Friday, December 13, 2024

Latest Posts

ಪಾಕಿಸ್ತಾನದ ಪ್ರಧಾನಿ ಅಂತಾರಾಷ್ಟ್ರೀಯ ಬಿಕ್ಷುಕ; ಜಮಾಯತ್ ಮುಖ್ಯಸ್ಥ

- Advertisement -

ಪಾಕಿಸ್ತಾನದ ಸದ್ಯದ ಪರಿಸ್ಥಿತಿ ಹದಗೆಟ್ಟಿದೆ. ಆರ್ಥಿಕತೆಯಲ್ಲಿ ತುಂಬಾ ಹೊಡೆತ ಬಿದ್ದಿದೆಈಗಿರುವಾಗ ಜಮಾತ್ ಎ ಇಸ್ಲಾಮಿ ಪಾಕಿಸ್ತಾನದ ನೂತನ ಅರ್ಥಶಾಸ್ತ್ರಜ್ಞ ಜನಾಬ್ ಇಮ್ರಾನ್‌ಖಾನ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಕಿಸ್ತಾನದ ಆರ್ಥಿಕ ಸಮಸ್ಯೆಗಳು ಶೋಚನೀಯವಾಗಿವೆ. ಮತ್ತು ಬೆಟ್ಟದಷ್ಟು ಹದಗೆಟ್ಟಿದೆ ಈಗಾಗಿ ಪ್ರಧಾನಿ ಇಮ್ರಾನ್ ಖಾನ್ ಅಂತಾರಾಷ್ಟ್ರೀಯ ಭಿಕ್ಷುಕ ಎಂದು ಜರಿದಿದ್ದಾರೆ, ಅಷ್ಟೇ ಅಲ್ಲದೆ ಆತ ಪ್ರಧಾನಿ ಹುದ್ದೆಯಿಂದ ತೊಲಗಿದರೆ ಮಾತ್ರ ಈ ಸಮಸ್ಯೆಗಳಿಗೆಲ್ಲ ಪರಿಹಾರ ದೊರಕುವುದು ಎಂದು ಜಮಾಯತ್ ಮುಖ್ಯಸ್ತ ವ್ಯಾಖ್ಯಾನಿಸಿದ್ದಾರೆ.
ಲಾಹೋರ್‌ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾರ್ಯದಲ್ಲಿ ತೊಡಗಿರುವ ಜಮಾಯತ್ ಮುಖ್ಯಸ್ಥ ಸಿರಾಜುಲ್ ಹಕ್ ಪಾಕಿಸ್ತಾನದ ಸಮಸ್ಯೆಗಳೆಲ್ಲ ಪರಿಹಾರವಾಗಬೇಕಾದರೆ ಇಮ್ರಾನ್ ಖಾನ್ ನಿರ್ಗಮನವೊಂದೇ ದಾರಿ ಎಂದಿದ್ದಾರೆ.

- Advertisement -

Latest Posts

Don't Miss