ಪ್ರೀತಿ ಮಾಡಿದ್ದಕ್ಕೆ ಯುವಕನ ಕೊಲೆ- 10 ಮಂದಿಯ ಬಂಧನ..!

ಬೆಳಗಾವಿ : ಬೆಳಗಾವಿಯ ಖಾನಾಪೂರದಲ್ಲಿ ನಡೆದ ಅರ್ಬಾಜ್ ಕೊಲೆ ಪ್ರಕರಣದ ಆರೋಪಿಗಳನ್ನು ಕಡೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೆ. 28ರಂದು ಖಾನಾಪುರದ 25 ವರ್ಷದ ಯುವಕ ಅರ್ಬಾಜ್ ನನ್ನು ತಲೆ ಮತ್ತು ಕಾಲು ಕಡಿದು ಭರ್ಬರವಾಗಿ ಹತ್ಯೆಗೈಯ್ಯಲಾಗಿತ್ತು. ಈ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಕೊಲೆಯಾದ ಅರ್ಬಾಜ್ ಹಿಂದೂ ಯುವತಿಯನ್ನು ಪ್ರೀತಿ ಮಾಡುತ್ತಿದ್ದೇ ಈತನ ಕೊಲೆಗೆ ಕಾರಣ ಅಂತ ತಿಳಿದು ಬಂದಿದೆ. ಕಾರ್ ಬ್ರೋಕರ್ ಆಗಿದ್ದ ಅರ್ಬಾಜ್ ಅದೇ ಏರಿಯಾದ ಯುವತಿಯನ್ನು ಪ್ರೀತಿಸುತ್ತಿದ್ದ. ಈ ವಿಚಾರವಾಗಿ ಇಬ್ಬರೂ ಕುಟುಂಬಸ್ಥರ ನಡುವೆ ಜಗಳ ನಡೆದಿತ್ತು. ಈ ಬಗ್ಗೆ ಕೆಲ ಸಂಘಟನೆಗಳ ಸದಸ್ಯರೂ ಅರ್ಬಾಜ್ ಗೆ ಆ ಯುವತಿಯ ತಂಟೆಗೆ ಬರದಂತೆ ಎಚ್ಚರಿಕೆ ನೀಡಿದ್ದರು. ಅಲ್ಲದೆ ಆತನ ಮೊಬೈಲ್ ನಲ್ಲಿ ಯುವತಿಯೊಂದಿಗಿದ್ದ ಫೋಟೋಗಳನ್ನೂ ಡಿಲೀಟ್ ಮಾಡಿಸಲಾಗಿತ್ತು. ಆದ್ರೆ ಮಾತುಕತೆಯಾದ ಎರಡೇ ದಿನಗಳ ಬಳಿಕ ಖಾನಾಪುರ ಹೊರವಲಯದ ರೈಲ್ವೇ ಹಳಿ ಮೇಲೆ ಅರ್ಬಾಜ್ ಮೃತದೇಹ ಪತ್ತೆಯಾಗಿತ್ತು.

ಇನ್ನು ಅರ್ಬಾಜ್ ನನ್ನು ಕೊಲೆ ಮಾಡಲು ಸುಪಾರಿ ನೀಡಿದ ಆರೋಪದ ಮೇಲೆ ಹಿಂದೂ ಸಂಘಟನೆಯ ಪ್ರಮುಖ ಆರೋಪಿ ಒತ್ತೊಳ ಗ್ರಾಮದ ಪುಂಡಲೀಕ ಅಲಿಯಾಸ್ ಮಹಾರಾಜ್‌ ಸೇರಿದಂತೆ ಯುವತಿ ತಾಯಿ ಸುಶೀಲಾ ಕಂಬಾರ, ಖಾನಪುರದ ಕುತುಬ್ ಉದ್ದಿನ್ ಬೆಪಾರಿ,ಮಂಜುನಾಥ್ ,ಪ್ರಶಾಂತ್ ಪಾಟೀಲ್, ಪ್ರವೀಣ್ ಪೂಜಾರಿ,ಶ್ರೀಧರ ದೋಣಿ,ಗಣಪತಿ ಸುಗತಿ, ಈರಪ್ಪ ಬಸವಣ್ಣಿ ಕುಂಬಾರ ಸೇರಿದಂತೆ 10 ಮಂದಿಯನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ

ಅರ್ಬಾಜ್ ನನ್ನು ಬೇರೆಡೆ ಕೊಲೆ ಮಾಡಿ ಸಾಕ್ಷ್ಯನಾಶ ಪಡಿಸೋ ಸಲುವಾಗಿ ಆರೋಪಿಗಳು ರೈಲ್ವೇ ಹಳಿ ಮೇಲೆ ತಂದು ಬಿಸಾಡಿದ್ದರು. ಈ ಕುರಿತು ಇಂದು ಬೆಳಗಾವಿ ಎಸ್ಪಿ ಲಕ್ಷ್ಮಣ ನಿಂಬರಗಿ ಇಂದು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ್ರು.

ಕರ್ನಾಟಕ ಟಿವಿ- ಬೆಳಗಾವಿ

About The Author