ನವದೆಹಲಿ: ಲೋಕಸಭಾ ಚುನಾವಣೆಯ ವೇಳೆ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆಂಬ ಮಾಜಿ ಸಚಿವ ಎ.ಮಂಜು ಆರೋಪಕ್ಕೆ ಸಂಸದ ಪ್ರಜ್ವಲ್ ರೇವಣ್ಣ ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ನಾನು ಯಾವುದೇ ತಪ್ಪು ಮಾಡಿಲ್ಲ, ನಾನು ಯಾರಿಗೂ ಹೆದರಲ್ಲ. ನನ್ನ ಮೇಲಿನ ಆರೋಪ ಕುರಿತಾಗಿ ಎ.ಮಂಜು ನ್ಯಾಯಾಲಯಕ್ಕೆ ದೂರು ನೀಡಲಿ. ಅವರು ಮಾಡುತ್ತಿರೋದು ಸುಳ್ಳು ಆರೋಪ. ನನ್ನನ್ನು ಸುಮ್ಮನೆ ಅಪರಾಧಿಯೆಂದು ಬಿಂಬಿಸುತ್ತಿದ್ದಾರೆ. ನನ್ನ ಮೇಲೆ ಆರೋಪ ಮಾಡುತ್ತಿರೋ ಎ.ಮಂಜು ಮೊದಲು ಗಿಮಿಕ್ ರಾಜಕಾರಣ ಬಿಡಲಿ. ನನ್ನ ಹೆಸರಿಗೆ ಕಳಂಕ ತರೋದಕ್ಕೆ ಈ ಷಡ್ಯಂತ್ರ ನಡೆಸ್ತಿದ್ದಾರೆ. ನಾನು ಯಾವ ತಪ್ಪೂ ಮಾಡಿಲ್ಲ, ನಾನು ಅಪರಾಧಿಯಲ್ಲ. ಹೀಗಾಗಿ ನಾನು ಯಾರಿಗೂ ಹೆದರೋದಿಲ್ಲ ಅಂತ ಹೇಳಿದ ಪ್ರಜ್ವಲ್, ನಾನು ಅಪರಾಧಿಯೋ ಅಲ್ಲವೋ ಎಂಬುದವನ್ನು ನ್ಯಾಯಾಲಯ ಹೇಳಬೇಕು ಪ್ರತಿಕ್ರಿಯಿಸೋ ಮೂಲಕ ಎ.ಮಂಜುಗೆ ತಿರುಗೇಟು ನೀಡಿದ್ದಾರೆ.
ದೊಡ್ಡಗೌಡರ ಅಸಮಾಧಾನಕ್ಕೆ ಕಾರಣವೇನು..? ಮಿಸ್ ಮಾಡದೇ ಈ ವಿಡಿಯೋ ನೋಡಿ