Web News: ಕೆಲ ವರ್ಷಗಳ ಹಿಂದೆ ಯೂಟ್ಯೂಬ್ ಶುರು ಮಾಡಿದವರಿಗೆ ಯಾವುದೇ ಬೆಂಬಲವಿರಲಿಲ್ಲ. ಅದೆಲ್ಲ ವೇಸ್ಟ್ ಆಪ್ ಟೈಮ್, ಓದಿನ ಕಡೆ ಗಮನ ಕೊಡಿ, ಕೆಲಸದ ಕಡೆ ಗಮನ ಕೊಡಿ ಅಂತಾ ಹೇಳುವವರೇ ಹೆಚ್ಚಾಗಿದ್ರು. ಆದರೆ ಇದೀಗ ಯೂಟ್ಯೂಬ್ ಅದೆಷ್ಟರ ಮಟ್ಟಿಗೆ ಫೇಮಸ್ ಆಗಿದೆ ಅಂದ್ರೆ, ಯೂಟ್ಯೂಬ್ ಒಂದು ಉದ್ಯಮವಾಗಿ ಮಾರ್ಪಟ್ಟಿದೆ. ಯೂಟ್ಯೂಬರ್‌ಗಳು, ಕೋಟಿ ಕೋಟಿ ದುಡಿದು, ಆಫೀಸ್ ಕಟ್ಟಿ, ನಾಲ್ಕು ಜನಕ್ಕೆ ಕೆಲಸ ಕೊಡುವ ಹಂತಕ್ಕೆ ಬೆಳೆದಿದೆ.
ಅಂಥ ಯೂಟ್ಯೂಬ್‌ಗಳಲ್ಲಿ ದತ್ತಾ ಅವರ ಯೂಟ್ಯೂಬ್ ಕೂಡ ಒಂದು. ದತ್ತಾ ಅವರ ಸಂದರ್ಶನವನ್ನು ಕರ್ನಾಟಕ ಟಿವಿ ಮಾಡಿದ್ದು, ತಮ್ಮ ಯೂಟ್ಯೂಬ್ ಜರ್ನಿ ಬಗ್ಗೆ ದತ್ತಾ ಅವರು ಅನುಭವದ ಮಾತುಗಳನ್ನಾಡಿದ್ದಾರೆ.
ದತ್ತಾ ಅವರೇ ಖುದ್ದಾಗಿ ಹೇಳಿದ್ದೇನೆಂದರೆ ಅವರಿಗೆ ಇದುವರೆಗೂ ಸರಿಯಾಗಿ ಬರೆಯಲು ಓದಲು ಬರುವುದಿಲ್ಲ. ಗೂಗಲ್ ಸಹಾಯದ ಮೂಲಕವೇ ಅವರು ಯೂಟ್ಯೂಬ್‌ನಲ್ಲಿ ಟೈಪ್ ಮಾಡುತ್ತಾರೆ. ಅಲ್ಲದೇ, ಅವರೇನಾದ್ರೂ ಯೂಟ್ಯೂಬರ್ ಆಗಿರದೇ ಇದ್ದಲ್ಲಿ, ಅವರು ಕಂಪನಿಿಯಲ್ಲಿ 20 ಸಾವಿರ ರೂಪಾಯಿ ತೆಗೆದುಕೊಳ್ಳುವ ಕೆಲಸಗಾರರಾಗಿರುತ್ತಿದ್ದರು. ಅವರು ಡಿಪ್ಲೋಮಾದಲ್ಲಿ ಎಲ್ಲ ಸಬ್ಜೆಕ್ಟ್‌ನಲ್ಲೂ ಫೇಲ್ ಆಗಿದ್ದವರು.
ಆದರೆ ಅವರು ಈಗ ತಿಂಗಳಿಗೆ ಲಕ್ಷ ಲಕ್ಷ ಸಂಬಳ ಗಳಿಸುತ್ತಿದ್ದಾರೆ. ಯೂಟ್ಯೂಬ್ ಶುರು ಮಾಡಿ, ನಾಲ್ಕು ಜನಕ್ಕೆ ಕೆಲಸ ಕೊಟ್ಟಿದ್ದಾರೆ. ಈ ಮೂಲಕ ದತ್ತು ಅವರು ವಿದ್ಯೆ ಇದ್ದರೆ ಮಾತ್ರ ಜೀವನದಲ್ಲಿ ಉದ್ಧಾರವಾಗಬೇಕೆಂದೇನಿಲ್ಲ. ಬದಲಾಗಿ ವಿದ್ಯೆ ಇಲ್ಲದಿದ್ದರೂ, ದುಡಿಯುವ ಛಲ, ಬುದ್ಧಿವಂತಿಕೆ, ಪರಿಶ್ರಮವಿದ್ದಲ್ಲಿ, ಜೀವನದಲ್ಲಿ ಉದ್ಧಾರವಾಗಬಹುದು ಅನ್ನೋ ಸಂದೇಶ ಕೊಟ್ಟಿದ್ದಾರೆ. ದತ್ತಾ ಅವರ ಸ್ಪೂರ್ತಿದಾಯಕ ಸಂದರ್ಶನ ನೋಡಲು ಈ ವೀಡಿಯೋ ಕ್ಲಿಕ್ ಮಾಡಿ.