Wednesday, September 11, 2024

Latest Posts

ಕೆಜಿಎಫ್-2 ಸಿನಿಮಾ ನಂತರ ನೀಲ್ ನಕ್ಷೆಯಲ್ಲಿ ಸಲಾರ್..! ಒಂದೇ ಒಂದು ಸೀನ್‌ಗಾಗಿ 20 ಕೋಟಿ ಖರ್ಚು..!

- Advertisement -

ವಿಶ್ವದಾದ್ಯಂತ ಸದ್ದು ಮಾಡುತ್ತಿರೋ ಕನ್ನಡದ ಕೆಜಿಎಫ್ ಚಾಪ್ಟರ್-2 ಸಿನಿಮಾ ಸದ್ಯ ಭಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ಗಳಿಸುವತ್ತ ಮುನ್ನುಗ್ತಿದೆ. ಈ ಸಂಭ್ರಮದ ಸಕ್ಸಸ್ ಅಲೆಯಲ್ಲಿರೋ ಕೆಜಿಎಫ್ ಚಿತ್ರತಂಡ ಪಾರ್ಟ್-3ಗಾಗಿ ಸಜ್ಜಾಗ್ತಿದೆ. ಈ ಮಧ್ಯೆ ಕೆಜಿಎಫ್ ಕ್ಯಾಪ್ಟನ್ ಪ್ರಶಾಂತ್ ನೀಲ್ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಬಿಗ್ ನ್ಯೂಸನ್ನ ಕೊಟ್ಟಿದ್ದಾರೆ.

ನಿಮಗೆಲ್ಲಾ ಗೊತ್ತಿರೋ ಹಾಗೆ ಕೆಜಿಎಫ್-2 ರಿಲೀಸ್‌ಗೂ ಮೊದಲು ನೀಲ್ ನಕ್ಷೆಯಲ್ಲಿ ಪ್ರಭಾಸ್ ನಟನೆಯ ಸಲಾರ್‌ಗೆ ಡೈರೆಕ್ಷನ್ ಹೇಳಲು ಶುರುಮಾಡಿದ್ರು. ಈಗಾಗಲೇ ಮೂರು ಶೆಡ್ಯೂಲ್ ಶೂಟಿಂಗನ್ನ ಕಂಪ್ಲೀಟ್ ಮಾಡಿರೋ ಚಿತ್ರತಂಡ, ಶುರುವಿನಲ್ಲೇ ಆಕ್ಷನ್ ಭಾಗವನ್ನ ಕಂಪ್ಲೀಟ್ ಮಾಡಿಬಿಟ್ಟಿದ್ದಾರೆ. ಕೋವಿಡ್ ಕಾರಣದಿಂದಾಗಿ ಸಲಾರ್ ಸಿನಿಮಾದ ಶೂಟಿಂಗ್ ನಿಲ್ಲಿಸಿರುವ ಅವರು, ಮೇ ತಿಂಗಳಿಂದ ಮತ್ತೆ ಚಿತ್ರೀಕರಣ ಪ್ರಾರಂಭಿಸಲಿದ್ದಾರೆ.

