ಬೀದರ್ ನ ಹೆಮ್ಮೆಯ ಪುತ್ರ ವಿವೇಕ್ ಸಜ್ಜನ್ ನಿರ್ದೆಶನದ ಮತ್ತೊಂದು ಚಲನಚಿತ್ರ ಬೆಳ್ಳಿಪರದೆಗೆ ಬರಲು ಸಜ್ಜು
ಈ ಹಿಂದೆ ನಿರ್ದೆಶಕ ವಿವೇಕ್ ಸಜ್ಜನ್ “ ಕಿಂಗ್ ಆಫ್ ಬೀದರ್ ” ಎನ್ನುವ ಬೀದರ್ ಶೈಲಿಯ ಕನ್ನಡ ಭಾಷೆಯಲ್ಲಿ ಸಿನೆಮಾ ಮಾಡಿ ಉತ್ತರ ಕರ್ನಾಟಕದ ಜನಗಳ ಮನಗೆದ್ದು ಈಗ “ ಜನನಿ ಮೂವೀಸ್ ’ ಬ್ಯಾನರ್ ನಲ್ಲಿ ‘ ಜೊತೆಗಿರುವೆ ಹಾಯಾಗಿರು ’ ಎನ್ನುವ ಕನ್ನಡ ಚಲನಚಿತ್ರ ನಿರ್ದೆಶಿಸಿದ್ದು ಚಲನಚಿತ್ರವು ಸೆನ್ಸಾರ್ ಮಡಿಲಲ್ಲಿದೆ. ಅತೀ ಶೀಘ್ರದಲ್ಲಿ ಹಾಡುಗಳ ಬಿಡುಗಡೆ ಹಾಗೂ ಚಲನಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡವು ತಿಳಿಸಿದೆ.
‘ ಜೊತೆಗಿರುವೆ ಹಾಯಾಗಿರು ’ ಚಲನಚಿತ್ರವು ಹೈದರಬಾದ್ ನ ತೆಲುಗು ಸಿನೆಮಾಗಳ ನಿರ್ಮಾಪಕರಾದ ‘ ಪೋಕುರಿ ಲಕ್ಷ್ಮಣ ಚಾರಿ ’ ಈ ಚಲನಚಿತ್ರಕ್ಕೆ ಬಂಡವಾಳ ಹೂಡಿದ್ದು ಸುಮಾರು ಒಂದು ವರೆ ಕೋಟಿಯವರೆಗು ಸಿನೆಮಾಗೆ ಖರ್ಚು ಮಾಡಿದ್ದೆವೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಈ ಚಲನಚಿತ್ರದ ನೇರ ಭಾಷೆ ಕನ್ನಡ ಆಗಿದ್ದು , ತೆಲುಗು ಭಾಷೆಯಲ್ಲಿ “ನೀ ಜತಲೋ ಹಾಯಿಗಾ ಉಂಟಾ” ಎನ್ನುವ ಹೆಸರಿನಲ್ಲಿ ತೆಲುಗು ಭಾಷೆಯಲ್ಲಿ ಡಬ್ ಆಗಿ ಬಿಡುಗಡೆಯಾಗಲಿದೆ.
ಬೀದರ್ ಹಾಗೂ ಹೈದರಬಾದ್ ಸುತ್ತ ಮುತ್ತ ಸತತ 40 ದಿನಗಳ ಕಾಲಾವಧಿಯಲ್ಲಿ ಎರಡು ಹಂತಗಳಲ್ಲಿ ಚಿತ್ರತಮಡವು ಚಿತ್ರೀಕರಣವು ಮಾಡಿದ್ದು
ಎಲ್ಲ ದೃಶ್ಯಗಳು ಉತ್ತಮವಾಗಿ ಮೂಡಿ ಬಂದಿವೆ ಎಂದು ನಿರ್ದೆಶಕ ‘’ವಿವೇಕ್ ಸಜ್ಜನ್ ತಿಳಿಸಿದ್ದಾರೆ. ನಾಯಕ ನಟರಾದ ಪೋಕುರಿ ಲಕ್ಷ್ಮಣಚಾರಿ ಈ ಹಿಂದೆ ತೆಲುಗು ಸಿನೆಮಾಗಳಿಗೆ ನಿರ್ಮಾಪಕರಾಗಿದ್ದು ಸಣ್ಣ ಪುಟ್ಟ ಸಹ ಕಲಾವಿದರ ಪಾತ್ರಗಳನ್ನು ಮಾಡುತಿದ್ದು, ಈಗ ಮೊದಲ ಬಾರಿಗೆ ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ.
