Friday, July 11, 2025

Latest Posts

ಭಾರತದಲ್ಲಿರುವ 10 ಶಿವನ ಬೃಹತ್ ಮೂರ್ತಿಗಳಿವು..

- Advertisement -

ನೇಪಾಳ ಬಿಟ್ಟರೆ, ನಂತರ ಹಿಂದೂ ದೇಶ ಅನ್ನಿಸಿಕೊಂಡಿರುವುದು ನಮ್ಮ ಭಾರತ. ಭಾರತದಲ್ಲಿ ಹಿಂದೂ ಧರ್ಮಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಇಲ್ಲಿ ಹಿಂದೂ ದೇವರಿಗೆ ಸಂಬಂಧಿಸಿದಂತೆ ಹಲವು ದೇವಸ್ಥಾನಗಳಿದೆ. ಅಂತೆಯೇ ಹಿಂದೂ ದೇವರ ದೊಡ್ಡ ದೊಡ್ಡ ಮೂರ್ತಿಗಳಿದೆ. ಅದರಲ್ಲಿ ಹೆಚ್ಚು ಶಿವನ ಮೂರ್ತಿಗಳೇ ಇವೆ. ಹಾಗಾದ್ರೆ ಭಾರದಲ್ಲಿರುವ ದೊಡ್ಡ ಶಿವನ ಮೂರ್ತಿಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..

ಮೊದಲನೇಯದ್ದು ನಾಥದ್ವಾರ್‌ . ಈ ಪ್ರತಿಮೆ ಗುಜರಾತ್‌ನಲ್ಲಿದ್ದು, ಇದು ಪ್ರಪಂಚದಲ್ಲೇ ಅತೀ ದೊಡ್ಡ ಶಿವನ ಮೂರ್ತಿಯಾಗಿದೆ. ಅಲ್ಲದೇ ಪ್ರಪಂಚದಲ್ಲಿರುವ 14ನೇ ದೊಡ್ಡ ಪ್ರತಿಮೆ ಎಂಬ ಖ್ಯಾತಿಯನ್ನೂ ಪಡೆದಿದೆ.

ಎರಡನೇಯದ್ದು ಮುರ್ಡೇಶ್ವರ. ನಮ್ಮ ರಾಜ್ಯದಲ್ಲಿರುವ ಮುರ್ಡೇಶ್ವರದಲ್ಲಿರುವ ಶಿವನ ಪ್ರತಿಮೆ ವಿಶ್ವ ಪ್ರಸಿದ್ಧವಾಗಿದೆ. ಇದು 123 ಅಡಿ ಎತ್ತರವಾಗಿದ್ದು, ಈ ಶಿವನ ಮೂರ್ತಿ ನೋಡಲು, ದೇಶ ವಿದೇಶಗಳಿಂದ ಪ್ರವಾಸಿಗರ ದಂಡೇ ಆಗಮಿಸುತ್ತದೆ.

ಮೂರನೇಯದ್ದು ಆದಿಯೋಗಿ . ಇದು ತುಂಬಾ ಪ್ರಸಿದ್ಧವಾಗಿರುವ ತಮಿಳುನಾಡಿನ ಕೊಯಂಬತ್ತೂರಿನಲ್ಲಿರುವ ಆದಿ ಯೋಗಿ ಮಂದಿ. ಸದ್ಗುರು ಜಗ್ಗಿ ವಾಸುದೇವ್ ಗುರೂಜಿಗಳ ಶಿವರಾತ್ರಿ ಜಾಗರಣೆ ಕಾರ್ಯಕ್ರಮ ನಡಿಯೋದು ಇಲ್ಲೇ. ಈ ಪ್ರತಿಮೆ 112 ಅಡಿ ಎತ್ತರವಿದೆ.

ನಾಲ್ಕನೇಯದ್ದು ಮಂಗಲ ಮಹಾದೇವ. ಇದು ಹರಿಯಾಣಾದಲ್ಲಿದ್ದು, 101 ಅಡಿ ಎತ್ತದಲ್ಲಿದೆ. ಇದು ಕೂಡ ನಿಂತು ಆಶೀರ್ವದಿಸುವ, ಕಂಚಿನ ಬಣ್ಣದ, ಶಿವ ಪ್ರತಿಮೆಯಾಗಿದೆ.

