Sunday, September 15, 2024

Latest Posts

‘ಸರ್ಕಾರ ಎಷ್ಟ್ ದಿನ ಇರುತ್ತೋ ಗೊತ್ತಿಲ್ಲ’- ರಾಜ್ಯದಲ್ಲಿ ಮತ್ತೆ ಎಲೆಕ್ಷನ್ ಡೌಟೇ ಇಲ್ಲ- ಎಚ್ಡಿಡಿ ಹೊಸ ಬಾಂಬ್..!

- Advertisement -

ಬೆಂಗಳೂರು: ಮೈತ್ರಿ ಸರ್ಕಾರ ಯಾವಾಗ ಬೇಕಾದ್ರೂ ಪತನವಾಗ್ಬಹುದು ಅನ್ನೋ ಸುಳಿವನ್ನು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ನೀಡಿದ್ದು, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯೋದ್ರಲ್ಲಿ ಯಾವುದೇ ಸಂಶಯವಿಲ್ಲ ಅನ್ನೋ ಬಗ್ಗೆ ಸುಳಿವು ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ದೇವೇಗೌಡರು, ಯಡಿಯೂರಪ್ಪ ಸಿಎಂ ಆಗಬಾರದು ಅಂತ ಯಾವುದೇ ಪರಿಣಾಮದ ಬಗ್ಗೆ ಯೋಜಿಸದೆ ಮೈತ್ರಿ ಮಾಡಿಕೊಂಡ್ರು. ಕುಮಾರಸ್ವಾಮಿಯವರನ್ನೇ ಸಿಎಂ ಮಾಡಿ ಅಂದ್ರು. ಈಗ ಮೆಜಾರಿಟಿ ಎಲ್ಲಾ ಲೆಕ್ಕಕ್ಕೇ ಇಲ್ಲ. ನಮ್ಮ ಬಳಿಯಿದ್ದ ಒಂದು ಸಚಿವ ಸ್ಥಾನವನ್ನೂ ಸರಂಡರ್ ಮಾಡಿದ್ವಿ. ಸರ್ಕಾರ ಎದೆಷ್ಟು ದಿನ ಇರುತ್ತೋ ಗೊತ್ತಿಲ್ಲ. ಎಲ್ಲಾ ಕಾಂಗ್ರೆಸ್ ಕೈಯಲ್ಲಿದೆ ಅಂತ ದೇವೇಗೌಡರು ತಮ್ಮ ಅಸಹಾಯಕತೆಯನ್ನು ತೋಡಿಕೊಳ್ಳೋ ಮೂಲಕ ರಾಜ್ಯದಲ್ಲಿ ಮತ್ತೆ ಚುನಾವಣೆ ನಡೆಯೋ ಬಗ್ಗೆ ಸುಳಿವು ನೀಡಿದ್ರು. ಇನ್ನು ಮೈಸೂರಿಗೋಸ್ಕರ ನಾವು ತುಮಕೂರು ಕೇಳದಿದ್ದರೂ ಕೊಟ್ಟರು. ಎಲ್ಲವನ್ನೂ ಸಹಿಸಿಕೊಂಡು ಹೋಗ್ತಿದ್ದೇನೆ ಅಂತ ಮೈತ್ರಿ ವಿರುದ್ಧ ದೇವೇಗೌಡರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ರು.

ಅಲ್ಲದೆ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿದ್ದೇ ಸೋಲಿಗೆ ಕಾರಣ ಅಂತ ಎನಿಸಿದ್ರೆ ಅದನ್ನ ಬಹಿರಂಗವಾಗಿಯೇ ಹೇಳಲಿ. ನಾನು ಖರ್ಗೆಯವರನ್ನು ಸಿಎಂ ಮಾಡಿ ಎಂದಿದ್ದೆ ಆದ್ರೆ ಅವರು ಕುಮಾರಸ್ವಾಮಿಯವರನ್ನು ಮಾಡಿದ್ರು.

ಮೈತ್ರಿ ಸರ್ಕಾರದ ಬಗ್ಗೆ ರಾಹುಲ್ ಗೆ ಸಿದ್ದರಾಮಯ್ಯ ಹೇಳಿದ ಸೀಕ್ರೆಟ್ ಏನ್ ಗೊತ್ತಾ…?ಮಿಸ್ ಮಾಡದೇ ಈ ವಿಡಿಯೋ ನೋಡಿ

- Advertisement -

Latest Posts

Don't Miss