Friday, May 9, 2025

Latest Posts

ಶ್ರೀರಂಗಪಟ್ಟಣದಲ್ಲಿ ಯತಿರಾಜ್ “ಮಾಯಾಮೃಗ”

- Advertisement -

 

ಸಿನಿಮಾ ಪತ್ರಕರ್ತನಾಗಿ ಗುರುತಿಸಿಕೊಂಡಿರುವ ಯತಿರಾಜ್, ಈಗ ನಿರ್ದೇಶಕ ಹಾಗೂ ಕಲಾವಿದನಾಗೂ ಚಿರಪರಿಚಿತ. ಪ್ರಸ್ತುತ ಯತಿರಾಜ್ ನಿರ್ದೇಶಿಸಿ , ನಾಯಕನಾಗೂ ನಟಿಸುತ್ತಿರುವ “ಮಾಯಾಮೃಗ” ಚಿತ್ರದ ಚಿತ್ರೀಕರಣ ಶ್ರೀರಂಗಪಟ್ಟಣದ ಬಳಿಯ ಹಳ್ಳಿಯೊಂದರಲ್ಲಿ ಆರಂಭವಾಯಿತು. ಸ್ಥಳೀಯ ಮುಖಂಡರಾದ ರಾಜಣ್ಣ, ಜಯಣ್ಣ ಮುಂತಾದವರು ಚಿತ್ರೀಕರಣ ಆರಂಭದ ವೇಳೆ ಉಪಸ್ಥಿತರಿದ್ದು, ಶುಭ ಕೋರಿದರು. ಶ್ರೀರಂಗಪಟ್ಟಣದ ಸುತ್ತಮುತ್ತ ಇಪ್ಪತ್ತೈದು ದಿನಗಳ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ.

ಎಸ್ ಜಿ ಆರ್ ಫಿಲಂಸ್ ಲಾಂಛನದಲ್ಲಿ ಜಯಲಕ್ಷ್ಮಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ವಿನು ಮನಸು ಸಂಗೀತ ನಿರ್ದೇಶನ, ವಿದ್ಯಾ ನಾಗೇಶ್ ಛಾಯಾಗ್ರಹಣ ಹಾಗೂ ಶಶಿ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ.

ಯತಿರಾಜ್ ಅವರಿಗೆ ನಾಯಕಿಯಾಗಿ ಸೋನು ಸಾಗರ ಅಭಿನಯಿಸುತ್ತಿದ್ದಾರೆ. “ರಂಗಿತರಂಗ” ಅರವಿಂದರಾವ್, ಕುರಿ ರಂಗ, ವಿ ಸಿ ಎನ್ ಮಂಜು, ಶ್ರೀರಂಗಪಟ್ಟಣ ಮಂಜು, ಸಿಂಚನ, ಮಿಥಾಲಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

 

- Advertisement -

Latest Posts

Don't Miss