ಒಂದೇ ಅಪಾರ್ಟ್ಮೆಂಟ್ ನಲ್ಲಿ 10 ಕರೋನಾ ಕೇಸ್..!                        

ಬೆಂಗಳೂರು: ಬೆಂಗಳೂರಿನ ಕೋರಮಂಗಲದ ಅಪಾರ್ಟ್ಮೆಂಟ್ ನಲ್ಲಿ 10 ಕರೋನಾ ಕೇಸ್ ಪತ್ತೆಯಾಗಿದ್ದು ಅಪಾರ್ಟ್ಮೆಂಟ್ ಅನ್ನು ಸೀಲ್ ಡೌನ್ ಮಾಡಲಾಗಿದೆ. ಕೋರಮಂಗಲದ ರಹೇಜಾ ಅಪಾರ್ಟ್ಮೆಂಟ್ ಒಂದರಲ್ಲಿ ಬರ್ತಡೇ ಪಾರ್ಟಿ ನಡೆದಿದ್ದು ನಂತರ ಅಲ್ಲಿ ಕರೋನ ಕೇಸ್ ಪತ್ತೆಯಾಗಿದ್ದು  ಅಪಾರ್ಟ್ಮೆಂಟ್ ಅನ್ನು ಬಿಬಿಎಂಪಿ ಸೀಲ್ ಡೌನ್ ಮಾಡಿದೆ. ಒಂದೇ ಅಪಾರ್ಟ್ಮೆಂಟ್ ಅಲ್ಲಿ 10 ಕರೋನಾ ಕೇಸ್ ಪತ್ತೆಯಾಗಿದ್ದು, ಇದರಿಂದ ಅಲ್ಲಿನ ಬರ್ತಡೇ ಪಾರ್ಟಿಗೆ ಬಂದಿದ್ದ ಎಲ್ಲರ ಮನೆಯನ್ನು ಸಹ ಸೀಲ್ ಡೌನ್ ಮಾಡಿದ್ದು, ಅವರೆಲ್ಲರಿಗೂ ಕರೋನ  ಪರೀಕ್ಷೆಯನ್ನು ನಡೆಸಿ ಸ್ಯಾಂಪಲನ್ನು ಪಡೆಯಲಾಗಿದೆ ಎಂದು ಆರೋಗ್ಯ  ಸಿಬ್ಬಂದಿ  ತಿಳಿಸಿದೆ.

About The Author