Sunday, February 9, 2025

Latest Posts

ಔಡಲ ಕಾಯಿ ತಿಂದು 10 ಮಕ್ಕಳು ಅಸ್ವಸ್ಥ: ಸರಿಯಾದ ಸಮಯಕ್ಕೆ ಸಿಕ್ಕ ಚಿಕಿತ್ಸೆ

- Advertisement -

Dharwad News: ಧಾರವಾಡ: ಧಾರವಾಡದ ಜಿಲ್ಲೆಯ ಕಲಘಟಗಿ ತಾಲೂಕಿನ ಗಂಭ್ಯಾಪೂರ ಗ್ರಾಮದಲ್ಲಿ ಔಡಲ ಕಾಯಿ ತಿಂದು ಮಕ್ಕಳು ಅಸ್ವಸ್ಥರಾಗಿದ್ದಾರೆ.

10 ಮಕ್ಕಳು ಅಸ್ವಸ್ಥಗೊಂಡಿದ್ದು, 9 ವರ್ಷದೊಳಗಿನ ಮೂರು ಜನ ಬಾಲಕಿಯರು ಮತ್ತು ಏಳು ಜನ ಬಾಲಕರು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥ ಮಕ್ಕಳನ್ನು ಧಾರವಾಡ ಜಿಲ್ಲಾಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ನಿನ್ನೆ ಸಂಜೆ ಶಾಲೆಯಿಂದ ಮನೆಗೆ ಬರುವ ವೇಳೆ ರಸ್ತೆಯಲ್ಲಿ ಸಿಕ್ಕ ಔಡಲ ಕಾಯಿ ತಿಂದಿದ್ದರು. ಬಳಿಕ ಎಲ್ಲರೂ ವಾಂತಿ ಬೇಧಿಯಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಮಕ್ಕಳ ಪೋಷಕರು ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದ್ದರು. ಸದ್ಯ ಸರಿಯಾದ ಸಮಯಕ್ಕೆ ಎಲ್ಲರಿಗೂ ಚಿಕಿತ್ಸೆ ಸಿಕ್ಕಿದ್ದು, ಎಲ್ಲ ಮಕ್ಕಳ ಆರೋಗ್ಯ ಸ್ಥಿತಿ ಸಹದ ಸ್ಥಿತಿಯತ್ತ ಮರಳುತ್ತಿದೆ.

- Advertisement -

Latest Posts

Don't Miss