ಕೆಜಿಎಫ್-2 ಸಕ್ಸಸ್ ಸಂಭ್ರಮದ ಮಧ್ಯೆ ಸಲಾರ್ ಸಿನಿಮಾದ ಬಿಗ್ ಅಪ್ಡೇಟ್ ಒಂದನ್ನ ನೀಡಿದ್ದಾರೆ ನೀಲ್.ಎರಡನೇ ಹಂತದ ಚಿತ್ರೀಕರಣದಲ್ಲಿ ಭಾರೀ ಬಜೆಟ್ ಬೇಡುವಂತಹ ದೃಶ್ಯಗಳನ್ನು ಸೆರೆ ಹಿಡಿಯಲಿದ್ದಾರಂತೆ ಪ್ರಶಾಂತ್ ನೀಲ್. ಒಂದು ದೃಶ್ಯಕ್ಕೇ ಅಂದಾಜು 20 ಕೋಟಿ ರೂಪಾಯಿ ಖರ್ಚು ಮಾಡಲಿದ್ದಾರೆ ಎನ್ನುವ ಅಚ್ಚರಿ ಸುದ್ದಿ ಕೂಡ ಇದೆ. ನೂರಾರು ಕೋಟಿ ಬಜೆಟ್ ಸಿನಿಮಾದಲ್ಲಿ 20 ಕೋಟಿ ಏನೂ ಅಲ್ಲದಿದ್ದರೂ, ಇದೇ ಮೊದಲ ಬಾರಿಗೆ ಈ ಪ್ರಮಾಣದ ಬಜೆಟ್ ಅನ್ನು ಒಂದೇ ಒಂದು ದೃಶ್ಯ ಬೇಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಹೊಂಬಾಳೆ ಸಂಸ್ಥೆಯೇ ಈ ಸಿನಿಮಾವನ್ನೂ ನಿರ್ಮಾಣ ಮಾಡುತ್ತಿದ್ದು, ದೊಡ್ಡ ಮಟ್ಟದಲ್ಲಿ ಬಂಡವಾಳ ಹೂಡುತ್ತಿದ್ದಾರೆ.

ರಾಧೆ ಶ್ಯಾಮ್ ಸಿನಿಮಾದ ಸೋಲಿನ ನೋವಿನಲ್ಲಿರುವ ಪ್ರಭಾಸ್ ಅವರಿಗೆ ಸಲಾರ್ ಕೈ ಹಿಡಿಯಬೇಕಿದೆ. ಆ ನಂಬಿಕೆ ಕೂಡ ಅವರಿಗಿದೆ. ಕೆಜಿಎಫ್ 2 ಸಿನಿಮಾದಿಂದಾಗಿ ಪ್ರಶಾಂತ್ ನೀಲ್ ಅವರಿಗೂ ಒಂದು ಮಾರ್ಕೆಟ್ ಕ್ರಿಯೇಟ್ ಆಗಿದೆ. ಈ ಎಲ್ಲ ಕಾರಣಗಳಿಂದಾಗಿ ಸಲಾರ್ ಮತ್ತೊಂದು ಮಹತ್ವದ ಚಿತ್ರವಾಗಲಿದೆ.

ಇದೇ ವರ್ಷವೇ ಚಿತ್ರವನ್ನು ತೆರೆಗೆ ತರುವ ಪ್ಲ್ಯಾನ್ ಕೂಡ ಆಗಿದೆಯಂತೆ. ಈ ಕಾರಣಕ್ಕಾಗಿಯೇ ಪ್ರಭಾಸ್ ಮತ್ತೊಂದು ಸಿನಿಮಾ ಒಪ್ಪಿಕೊಂಡಿಲ್ಲ .ಕೆಜಿಎಫ್ 2 ಸಿನಿಮಾದಿಂದಾಗಿ ಪ್ರಶಾಂತ್ ನೀಲ್ ಅವರಿಗೂ ಒಂದು ಮಾರ್ಕೆಟ್ ಕ್ರಿಯೇಟ್ ಆಗಿದೆ. ಈ ಎಲ್ಲ ಕಾರಣಗಳಿಂದಾಗಿ ಸಲಾರ್ ಸಿನಿಮಾ ಮೇಲೆ ಪ್ರತಿಯೊಬ್ಬ ಸಿನಿಪ್ರೇಮಿಗೂ ಹೆಚ್ಚು ಕುತೂಹಲ ಹುಟ್ಟಿಸಿದೆ.

ನಳಿನಾಕ್ಷಿ, ಕರ್ನಾಟಕ ಟಿವಿ

https://www.youtube.com/c/KarnatakaTV123/videos

 

- Advertisement -

Latest Posts

Don't Miss