Saturday, October 25, 2025

Latest Posts

ಪಂಜಾಬ್‌ನಲ್ಲಿ ನೂತನ D G P ನೇಮಕ

- Advertisement -

ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪಂಜಾಬ್‌ನಲ್ಲಿ ಉಂಟಾದ ಭದ್ರತಾಲೋಪ ಬಾರೀ ತಿರುವನ್ನು ಪಡೆದುಕೊಂಡಿದೆ. ಈ ಒಂದು ಘಟನೆಯಿಂದ ಪಂಜಾಬ್ ಸರ್ಕಾರ ಇಡೀ ದೇಶದಾದ್ಯಂತ ತಲೆತಗ್ಗಿಸಬೇಕಾಗಿದೆ. ಇತ್ತ ಚರಣ್‌ಜಿತ್ ಸಿಂಗ್ ಚನ್ನಿ ಅವರ ಅಧಿಕಾರಾವಧಿಯ ಸುಮಾರು 100 ದಿನಗಳಲ್ಲಿ ಮೂರನೇ ಬಾರಿಗೆ ಡಿಜಿಪಿಯನ್ನು ಬದಲಿಸಲಾಗಿದೆ. ಪಂಜಾಬ್‌ನ ನೂತನ ಪೊಲೀಸ್ ಮುಖ್ಯಸ್ಥರನ್ನಾಗಿ ವಿಕೆ ಭಾವ್ರಾ ಅವರನ್ನು ನೇಮಕ ಮಾಡಲಾಗಿದೆ.
ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಆ ಘಟನೆಯ ಬಗ್ಗೆ ಸುದ್ದಿಗೋಷ್ಠಿಯನ್ನು ನಡೆಸಿದ್ದರು. ಮೋದಿಯ ಭದ್ರತೆಯ ವಿಚಾರವಾಗಿ ಇತ್ತ ಪ್ರತಿಭಟನೆಗಳು ನಡೆಯುತ್ತಿದ್ದು. ಈ ಪ್ರಕರಣದ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ ಈ ಬಗ್ಗೆ ಸುಪ್ರಿಂ ಕೋರ್ಟ್ನಲ್ಲಿವಿಚಾರಣೆಯನ್ನು ಸಹ ನಡೆಸಲಾಗಿದೆ. ಇತ್ತ ಶನಿವಾರ ಹೊಸ ಡಿಜಿಪಿಯನ್ನು ನೇಮಕ ಮಾಡಲಾಗಿದೆ.
ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ಅಂತಿಮಗೊಳಿಸಿದ್ದ ಮೂರು ಅಭ್ಯರ್ಥಿಗಳ ಪಟ್ಟಿಯಲ್ಲಿ ಭಾವ್ರ ಅವರನ್ನು ಡಿಜಿಪಿಯನ್ನಾಗಿ ಆಯ್ಕೆ ಮಾಡಲಾಗಿದೆ. ನಿರ್ಗಮಿತ ಪಂಜಾಬ್ ಡಿಜಿಪಿ ಸಿದ್ದಾರ್ಥ್ ಚಟ್ಟೋಪಾಧ್ಯಾಯ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಕರೆಸಿ ಕೇಂದ್ರ ಗೃಹ ಸಚಿವಾಲಯವು ತನಿಕೆಯನ್ನು ನಡೆಸುತ್ತದೆ. ಈಗ ಹೊಸದಾಗಿ ನೇಮಕವಾಗಿರುವ ವಿ ಕೆ ಭಾವ್ರ ಕನಿಷ್ಟ ಎರಡು ವರ್ಷಗಳ ಅಧಿಕಾರವನ್ನು ನಡೆಸುತ್ತಾರೆ.

- Advertisement -

Latest Posts

Don't Miss