ಕ್ರೀಡೆ : ವಿಶ್ವಕ್ಕೆ ವಿಶ್ವವೇ ಇಂದು ಅಂತರಾಷ್ಟ್ರೀಯ ಯೋಗ ದಿನವನ್ನ ಆಚರಿಸುತ್ತಿದೆ. ಹಲವಾರು ಸಂಘ ಸಂಸ್ಥೆಗಳು ಸೇರಿದಂತೆ, ನೂರಾರು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಯೋಗ ದಿನಾಚರಣೆಯಲ್ಲಿ ಭಾಗಿಯಾಗಿಯಾಗಿದ್ದಾರೆ. ಈ ನಡುವೆ ಚೆನ್ನೈನ ಶಾಲೆಯೊಂದರ ಮಕ್ಕಳು, ಯೋಗ ಮಾಡುತ್ತಾಲೇ ಟೀಮ್ ಇಂಡಿಯಾಕ್ಕೆ ಶುಭ ಕೋರಿದ್ದಾರೆ. ಹೌದು ಚೆನ್ನೈ ನ ಶಾಲಾ ಮಕ್ಕಳು ವಿಶ್ವಕಪ್ ಪ್ರತಿಕೃತಿಯ ರೀತಿಯಲ್ಲಿ ಕುಳಿತು ಯೋಗ ಮಾಡಿದ್ದಾರೆ. ಈ ಮೂಲಕ ಇಂಗ್ಲೆಂಡ್ ನಲ್ಲಿ ಪ್ರತಿಷ್ಠಿತ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿರುವ ಟೀಮ್ ಇಂಡಿಯಾಕ್ಕೆ ಗೆದ್ದು ಬಾ ಅಂತ ಹಾರೈಸಿದ್ದಾರೆ.
ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಇಂಗ್ಲೆಂಡ್ ಗೆ ತೆರಳಿರುವ ಭಾರತ ಕ್ರಿಕೆಟ್ ತಂಡ, ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಇದುವರೆಗೂ ಭಾರತದ ನಾಲ್ಕು ಪಂದ್ಯಗಳು ಮುಗಿದಿದ್ದು, 7 ಪಾಯಿಂಟ್ ಗಳಿಸಿ ಉತ್ತಮ ಸ್ಥಿತಿಯಲ್ಲಿದೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು ದಾಖಲಿಸುವ ಮೂಲಕ ಪ್ರತಿ ಪಂದ್ಯದಲ್ಲೂ ಎರಡು ಅಂಕಗಳನ್ನ ತನ್ನ ಜೇಬಿಗಿಳಿಸಿಕೊಂಡಿದ್ದ ಕೊಹ್ಲಿ ಪಡೆ. ನ್ಯೂಜಿಲೆಂಡ್ ಎದುರಿನ ಪಂದ್ಯ ಮಳೆಯಿಂದ ರದ್ದಾದ ಕಾರಣ ಒಂದು ಅಂಕವನ್ನಷ್ಟೇ ಪಡೆದಿತ್ತು..
ನಂದನ್, ಸ್ಪೋರ್ಟ್ಸ್ ಬ್ಯೂರೋ, ಕರ್ನಾಟಕ ಟಿವಿ
ವಿರಾಟ್, ಧೋನಿ ಸೇರಿದಂತೆ ಇಂಡಿಯನ್ ಟೀಂ ಗೇರ್ ಸ್ಟೈಲ್ ಹೇಗಿದೆ ಗೊತ್ತಾ..?