ಎಲೋನ್ ಮಸ್ಕ್ ವಿಶ್ವದ ದೈತ್ಯ ಶ್ರೀಮಂತ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಕಂಪನಿಯ ಮಾಲಿಕ
ಭಾರತದಲ್ಲಿ ಟೆಸ್ಲಾ ಕಾರು ಮಾರಾಟದ ಬಗ್ಗೆ ಸುಳಿವೊಂದನ್ನು ನೀಡಿದ್ದಾರೆ. ಭಾರತದ ಟ್ವಿಟ್ಟರ್ ಬಳಕೆದಾರನೊಬ್ಬನ ಪ್ರಶ್ನೆಗೆ ಎಲೋನ್ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ. ಭಾರತದಲ್ಲಿ ಟೆಸ್ಲಾ ಕಾರುಗಳನ್ನು ಮಾರಾಟ ಮಾಡಲು ಯೋಜನೆ ಕುರಿತು ಗುರುವಾರ ತಿಳಿಸಿದ್ದಾರೆ.
ಟೆಸ್ಲಾ ಭಾರತದಲ್ಲಿ ಕಾರುಗಳನ್ನು ಮಾರಾಟ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಸರ್ಕಾರದೊಂದಿಗೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತದೆ ಎಂದಿದ್ದಾರೆ. ಎಲೋನ್ ಮಸ್ಕ್ ಟ್ವೀಟ್ ಗೆ ಸರ್ಕಾರ ಸಿಟ್ಟಿಗೆದ್ದಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಎಲೋನ್ ಮಸ್ಕ್ ಸರ್ಕಾರಕ್ಕೆ ಒತ್ತಡ ಹೇರಲು ಮುಂದಾಗಿದ್ದಾರೆ. ಟೆಸ್ಲಾ ಕಾರುಗಳ ಮೇಲಿರುವ ಆಮದು ಸುಂಕವನ್ನು ಕಡಿಮೆ ಮಾಡಲು ಈ ತಂತ್ರ ಬಳಸುತ್ತಿದ್ದಾರೆ. ಇಂತಹ ತಂತ್ರಗಳಿಗೆ ಸರ್ಕಾರ ಮಣಿಯುವುದಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಟೆಸ್ಲಾ ಕಾರು ಮಾರಾಟದ ಬಗ್ಗೆ ಸುಳಿವು ಕೊಟ್ಟ ಎಲೋನ್ ಮಸ್ಕ್(Elon musk)
- Advertisement -
- Advertisement -