ಕನ್ನಡ ಎಂದರೆ ಇಷ್ಷ, ಕನ್ನಡ ಎಂದರೆ ಪ್ರೀತಿ ಅಭಿಮಾನ ಅದಕ್ಕಾಗಿಯೆ ಕನ್ನಡ ಭಾಷೆ ಮಾತನಾಡಲು ಬರದಿದ್ದರು ಕನ್ನಡದ ಅಭಿಮಾನಕ್ಕಾಗಿಯೆ ಕನ್ನಡ ನಿರ್ದೆಶಕ ಸಜ್ಜನ್ ರವರ ಜೊತೆ ಬಂಡವಾಳ ಹಾಕಿ ಸಿನೆಮಾ ಮಾಡುತ್ತಿದ್ದೇನೆ ಎಂದರು ಲಕ್ಷ್ಮಣ ಚಾರಿ.
‘ಜೊತೆಗಿರುವೆ ಹಾಯಾಗಿರು ’ ಚಲನಚಿತ್ರದಲ್ಲಿ ಐದು ಹಾಡುಗಳಿದ್ದು, ಹಾಡುಗಳಿಗೆ ಸಂಗೀತ ಸಂಯೋಜಿಸಿ ಹಾಡುಗಳನ್ನ ಹಾಡಿದ್ದು ಬೀದರ್ ನವರೆ ಆದ ಸಂಗೀತ ನಿರ್ದೆಶಕ ‘ ಚನ್ನವೀರ್ ಹೋಗ್ತಾಪೂರ್ ’ ಚಿತ್ರದಲ್ಲಿ ಎರಡು ರೊಮ್ಯಾಂಟಿಕ್ ಹಾಡುಗಳಿದ್ದು, ಎರಡು ಸ್ಯಾಡ್ ಹಾಗೂ ಒಂದು ಐಟಮ್ ಹಾಡುಗಳಿವೆ. ತೆಲುಗು ಚಿತ್ರರಂಗದ ಪ್ರಸಿದ್ದ ಗಾಯಕಿ ಅಶ್ವಿನಿ ಚೆಪುರಿ ಹಾಡಿಗೆ ದ್ವನಿಯಾಗಿದ್ದಾರೆ. ಜೊತೆಗೆ ಸಂಗೀತ ನಿರ್ದೆಶಕ ‘ಚನ್ನವೀರ್ ಹೋಗ್ತಾಪೂರ್’ ರವರು ಹಾಡಿದ್ದಾರೆ ಎಲ್ಲಾ ಹಾಡುಗಳು ಉತ್ತಮವಾಗಿ ಮೂಡಿ ಬಂದಿವೆ ಎಂದು ನಿರ್ದೆಶಕರು ತಿಳಿಸಿದ್ದಾರೆ. ಹಾಡುಗಳ ಬಿಡುಗಡೆಯು
‘ಜನನಿ ಟ್ಯುನ್ಸ್’ ಆಡಿಯೋ ಕಂಪೆನಿ ಮೂಲಕ ಬಿಡುಗಡೆಯಾಗಲಿದ್ದು ಬರುವ ದಿನಗಳಲ್ಲಿ ಹಾಡುಗಳ ಬಿಡುಗಡೆಯಾಗಲಿವೆ.
