ಚಾಂಗ್ವಾನ್ (ದ.ಕೊರಿಯಾ): ಭಾರತದ ಮಹಿಳಾ ಶೂಟರ್ ಅಂಜುಮ್ ಮೌದ್ಗಿಲ್ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಮಹಿಳೆಯರ 50 ಮೀ. ರೈಫಲ್ ಮೂರರ ವಿಭಾಗದ ಅಂತಿಮ ಸುತ್ತಿನಲ್ಲಿ ಭಾರತದ ಅಂಜುಮ್ ಮೌದ್ಗಿಲ್ 402.9 ಅಂಕಗಳಿಸಿದರು. ಜರ್ಮನಿಯ ಅನ್ನಾ ಜೆನ್ನಸನ್ 407.7 ಅಂಕ ಹಾಗೂ ಇಟಲಿಯ ಬಾರ್ಬಾರಾ ಗಾಂಬಾರೊ 403. 4ಅಂಕ ಪಡೆದು ಕ್ರಮವಾಗಿ ಬೆಳ್ಳಿ ಮತ್ತು ಚಿನ್ನ ಗೆದ್ದರು.
ಇನ್ನು ಪುರುಷರ 3ಪಿ ವಿಭಾಗದಲ್ಲಿ ಭಾರತದ ಸಂಜೀವ್ ರಜಪೂತ್, ಚೈನ್ ಸಿಂಗ್ ಮತ್ತು ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್ ಬೆಳ್ಳಿ ಪದಕ ಗೆದ್ದರು.
ಭಾರತ ಒಟ್ಟು 4 ಚಿನ್ನ 5 ಬೆಳ್ಳಿ ಹಾಗೂ 2 ಕಂಚಿನಪದಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುಂದುವರೆದಿದೆ.




