Wednesday, September 11, 2024

Latest Posts

ರಿಷಬ್ ಶೆಟ್ರು ಏನೋ ಹೇಳ್ತಿದಾರೆ.. ನಿಮಗ್ಯಾರಿಗಾದ್ರೂ ಅರ್ಥ ಆಯ್ತಾ..?

- Advertisement -

Cricket News: ಮಾರ್ಚ್ 22ರಿಂದ ಐಪಿಎಲ್ ಆರಂಭವಾಗಲಿದೆ. ಈಗಿಂದಲೇ ಎಲ್ಲ ಟೀಂ ಅದಕ್ಕಾಗಿ ತಯಾರಿ ನಡೆಸುತ್ತಿದೆ. ಈ ಮಧ್ಯೆ ನಟ ರಿಷಬ್ ಶೆಟ್ಟಿ ಕೋಣಗಳೊಂದಿಗೆ ಬಂದು, ನಮಗೊಂದು ಸಂದೇಶ ಕೊಟ್ಟಿದ್ದಾರೆ. ಬಳಿಕ ನಿಮಗೆ ಅರ್ಥ ಆಯ್ತಾ ಅಂತಾ ಕೇಳಿದ್ದಾರೆ. ಮತ್ತು ಜಾಣರು ಇದನ್ನ ಅರ್ಥಾನೂ ಮಾಡ್ಕೊಂಡಿದ್ದಾರೆ.

ಅಷ್ಟಕ್ಕೂ ಈ ಟ್ರೇಲರ್‌ ಏರ್ಥ ಏನು ಅಂತಾ ನೋಡೋದಾದ್ರೆ, ಮೂರು ಕೋಣಗಳ ಮುಂದೆ ಕಂಬಳದ ಉಡುಪು ತೊಟ್ಟ ರಿಷಬ್ ಶೆಟ್ಟಿ, ಬಂದು ನಿಲ್ಲುತ್ತಾರೆ. ಈ ಮೂರು ಕೋಣಗಳ ಮೇಲೆ ರಾಯಲ್, ಚಾಲೆಂಜರ್ಸ್, ಬ್ಯಾಂಗ್ಲೋರ್ ಎಂದು ಬರೆದಿತ್ತು. ಆದರೆ ಬ್ಯಾಂಗ್ಲೋರ್ ಅಂತಾ ಬರೆದಿರುವ ಕೋಣ ಬೇಡ ಎಂದು, ರಿಷಬ್ ಆ ಕೋಣವನ್ನು ತೆಗೆದುಕೊಂಡು ಹೋಗಿ ಎನ್ನುತ್ತಾರೆ.

ಇದರ ಅರ್ಥವೇನೆಂದರೆ, ಈ ಬಾರಿ ರಾಯಲ್ ಚಾಲೆಂಜರ್ಸ್ ಬ್ಯಾಂಗ್ಲೋರ್ ಅಂತಾ ಇದ್ದ ಹೆಸರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಚೇಂಜ್ ಮಾಡಿದ್ದಾರೆ ಅನ್ನೋದೇ ಈ ಟ್ರೇಲರ್ ಅರ್ಥ. ಈ ಅರ್ಥವನ್ನು ಯಾರೂ ಹೇಳದಿದ್ದರೂ, ಕಾಮೆಂಟ್‌ನಲ್ಲಿ ಜಾಣರೆಲ್ಲ ಇದನ್ನೇ ಬರೆದಿದ್ದಾರೆ. ಕೊನೆಗೂ ಬ್ಯಾಂಗ್ಲೋರನ್ನು ಬೆಂಗಳೂರು ಅಂತಾ ಚೇಂಜ್ ಮಾಡುತ್ತಿದ್ದಾರೆಂದು ಖುಷಿ ಪಟ್ಟಿದ್ದಾರೆ. ಆದರೆ ಈ ಸಿಕ್ರೇಟನ್ನು ನಾವು ಮಾರ್ಚ್ 19ಕ್ಕೆ ರಿವೀಲ್ ಮಾಡುತ್ತೇವೆ. ಅಲ್ಲಿವರೆಗೂ ಕಾಯಿರಿ ಎಂದು ಆರ್‌ಸಿಬಿ ತಂಡ ಹೇಳಿದೆ. ವೀಡಿಯೋ ನೋಡಲು ಈ ಲಿಂಕ್ ಪ್ರೆಸ್ ಮಾಡಿ.

ರಿಷಬ್ ಶೆಟ್ಟಿ ವೀಡಿಯೋ

ತೆಲುಗು ನಿರ್ದೇಶಕ ಸೂರ್ಯ ಕಿರಣ್ ನಿಧನ

ಅಂಬೇಡ್ಕರ್ ಅವರ ಆಶಯಗಳನ್ನು ನಾಶ ಮಾಡುವುದೇ ಬಿಜೆಪಿಯ ಗುರಿ: ಡಿಸಿಎಂ ಡಿ.ಕೆ.ಶಿವಕುಮಾರ್

ಸಿಎಎ ಅಧಿಸೂಚನೆ ಜಾರಿಗೊಳಿಸಿದ ಕೇಂದ್ರ ಸರ್ಕಾರ

- Advertisement -

Latest Posts

Don't Miss