Wednesday, July 9, 2025

Latest Posts

ಆಪರೇಷನ್ ಕೆಲ್ಲರ್‌ ಶುರು : ಸೇನೆಯಿಂದ ಜಮ್ಮುವಿನಲ್ಲಿ ಮೂವರು ಉಗ್ರರು ಮಟ್ಯಾಶ್..!‌

- Advertisement -

ಆಪರೇಷನ್‌ ಸಿಂಧೂರ್‌ ವಿಶೇಷ :

ನವದೆಹಲಿ : ಪಹಲ್ಗಾಮ್‌ ದಾಳಿಯ ಪ್ರತೀಕಾರವಾಗಿ ಪಾಕಿಸ್ತಾನದ ಭಯೋತ್ಪಾದಕರ ವಿರುದ್ಧ ಸಮರ ಸಾರಿರುವ ಭಾರತವು ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯನ್ನು ಕೈಗೊಂಡು 100ಕ್ಕೂ ಅಧಿಕ ಉಗ್ರರನ್ನು ಹೊಡೆದುರುಳಿಸಿತ್ತು. ಅಲ್ಲದೆ ಅದರ ಮುಂದುವರೆದ ಭಾಗವಾಗಿ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಶುಕ್ರೂ ಕೆಲ್ಲರ್ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಭಯೋತ್ಪದಕರು ಬಲಿಯಾಗಿದ್ದಾರೆ.

ಭಯೋತ್ಪಾದಕ ಕಮಾಂಡರ್‌ ಫಿನಿಶ್..

ಭಾರತೀಯ ಸೇನೆಯಂತೆಯೇ ಉಗ್ರರ ವಿರುದ್ಧ ಸಿಡಿದೆದ್ದಿರುವ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಉಗ್ರರನ್ನು ಮಣ್ಣು ಮುಕ್ಕಿಸುವುದಕ್ಕೆ ತಮ್ಮದೇ ಆದ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಇನ್ನೂ ಆಪರೇಷನ್‌ ಕೆಲ್ಲರ್‌ ಹೆಸರಿನಲ್ಲಿ ನಡೆದ ಎನೌಕೌಂಟರ್‌ನಲ್ಲಿ ಉನ್ನತ ಭಯೋತ್ಪಾದಕ ಲಷ್ಕರ್‌ ಎ ತೊಯ್ಬಾ ಸಂಘಟನೆಯ ಕಮಾಂಡರ್ ಸೇರಿ ಮೂವರು ಉಗ್ರರು ಹತ್ಯೆಯಾಗಿದ್ದಾರೆ. ಪ್ರಸ್ತುತ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ಸಿಎಎಸ್ಒ ನಡೆಯುತ್ತಿರುವ ಸ್ಥಳದಲ್ಲಿ ಭಯೋತ್ಪಾದಕರು ಪತ್ತೆಯಾಗಿದ್ದರು ಈ ಪ್ರದೇಶದ ಹೆಸರು ಕೆಲ್ಲರ್‌, ಹೀಗಾಗಿ ಇದನ್ನೇ ನಾವು ಆಪರೇಷನ್ ಕೆಲ್ಲರ್‌ ಎಂದು ಬದಲಾಯಿಸಿದ್ದೇವೆ ಎಂದು ಭದ್ರತಾ ಪಡೆಗಳು ತಿಳಿಸಿವೆ.

ಖಚಿತ ಮಾಹಿತಿ ಆಧರಿಸಿ ಎನ್‌ಕೌಂಟರ್..

ದಕ್ಷಿಣ ಕಾಶ್ಮೀರ ಜಿಲ್ಲೆಯ ಶುಕ್ರೂ ಕೆಲ್ಲರ್ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಖಚಿತ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಅಲ್ಲಿ ಸುತ್ತುವರಿದು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದವು. ಭಯೋತ್ಪಾದಕರು ಪ್ರತಿದಾಳಿ ನಡೆಸಿದರು. ಇದರಿಂದ ಪರಸ್ಪರರ ನಡುವೆ ಗುಂಡಿನ ಚಕಮಕಿಯ ಸನ್ನಿವೇಶ ನಿರ್ಮಾಣವಾಗಿತ್ತು, ಭದ್ರತಾ ಪಡೆಗಳು ಅವರೊಂದಿಗೆ ಸೆಣಸಾಡಿ ಕೊನೆಗೂ ಆ ಉಗ್ರರನ್ನು ಎನ್‌ಕೌಂಟರ್‌ ಮಾಡುವಲ್ಲಿ ಯಶಸ್ವಿಯಾಗಿವೆ.

