ನವದೆಹಲಿ : ಇಂದು ದಿಢೀರ್ ಎಐಸಿಸಿ ರಾಜ್ಯ ಕಾಂಗ್ರೆಸ್ ಮೇಲೆ ಸಮರ ಸಾರಿದೆ. ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರನ್ನ ಹೊರತುಪಡಿಸಿ ಎಲ್ಲರನ್ನ ತತಕ್ಷಣದಿಂದಲೇ ವಜಾ ಮಾಡಿ ಆದೇಶ ಹೊರಡಿಸಿದೆ.. ದೆಹಲಿಗೆ ತೆರಳಿ ರಾಜ್ಯದಲ್ಲಿ ದೋಸ್ತಿ ಮುರಿದುಕೊಂಡು ಕಾಂಗ್ರೆಸ್ ಉಳಿಸಿ ಇಲ್ಲವೇ ಮುಂದೆ ಸರ್ಕಾರ ಪತನವಾದ್ರೆ ನಾನು ಹೊಣೆಯಲ್ಲ ಅಂತ ಸಿದ್ದರಾಮಯ್ಯ ಎ.ಕೆ ಆ್ಯಂಟನಿಗೆ ಹೇಳಿದ ಬೆನ್ನಲ್ಲೆ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಇತ್ತ ಡಿಕೆಶಿ ದೆಹಲಿಯಲ್ಲಿ ರಾಹುಲ್ ಗಾಂಧಿಗೆ ಹುಟ್ಟುಹಬ್ಬದ ಶುಭಕೋರಿದ ಮರುಕ್ಷಣವೇ ಈ ಆದೇಶ ಹೊರ ಬಿದ್ದಿದರ. ಕೆಪಿಸಿಸಿ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿದ್ದ ಡಿಕೆಶಿಗೆ ದಿನೇಶ್ ಗುಂಡೂರಾವ್ ಮುಂದುವರೆಸುವ ಮೂಲಕ ಶಾಕ್ ನೀಡಿದ್ದಾರೆ.
ಭಿನ್ನಮತೀಯ ಕಾಂಗ್ರೆಸ್ ಶಾಸಕರಿಗೆ ಪರೋಕ್ಷ ಎಚ್ಚರಿಕೆ..!
ಇನ್ನು ದೋಸ್ತಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ ಬುಸುಗುಡುತ್ತಿರುವ ನಾಯಕರಿಗೆ ಇದು ಎಚ್ಚರಿಕೆ ಗಂಟೆಯಾಗಿದೆ. ಪಕ್ಷದಲ್ಲಿ ಇದ್ದರೆ ಇರಬಹುದು ಹೋದರೆ ಹೋಗಬಹುದು ಅನ್ನೋ ಸಂದೇಶವನ್ನ ಭಿನ್ನಮತೀಯರಿಗೆ ಈ ಮೂಲಕ ಹೈಕಮಾಂಡ್ ರವಾನಿಸಿದೆ. ನಿನ್ನೆ ರೋಷನ್ ಬೇಗ್ ಗೆ ಸಸ್ಪೆಂಡ್ ಶಿಕ್ಷೆ ನೀಡಿರುವ ಎಐಸಿಸಿ ಇದೀಗ ರಮೇಶ್ ಜಾರಕಿಹೊಳಿ ಮೇಲೆ ಯಾವ ಕ್ರಮಕೈಗೊಳ್ತಾರೆ ಕಾದು ನೋಡಬೇಕಿದೆ.
ಪೊಲಿಟಿಕಲ್ ಬ್ಯೂರೋ, ಕರ್ನಾಟಕ ಟಿವಿ
ಕುಮಾರಸ್ವಾಮಿ ಗೆ ಆಪ್ತರಿಂದಲೇ ತೊಂದರೆ..!