ಐದನೇಯದ್ದು ಹರಿದ್ವಾರದ ಶಿವ. ಈ ಶಿವನ ಪ್ರತಿಮೆ 100 ಅಡಿ ಎತ್ತರವಾಗಿದ್ದು, ಈ ಪ್ರತಿಮೆಯನ್ನು ಶಿವ ನಿಂತು ಆಶೀರ್ವದಿಸುವ ರೀತಿ ನಿರ್ಮಿಸಲಾಗಿದೆ. ಗಂಗಾ ನದಿಯ ದಡದಲ್ಲಿರುವ ಈ ಶಿವಮೂರ್ತಿ, ಪ್ರವಾಸಿಗರ ಆಕರ್ಷಣೀಯ ಕೇಂದ್ರ ಬಿಂದುವಾಗಿದೆ.

ಆರನೇಯದ್ದು ನಾಮ್ಚಿ ಶಿವನ ಮೂರ್ತಿ. ಸಿಕ್ಕಿಂನಲ್ಲಿರುವ ಈ ನಾಮ್ಚಿ ಶಿವನ ಮೂರ್ತಿ 92 ಅಡಿ ಎತ್ತರವಾಗಿದೆ. ಈ ಮೂರ್ತಿ ಇರುವ ಸ್ಥಳವನ್ನ ಸಿದ್ಧೇಶ್ವರ ಧಾಮ ಅಂತಲೂ ಕರೆಯಲಾಗತ್ತೆ.

ಏಳನೇಯದ್ದು ಶಿವಗಿರಿ ಮಹಾದೇವ. ಇದು ನಮ್ಮ ರಾಜ್ಯದ ಬಿಜಾಪುರದಲ್ಲಿದೆ. ಇಲ್ಲಿ ಯೋಗೇಶ್ವರ ರೂಪದಲ್ಲಿರುವ ಶಿವ 85 ಅಡಿ ಎತ್ತರವಾಗಿದ್ದಾನೆ. 2011ರಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು.

ಎಂಟನೇಯದ್ದು ನಾಗೇಶ್ವರ ಮಹಾದೇವ. 12 ಜೋತಿರ್ಲಿಂಗಗಳಲ್ಲಿ ಒಂದಾದ ಈ ದೇವಸ್ಥಾನ, ಗುಜರಾತ್‌ನಲ್ಲಿದೆ. ಇದು 82 ಅಡಿ ಎತ್ತರವಾಗಿದೆ.

ಒಂಭತ್ತನೇಯದ್ದು ಕಚನಾರ್ ಶಿವಮೂರ್ತಿ. ಮಧ್ಯಪ್ರದೇಶದ ಜಬಲ್ಪುರ್‌ನಲ್ಲಿ ಕಚನಾರ್ ಎಂಬ ಸ್ಥಳದಲ್ಲಿ ಶಿವನ ಮೂರ್ತಿ ಇದ್ದು, ಇದು 76 ಅಡಿ ಎತ್ತರವಿದೆ. ಕರ್ಪೂರ ಗೌರಂ ರೂಪದಲ್ಲಿರುವ ಶಿವ, ಪದ್ಮಾಸನ ಮುದ್ರೆಯಲ್ಲಿರುವಂತೆ ಕಾಣುತ್ತಾರೆ.

ಹತ್ತನೇಯದ್ದು ಕೆಂಪ ಫೋರ್ಟ್ ಶಿವಮೂರ್ತಿ . ಇದು ಬೆಂಗಳೂರಿನ ಮುರುಗೇಶಪಾಳ್ಯದಲ್ಲಿದ್ದು, 65 ಫೀಟ್ ಎತ್ತರವಿದೆ. ಕೈಲಾಶ ಪರ್ವತದಲ್ಲಿ ಆಸೀನನಾಗಿರುವಂತೆ ತೋರುವ ಶಿವ, ಆಕರ್ಷಕವಾಗಿ ಕಾಣುತ್ತಾನೆ.

- Advertisement -

Latest Posts

Don't Miss