ಕನ್ನಡದ ಭರವಸೆಯ ಮ್ಯೂಸಿಕ್ ಸಂಸ್ಥೆ ಲಹರಿ ಮಡಿಲಿಗೆ ಮತ್ತೊಂದು ಗರಿ ಮೂಡಿದೆ. ಹೌದು, ಭಾವಗೀತೆ ಮತ್ತು ಜಾನಪದ ಗೀತೆ ಚಾನೆಲ್ ನಲ್ಲಿ ಈವರೆಗೆ ೧೧.೫೫ ಲಕ್ಷ ಸಬ್ ಸ್ಕ್ರೈಬರ್ ಇದ್ದು, ಈ ಚಾನೆಲ್ ಈಗ ಹೊಸದೊಂದು ದಾಖಲೆ ಬರೆದಿದೆ. ಆ ದಾಖಲೆ ಬೇರೇನೂ ಅಲ್ಲ,
ಲಹರಿ ಮ್ಯೂಸಿಕ್ ಸಂಸ್ಥೆಗೆ ಯುಟ್ಯೂಬ್ ಗೋಲ್ಡ್ ಅವರ‍್ಡ್ ಲಭಿಸಿದೆ.
ಶುಭ ಸೋಮವಾರ ಸಿಹಿ ಸುದ್ದಿ ಬಂದಿರೋದು ಹೆಮ್ಮೆ ಎನಿಸಿದೆ. ಕನ್ನಡದ ಸಾರಸ್ವತ ಮತ್ತು ಸಂಗೀತ ಲೋಕಕ್ಕೆ ಮತ್ತೊಂದು ಗರಿ ಮೂಡಿದೆ. ಭಾರತದಲ್ಲಿ ಸುಗಮ ಸಂಗೀತ ಕ್ಷೇತ್ರ ಮಾತ್ರ ರ‍್ನಾಟಕದಲ್ಲಿ ಹೆಮ್ಮರವಾಗಿ ಬೆಳೆದಿದ್ದು, ಮೊಟ್ಟ ಮೊದಲ ಬಾರಿಗೆ ಭಾವಗೀತೆಗಳು ಮತ್ತು ಜಾನಪದ ಗೀತೆಗಳ ವಿಭಾಗಕ್ಕೆ ಲಹರಿ ಸಂಸ್ಥೆಗೆ ಈ ಚಿನ್ನದ ಪ್ರಶಸ್ತಿ ಬಂದಿರೋದು ಬಹಳ ಹೆಮ್ಮೆ ಎನಿಸಿದೆ. ಜೊತೆಗೆ ಈ ಸುಗಮ ಸಂಗೀತ ಕ್ಷೇತ್ರ ಮತ್ತು ಜಾನಪದ ಸಂಗೀತ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಎಲ್ಲಾ ಗಾಯಕ, ಗಾಯಕಿಯರು, ಕವಿಗಳು, ಸಾಹಿತಿಗಳು ಎಲ್ಲರಿಗೂ ಸಂಸ್ಥೆ ಚಿರ ಋಣಿಯಾಗಿದೆ. ವಿಶೇಷವಾಗಿ ನಮ್ಮ ಕೇಳುಗರಿಗೆ ಸಮಸ್ತ ಕನ್ನಡಿಗರಿಗೂ ನಾವು ಚಿರ ಋಣಿಯಾಗಿದ್ದೇವೆ. ಇದೇ ರೀತಿ ನಿಮ್ಮ ಪ್ರೋತ್ಸಾಹ ಪ್ರೀತಿ ಇರಲಿ. ನಿಮ್ಮೆಲ್ಲರ ಪ್ರೀತಿ, ಸಹಕಾರ ಇದ್ದರೆ ಶೀಘ್ರದಲ್ಲೇ ಮತ್ತಷ್ಟು ಗುಣಮಟ್ಟದ ಕೆಲಸ ಮಾಡಿ ಇನ್ನಷ್ಟು ಗುರುತಿಸಿಕೊಳ್ಳುತ್ತೇವೆ. ಈ ಗೋಲ್ಡ್ ಅವರ‍್ಡ್ ನಮ್ಮ ಕನ್ನಡಿಗರಿಗೆ, ಕೇಳುಗರಿಗೆ ರ‍್ಪಿಸುತ್ತಿದ್ದೇವೆ.
ಇಂತಿ ಲಹರಿ ವೇಲು, ಲಹರಿ ಮ್ಯೂಸಿಕ್ ಸಂಸ್ಥೆ