Wednesday, September 11, 2024

Latest Posts

ಬಾದಾಮಿಯಲ್ಲಿ ಯೋಗರಾಜ್ ಭಟ್ಟರ “ಗರಡಿ”

- Advertisement -

 

ಸೂರ್ಯ – ಸೋನಾಲ್ ಮಾಂಟೆರೊ ನಾಯಕ, ನಾಯಕಿಯಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕೌರವ ಬಿ.ಸಿ.ಪಾಟೀಲ್ . ಯೋಗರಾಜ್ ಭಟ್ ನಿರ್ದೇಶನದ, ವನಜಾ ಪಾಟೀಲ್ ನಿರ್ಮಾಣದ “ಗರಡಿ” ಚಿತ್ರದ ಚಿತ್ರೀಕರಣ ಕನ್ನಡ ನಾಡಿನ ಐತಿಹಾಸಿಕ ತಾಣ ಬಾದಾಮಿಯಲ್ಲಿ ನಡೆದಿದೆ. ಸೃಷ್ಟಿ ಪಾಟೀಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ಈ ಸುಂದರ ತಾಣದಲ್ಲಿ “ಗರಡಿ” ಚಿತ್ರದ ಟೈಟಲ್ ಸಾಂಗ್ ಅದ್ದೂರಿಯಾಗಿ ಚಿತ್ರೀಕರಣಗೊಂಡಿದೆ. ಕರ್ನಾಟಕ ರಾಜ್ಯದ ಮಂತ್ರಿಗಳು, ನಟರು, ನಿರ್ಮಾಪಕರೂ ಆಗಿರುವ ಕೌರವ ಬಿ.ಸಿ.ಪಾಟೀಲ್ ಈ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಗರಡಿ ಮನೆಯಲ್ಲಿ ತರಭೇತಿ ಪಡೆದಿರುವ ಸಾಕಷ್ಟು ಕುಸ್ತಿಪಟುಗಳು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಬರೀ ಹಾಡಿನ ಚಿತ್ರೀಕರಣವಷ್ಟೇ ಅಲ್ಲದೇ ನಾಯಕ ಸೂರ್ಯ, ನಾಯಕಿ ಸೋನಾಲ್ ಮಾಂಟೆರೊ, ಕೌರವ ಬಿ‌.ಸಿ.ಪಾಟೀಲ್ ಮುಂತಾದವರ ಅಭಿನಯದಲ್ಲಿ ಮಾತಿನ ಭಾಗದ ಚಿತ್ರೀಕರಣ ಸಹ ನಡೆದಿದೆ.
ಕನ್ನಡ ಚಿತ್ರರಂಗದ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಈ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಹಳ ದಿನಗಳ ನಂತರ ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ.

ವಿ.ಹರಿಕೃಷ್ಣ ಅವರ ಸುಮಧುರ ಸಂಗೀತ, ನಿರಂಜನ್ ಬಾಬು ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ಸೂರ್ಯ, ಸೋನಾಲ್ ಮಾಂಟೆರೊ, ಕೌರವ ಬಿ.ಸಿ.ಪಾಟೀಲ್, ರವಿಶಂಕರ್, ಎಸ್.ಟಿ.ಸೋಮಶೇಖರ್, ಬಲ ರಾಜವಾಡಿ, ಚೆಲುವರಾಜು, ರಾಘವೇಂದ್ರ, ಸೂರಜ್ ಬೇಲೂರ್, ಕಾಮಿಡಿ ಕಿಲಾಡಿಗಳು ನಯನ, ತ್ರಿವೇಣಿ(ಟಗರು), ರವಿಚೇತನ್, ತೇಜಸ್ವಿನಿ ಪ್ರಕಾಶ್ ಮುಂತಾದವರು “ಗರಡಿ” ಚಿತ್ರದ ತಾರಾಬಳಗದಲ್ಲಿದ್ದಾರೆ.

- Advertisement -

Latest Posts

Don't Miss