಟ್ರೈಲರ್, ಟೀಸರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದ್ದ ಸಿನಿಮಾ ಆಚಾರ್ಯ. ಅಲ್ಲದೇ ನಿಜಜೀವನದಲ್ಲಿ ತಂದೆ, ಮಗನಾಗಿರೋ ಮೆಗಾಸ್ಟಾರ್ ಚಿರಂಜೀವಿ ಹಾಗೂ ನಟ ರಾಮ್ ಚರಣ್ ಒಟ್ಟಿಗೆ ನಟಿಸಿರೋ ಸಿನಿಮಾ ಇದಾಗಿರೋದ್ರಿಂದ ಸಾಮಾನ್ಯವಾಗಿ ಅಭಿಮಾನಿಗಳಲ್ಲಿ ಸ್ವಲ್ಪ ಹೆಚ್ಚಾಗಿಯೇ ಕುತೂಹಲವಿತ್ತು. ಆದರೆ ಅಭಿಮಾನಿಗಳ ಈ ನಿರೀಕ್ಷೆಯನ್ನ ಆಚಾರ್ಯ ಹುಸಿಮಾಡಿದ್ದಾರೆ. ಕೊರಟಾಲ ಶಿವ ನಿರ್ದೇಶಿಸಿರೋ ಈ ಸಿನಿಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿ, ರಾಮ್‌ಚರಣ್, ಪೂಜಾ ಹೆಗ್ಡೆ, ಸೋನು ಸೂದ್, ಭಜರಂಗಿ ಲೋಕಿ, ಜೆಶ್ಶು ಸೇನಗುಪ್ತ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎಲ್ಲರೂ ತಮ್ಮ ಪಾತ್ರಕ್ಕೆ ಸಂಪೂರ್ಣ ನ್ಯಾಯವನ್ನ ಒದಗಿಸಿದ್ದರೂ ಸಹ ಇಲ್ಲಿ ಅಭಿಮಾನಿಗಳ ಮನಸ್ಸನ್ನ ಆಚಾರ್ಯ ಗೆಲ್ಲೋದ್ರಲ್ಲಿ ಎಡವಿದ್ದಾರೆ.

‘ಆಚಾರ್ಯ’ ಚಿತ್ರವು ಬಿಗ್ ಬಜೆಟ್ ಆಕ್ಷನ್ ಡ್ರಾಮಾ ಆಗಿದ್ದು, ಸಾಮಾಜಿಕ ಸಂದೇಶವಿದೆ.ನಿಜ ಜೀವನದ ತಂದೆ-ಮಗನಾದ ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ತೇಜ ಕಾಂಬಿನೇಶನ್‌ನಲ್ಲಿ ಮೂಡಿಬಂದ ಸಿನಿಮಾ ಇದಾಗಿದೆ. ಈ ಚಿತ್ರ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು ಅಭಿಮಾನಿಗಳು. ಮಗಧೀರ ಸಿನಿಮಾದಲ್ಲಿ ಅಪ್ಪ ಚಿರಂಜೀವಿ ಹಾಗೂ ಮಗ ರಾಮ್​ಚರಣ್​ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಆಚಾರ್ಯ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ ಅನ್ನುವ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಥ್ರಿಲ್​ ಆಗಿದ್ದರು. ಇದೀಗ ಈ ಸಿನಿಮಾ ಇಂದು ವಿಶ್ವದಾದ್ಯಂತ ರಿಲೀಸ್​ ಆಗಿದೆ. ರಾತ್ರಿಯಿದಲೇ ಹಲವೆಡೆ ಫ್ಯಾನ್ಸ್ ಶೋ ನಡೆದಿದೆ. ತೆಲಂಗಾಣ, ಆಂಧ್ರಪ್ರದೇಶದಲ್ಲಿ ಅಭಿಮಾನಿಗಳು ಸಿನಿಮಾ ನೋಡಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಆಚಾರ್ಯ ಸಿನಿಮಾದ ಮೊದಲ ಭಾಗ ಅಷ್ಟೊಂದು ಚೆನ್ನಾಗಿಲ್ಲ, ಎರಡನೇ ಭಾಗ ಔಟ್‌ಡೇಟೆಡ್ ಆಗಿದೆ ಎಂದು ಸಿನಿಮಾ ನೋಡಿದ ವೀಕ್ಷಕರು ಹೇಳುತ್ತಿದ್ದಾರೆ. ಕೆಲ ದೃಶ್ಯಗಳು ಮಾತ್ರ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ಆ್ಯಕ್ಷನ್, ಬಿಜಿಎಂ, ಹಾಡುಗಳೆಲ್ಲ ಚೆನ್ನಾಗಿದೆ. ಕ್ಲೈಮ್ಯಾಕ್ಸ್ ತುಂಬ ಎಮೋಶನಲ್ ಆಗಿದೆ, ಹಿಂದು ಧರ್ಮದ ಕುರಿತು ಮೆಸೇಜ್ ಇದೆ. ಆದರೆ, ಅಪ್ಪ-ಮಗನ ಜೋಡಿ ವರ್ಕೌಟ್​ ಆಗಿಲ್ಲ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಚಿರಂಜೀವಿ ಹಾಗೂ ರಾಮ್​ಚರಣ್​ ಅವರ ಅಭಿನಯ ಬಿಟ್ಟರೆ ಸಿನಿಮಾದಲ್ಲಿ ಬೇರೆ ಏನಿಲ್ಲ ಎನ್ನಬಹುದು. ಬಂಜಾರಾ ಹಾಡೊಂದು ಅದ್ಭುತವಾಗಿದೆ. ಜೊತೆಗೆ ಚಿರಂಜೀವಿ, ರಾಮ್ ಚರಣ್, ಪೂಜಾ ಹೆಗ್ಡೆ, ಸೋನು ಸೂದ್, ಭಜರಂಗಿ ಲೋಕಿ ಹೀಗೆ ಕಲಾವಿದರ ಅಭಿನಯ ಬಿಟ್ರೇ ಸಿನಿಮಾದಲ್ಲಿ ಮತ್ತೆಲ್ಲಿಯೂ ಮನರಂಜನೆ ಇರೋದಿಲ್ಲ..ಹೀಗೆ ಸೋಶಿಯಲ್ ಮೀಡಿಯಾದಲ್ಲೂ ಮೆಗಾಸ್ಟಾರ್ ಫ್ಯಾನ್ಸ್ ಆಚಾರ್ಯ ಸಿನಿಮಾ ಮೇಲೆ ತೀರಾ ಬೇಸರ ವ್ಯಕ್ತಪಡಿಸಿದ್ದಾರೆ.

ಹಲವರು ಕಥೆ ಬಗ್ಗೆಯೇ ಬೇಸರ ಪಟ್ಟಿದ್ದು, ಇನ್ನೂ ಒಳ್ಳೆಯ ಕಥೆ ಸಿನಿಮಾದಲ್ಲಿ ಇದ್ದಿದ್ದರೆ ಚಿತ್ರತಂಡಕ್ಕೆ ಯಶಸ್ಸು ಸಿಗುತ್ತಿತ್ತೇನೋ..ಆದರೆ ಸದ್ಯಕ್ಕೆ ಸಿಕ್ಕಿದ್ದ ಅವಕಾಶವನ್ನಂತೂ ನಿರ್ದೇಶಕ ಶಿವ ಮಿಸ್ ಮಾಡ್ಕೊಂಡಿದ್ದಾರೆ.

ಕರ್ನಾಟಕ ನ್ಯೂಸ್

- Advertisement -

Latest Posts

Don't Miss