ಮತ್ತೆ ಬ್ಯಾಟ್ ಹಿಡಿದ ಯುವರಾಜ್ ಸಿಂಗ್..! ಇದೇಗೆ ಅಂತೀರಾ..? ಇಲ್ಲಿ ಕ್ಲಿಕ್ ಮಾಡಿ ಗೊತ್ತಾಗುತ್ತೆ
ಕ್ರೀಡೆ : ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಲೆಕ್ಕವಿಲ್ಲದಷ್ಟು ಕ್ರಿಕೆಟಿಗರು ಭಾಗವಹಿಸಿದ್ದಾರೆ. ಮೇಲ್ನೋಟಕ್ಕೆ ನೋಡುವುದಾದರೆ, ನಮ್ಮ ಕಣ್ಣಿಗೆ ಬೀಳೊದು ವರ್ಲ್ಡ್ ಕಪ್ ನಲ್ಲಿ ಭಾಗವಹಿಸಿರುವ ಹತ್ತು ತಂಡಗಳ ಆಟಗಾರರು ಮತ್ತು ತಂಡದ ಸಿಬ್ಬಂದಿಗಳು ಮಾತ್ರ. ಆದ್ರೆ ಹಾಲಿ- ಮಾಜಿ ಎನ್ನದೇ, ಸಾಕಷ್ಟು ಜನ ಕ್ರಿಕೆಟಿಗರು ವಿಶ್ವಕಪ್ ನ ಭಾಗವಾಗಿದ್ದಾರೆ. ಅದರಲ್ಲೂ ಮಾಜಿ ಕ್ರಿಕೆಟಿಗರಂತೂ, ಟಿವಿ ಕಾಮೆಂಟೆಟರ್ ಆಗಿಯೋ ಅಥವಾ ನಿರೂಪಕರಾಗಿಯೋ ಒಂದಲ್ಲ ಒಂದು ರೀತಿಯಲ್ಲಿ ವಿಶ್ವಕಪ್ ಟೂರ್ನಿಯ ಭಾಗವಾಗಿದ್ದಾರೆ. ಆದರೆ ಆ ಒಬ್ಬ ಮಾಜಿ ಸ್ಟಾರ್ ಆಟಗಾರ ಮಾತ್ರ, ಕ್ರಿಕೆಟಿಗೂ ತನಗೂ ಯಾವುದೇ ಸಂಬಂಧ ಇಲ್ಲವೇನೋ ಅನ್ನೋ ರೀತಿ ಇದ್ದಾರೆ.
ಫ್ಯಾಮಿಲಿ ಫಸ್ಟ್ ಕ್ರಿಕೆಟ್ ನೆಕ್ಸ್ಟ್..!
ಹೌದು.. ವಿಶ್ವಕ್ಕೆ ವಿಶ್ವವೇ, ಪ್ರತಿಷ್ಠಿತ ಏಕದಿನ ವರ್ಲ್ಡ್ ಕಪ್ ನತ್ತ ಮುಖ ಮಾಡಿದೆ. ಆದರೆ ಇವರು ಮಾತ್ರ ತಾನಾಯ್ತು ತನ್ನ ಕುಟುಂಬವಾಯ್ತು ಅಂತ ತನ್ನ ಫ್ಯಾಮಿಲಿ ಜೊತೆ ಸುಂದರ ಕ್ಷಣಕ್ಷಣಗಳನ್ನ ಕಳೆಯುತ್ತಿದ್ದಾರೆ. ಯಸ್.. ಕ್ರಿಕೆಟ್ ಜಗತ್ತಿನಲ್ಲಿ ಮಿ. 360 ಅಂತಾನೇ ಫೇಮಸ್ ಆಗಿರುವ ಎಬಿ ಡಿವಿಲಿಯರ್ಸ್, ವೃತ್ತಿಪರ ಕ್ರಿಕೆಟ್ ಗೆ ಗುಡ್ ಬೈ ಹೇಳಿ, ಒಂದು ವರ್ಷವೇ ಕಳೆದಿದೆ. ನಿವೃತ್ತಿ ನಂತರ ಐಪಿಎಲ್ ಸೇರಿದಂತೆ ಲೀಗ್ ಗಳಲ್ಲಿ ಎಬಿಡಿ ಮಿಂಚು ಹರಿಸುತ್ತಿದ್ದಾರೆ. ಈ ನಡುವೆ ವಿಶ್ವಕಪ್ ಕಪ್ ಟೂರ್ನಿ ನಡೆಯುತ್ತಿರುವ ಇಂಗ್ಲೆಂಡ್ ನತ್ತ ಮಾತ್ರ ತಿರುಗಿಯೂ ನೋಡಿಲ್ಲ. ಬದಲಾಗಿ ಕುಟುಂಬದ ಜೊತೆ ರೆಸಾರ್ಟ್ ಒಂದಕ್ಕೆ ಭೇಟಿ ನೀಡಿ ಮಕ್ಕಳೊಂದಿಗೆ ಕಾಲ ಕಳೆಯುತ್ತಿದ್ದಾರೆ.
ಕುಟುಂಬದ ಜೊತೆ ಸನ್ ಸಿಟಿ ಎಂಬ ರೆಸಾರ್ಟ್ ಗೆ ತೆರಳಿರುವ ಎಬಿಡಿ, ಇನ್ ಸ್ಟಗ್ರಾಮ್ ನಲ್ಲಿ ಫೋಟೋ ಗಳನ್ನ ಪೋಸ್ಟ್ ಮಾಡಿದ್ದು, “ನನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸುಂದರ ಸಮಯವನ್ನು ಕಳೆಯುತ್ತಿದ್ದೇನೆ. ನನ್ನ ಹೃದಯದಲ್ಲಿ ಸನ್ ಸಿಟಿ ವಿಶೇಷ ಸ್ಥಾನವನ್ನ ಪಡೆದುಕೊಂಡಿದೆ ಅಂತ ಬರೆದುಕೊಂಡಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಸಚಿನ್, ಧೋನಿ, ನಂತರ ಅತಿಹೆಚ್ಚು ಅಭಿಮಾನಿಗಳನ್ನ ಹೊಂದಿರುವ ಎಬಿಡಿ, ಕನ್ನಡಿಗರಿಗೂ ಅಚ್ಚುಮೆಚ್ಚು. ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ ಪ್ರತಿನಿಧಿಸುವ ಮಿ. 360, ಕರ್ನಾಟಕ ದಲ್ಲೂ ಸಾಕಷ್ಟು ಅಭಿಮಾನಿಗಳನ್ನ ಹೊಂದಿದ್ದಾರೆ.
ನಂದನ್, ಸ್ಪೋರ್ಟ್ಸ್ ಬ್ಯೂರೋ, ಕರ್ನಾಟಕ ಟಿವಿ
ನಮ್ಮ ಕ್ರಿಕೆಟಿಗರ ಹೇರ್ ಸ್ಟೈಲ್ ನೋಡ್ರಪ್ಪ ಹೆಂಗಲ್ಲಾ ಐತೆ..!