ನಾಯಕ ನಟ ಲಕ್ಷ್ಮಣ ಚಾರಿ, ನಾಯಕಿ ಕನ್ನಡ ಕಿರುತೆರೆ ಹಾಗೂ ಸಿನೆಮಾಗಳ ನಟಿ ‘ ತನು ಪ್ರಸಾದ್ ಬೆಂಗಳೂರು ’ ಮತ್ತೊಬ್ಬ ನಾಯಕಿ ಪ್ರಿಯಾ ಪಾಂಡೆ ಮುಂಬಯಿ, ಸಹ ಕಲಾವಿದರು ‘ರಾಕ್ ಗುಂಡಪ್ಪ ಭಂಗೂರ್, ವಿಜಯ್ ಕುಮಾರ್ ಸಜ್ಜನ್, ನರೇದ್ರ ರೆಡ್ಡಿ, ಮುರುಳಿ ಹಾಗೂ ಪುಂಗ. ಇನ್ನೀತರರು.
ಚಲನಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಟ್ರೈ ಆ್ಯಂಗಲ್ ಮಾಸ್ ಸಸ್ಪೆನ್ಸ್ ರೊಮ್ಯಾಂಟಿಕ್ ಡ್ರಾಮ ಕಥೆ ಹಾಗೂ ಮೂರು ಸಾಹಸ ಸನ್ನಿವೇಶಗಳು ಒಳಗೊಂಡಿದ್ದು ಚಿತ್ರವು ಬೀದರ್ ಹಾಗೂ ಹೈದರಬಾದ್ ನಲ್ಲಿ ಚಿತ್ರೀಕರಣವಾಗಿದೆ.
ಕ್ಯಾಮೆರಾ ಕೆಲಸದ ಹೊಣೆಯನ್ನು ಬಸವರಾಜ್ ಎಸ್ ನಂದಿ ನಿರ್ವಹಿಸಿದ್ದರೆ ಸಾಹಸ ದೃಶ್ಯ ಸನ್ನಿವೇಶಗಳನ್ನು ವಾಸು ಮಾಸ್ಟರ್ ನಿರ್ದೆಶಿಸಿದ್ದಾರೆ. ಸಹ-ನಿರ್ದೆಶಕ ರಾಕ್ ಗುಂಡಪ್ಪ ಭಂಗೂರ್, ಹಾಗು ಸಹಾಯಕ ನಿರ್ದೆಶಕರು, ಬೆಲ್ ಸನ್ ಕೋಟೆ ಮತ್ತು ಮೋಹನ್ ಮೇತ್ರೆ.
ಮೇಕ ಅಪ್ ಮ್ಯಾನ್ ಗುರುರಾಜ್ ಆನಂದ್ ತಮ್ಮ ಬಣ್ಣದ ಕೈಗಳಿಂದ ಕಲಾವಿದರು ಮನಮೋಹವಾಗಿ ಕಾಣುವಂತೆ ತಮ್ಮ ಕೈ ಚಳಕವನ್ನು ತೋರಿಸಿದ್ದಾರೆ.
‘ ಜೊತೆಗಿರುವೆ ಹಾಯಾಗಿರು ’ ಚಲನಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನೃತ್ಯ, ಹಾಗೂ ನಿರ್ದೆಶನದ ಇಷ್ಟು ಜವಾಬ್ದಾರಿಗಳನ್ನು ನಿರ್ದೆಶಕ ವಿವೇಕ್ ಸಜ್ಜನ್ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಶೀಘ್ರದಲ್ಲೆ ಚಲನಚಿತ್ರವು ಬಿಡುಗಡೆಯಾಗಲಿದ್ದು ಚಲನಚಿತ್ರವು ಚಲನಚಿತ್ರಮಂದಿರಲ್ಲೆ ಬಂದು ವಿಕ್ಷೀಸಲು ಚಿತ್ರ ಅಭಿಮಾನಿ ಬಳಗಕ್ಕೆ ‘ ಜೊತೆಗಿರುವೆ ಹಾಯಾಗಿರು ’ ಚಿತ್ರತಂಡವು ಆಹ್ವಾನಿಸಿದೆ.