ಪಹಲ್ಗಾಮ್‌ ದಾಳಿಕೋರರೆ ಎನ್ನುವ ಶಂಕೆ..!

ಇನ್ನೂ ಪ್ರಮುಖವಾಗಗಿ ಕಳೆದ ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ‌ ಎನ್‌ಕೌಂಟರ್‌ಗೆ ಬಲಿಯಾಗಿರುವ ಉಗ್ರರು ಪ್ರಮುಖ ಪಾತ್ರ ವಹಿಸಿದ್ದಾರೆಂದು ಶಂಕಿಸಲಾಗಿದೆ. ಈ ಮೂವರು ಪಾಕಿಸ್ತಾನಿ ಭಯೋತ್ಪಾದಕರಾಗಿದ್ದರು ಆದಿಲ್ ಹುಸೇನ್ ಥೋಕರ್, ಅಲಿ ಭಾಯ್ ಮತ್ತು ಹಾಶಿಮ್ ಮೂಸಾ ಪೋಸ್ಟರ್‌ಗಳನ್ನು ಭದ್ರತಾ ಪಡೆಗಳು ಪೋಸ್ಟ್ ಮಾಡಿದ ಬೆನ್ನಲ್ಲೇ ಈ ಎನ್‌ಕೌಂಟರ್‌ ನಡೆಸಿದೆ. ಅಲ್ಲದೆ ಶಂಕಿತ ಉಗ್ರರ ಭಾವಚಿತ್ರಗಳನ್ನು ಬಿಡುಗಡೆ ಮಾಡಿರುವ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಉಗ್ರರ ಸುಳಿವು ನೀಡಿದವರಿಗೆ 20 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಅಲ್ಲದೆ ಮಾಹಿತಿ ನೀಡುವವರ ಗೌಪ್ಯತೆಯನ್ನು ಕಾಪಾಡಲಾಗುವುದು ಎಂದು ತಿಳಿಸಿದ್ದಾರೆ. ಭಯೋತ್ಪಾದಕ ದಾಳಿಗೆ ಕಾರಣರಾದವರ ಬಗ್ಗೆ ವಿಶ್ವಾಸಾರ್ಹ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸುವ ಪೋಸ್ಟರ್‌ಗಳು ಪುಲ್ವಾಮಾ ಜಿಲ್ಲೆಯಾದ್ಯಂತ ಕಾಣಿಸಿಕೊಂಡಿವೆ.

ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಿದ್ದರು, ಈ ವೇಳೆ ಭಯೋತ್ಪಾದಕರನ್ನು ಮಟ್ಟ ಹಾಕಲು ನಮ್ಮ ಸೇನೆಗೆ ಪರಮಾಧಿಕಾರ ನೀಡಿದ್ದೇವೆ. ಅದರಂತೆ ನಮ್ಮ ಸೇನೆಗಳು ಭಯೋತ್ಪಾದನೆಯ ವಿರುದ್ಧ ತಮ್ಮ ದಿಟ್ಟ ನಿಲುವನ್ನು ತೋರಲಿವೆ. ಆಪರೇಷನ್‌ ಸಿಂಧೂರ್‌ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿರುವ ಭಾರತೀಯ ಸೇನೆಯ ಮೂರು ಪಡೆಗಳಿಗೂ ಮೋದಿ ಧನ್ಯವಾದಗಳನ್ನು ಸಲ್ಲಸುವುದರ ಜೊತೆಗೆ ಸೇನೆಯ ಕಾರ್ಯವನ್ನು ಶ್ಲಾಘಿಸಿದ್ದರು. ಇದಾದ ಒಂದೇ ದಿನದಲ್ಲಿ ಇದೀಗ ಸೇನಾ ಪಡೆಗಳು ಉಗ್ರರ ಹೆಡೆಮುರಿ ಕಟ್ಟುವಲ್ಲಿ ಕಾರ್ಯಪ್ರವೃತ್ತವಾಗಿವೆ.

- Advertisement -

Latest Posts

Don't Miss