Movie News: ತಮಿಳು ನಟ ವಿಜಯ್ ತಳಪತಿ ರಾಜಕೀಯಕ್ಕೆ ಬಂದ ಬಳಿಕ, ಸಿನಿಮಾ ಕ್ಷೇತ್ರದಿಂದ ದೂರ ಉಳಿಯುತ್ತಾರೆಂದು ಹೇಳಲಾಗಿತ್ತು. ಆದರೆ ವಿಜಯ್ ತಾನು ಚಿತ್ರರಂಗದಿಂದ ಎಂದಿಗೂ ದೂರಾಗುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಅಂದ್ರೆ ಕಲಾ ಸಂಘಕ್ಕೆ ದೇಣಿಗೆ ನೀಡಿದ್ದಾರೆ.
ಕಲಾಸಂಘದ ವತಿಯಿಂದ ಕಟ್ಟಲಾಗುತ್ತಿರುವ ಕಟ್ಟಡಕ್ಕೆ ವಿಜಯ್, 1 ಕೋಟಿ ರೂಪಾಯಿ ದೇಣಿಗೆ ಕೊಟ್ಟಿದ್ದಾರೆ. ಈ ಸಂಘದ ಅಧ್ಯಕ್ಷರಾಗಿರುವ ನಿರ್ಮಾಪಕ, ನಟ ವಿಶಾಲ್, ವಿಜಯ್ ಅವರ ಸಹಾಾಯಕ್ಕೆ ಧನ್ಯವಾಾದ ಹೇಳಿದ್ದಾರೆ. ಥ್ಯಾಂಕ್ಯೂ ಎನ್ನುವುದು ಸಣ್ಣ ಶಬ್ದವಾಗುತ್ತದೆ. ಆದರೆ ಸಹೃದಯದಿಂದ ಸಹಾಯ ಮಾಡಿದವರಿಗೆ ಇದು ಬಹುದೊಡ್ಡ ಪದ. ವಿಜಯ್ ಅವರ ಸಹಾಯವಿಲ್ಲದೇ, ನಮ್ಮ ಕೆಲಸ ಮುಂದುವರೆಯುವುದಿಲ್ಲವೆಂದು ನಮಗೆ ಗೊತ್ತಿತ್ತು. ವಿಜಯ್ ಅವರು ನಮಗೆ ದೇಣಿಗೆ ನೀಡಿ, ನಮ್ಮ ಕೆಲಸಕ್ಕೆ ಇಂಧನ ತುಂಬುವ ಕೆಲಸ ಮಾಡಿದ್ದಾರೆಂದು ಬರೆದುಕೊಂಡಿದ್ದಾರೆ.
ಇನ್ನು ನಟ ಕಾರ್ತಿ ಮತ್ತು ವಿಶಾಲ್ ನೇತೃತ್ವದಲ್ಲಿ ಸ್ಥಾಪಿಸಲಾಗುತ್ತಿರುವ ಈ ಕಟ್ಟಡಕ್ಕೆ ಕಮಲ್ ಹಾಸನ್, ಉದಯನಿಧಿ ಸ್ಟಾಲಿನ್ ಸೇರಿ, ಹಲವು ಗಣ್ಯರು ದೇಣಿಗೆ ನೀಡಿದ್ದಾರೆ.
ಯುವರಾಜರೇ ರಾಜರಾಗಿರಿ ಮಂತ್ರಿಯಾಗಬೇಡಿ: ಯದುವೀರ್ ಒಡೆಯರ್ ಅಭಿಮಾನಿಗಳ ಅಭಿಯಾನ
ಸರಕಾರಿ ಕಾರ್ಯಕ್ರಮಕ್ಕೆ ಬರದಿದ್ದರೆ ಗ್ಯಾರಂಟಿ ಯೋಜನೆ ಬಂದ್: ಅಂಗನವಾಡಿ ಕಾರ್ಯಕರ್ತೆಯ ‘ಗ್ಯಾರಂಟಿ’ ಬೆದರಿಕೆ