Friday, August 29, 2025

Latest Posts

ನುಗ್ಗೇಕಾಯಿ ಸೇವನೆಯ 10 ಲಾಭಗಳು

- Advertisement -

ನುಗ್ಗೇಕಾಯಿ ಸಾರು ಅಂದ್ರೆ ಹಲವರಿಗೆ ಫೇವರಿಟ್ ಫುಡ್. ನುಗ್ಗೆ ಜೊತೆ ಬದನೆ, ಆಲೂ, ಬಟಾಣಿ, ಕ್ಯಾರೆಟ್ ಹೀಗೆ ಎಲ್ಲ ತರಕಾರಿ ಹಾಕಿ ಸಾಂಬಾರ್ ಮಾಡಿದ್ರೆ ಇಡ್ಲಿಗೆ ಸಖತ್ ಕಾಂಬಿನೇಶನ್ ಆಗಿರತ್ತೆ. ನಾವಿಂದು ಇಂಥಾ ಟೇಸ್ಟಿ ನುಗ್ಗೇಕಾಯಿ ತಿನ್ನೋಂದ್ರಿಂದ ಆಗುವ 10 ಲಾಭಗಳ ಬಗ್ಗೆ ಹೇಳಲಿದ್ದೇವೆ.

1.. ನಿಯಮಿತವಾಗಿ ನುಗ್ಗೇಕಾಯಿ ತಿನ್ನುವುದರಿಂದ ಕೂದಲಿನ ಆರೋಗ್ಯ ವೃದ್ಧಿಯಾಗುತ್ತದೆ. ಸಮಯಕ್ಕೂ ಮುನ್ನ ಕೂದಲು ಬೆಳ್ಳಗಾಗುವುದಿಲ್ಲ. ಮತ್ತು ಕೂದಲಿನ ಬುಡ ಗಟ್ಟಿಗೊಳ್ಳುತ್ತದೆ.

2.. ವಾರದಲ್ಲಿ ಮೂರು ಬಾರಿ ನುಗ್ಗೇಕಾಯಿ ಸೇವನೆ ತೂಕ ಕಳೆದುಕೊಳ್ಳುವುದರಲ್ಲಿ ಸಹಾಯವಾಗಿದೆ. ಆದ್ರೆ ನುಗ್ಗೇಕಾಯಿ ಸಾರು ಮಾಡುವಾಗ ಎಣ್ಣೆಯ ಉಪಯೋಗ ಕಡಿಮೆ ಇರಲಿ.

3.. ಗರ್ಭಿಣಿಯರು ನುಗ್ಗೇಕಾಯಿ ಸೇವನೆ ಮಾಡುವುದು ಮೆದುಳಿನ ವಿಕಾಸಕ್ಕೆ ಒಳ್ಳೆಯದು. ಅಲ್ಲದೇ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಆರೋಗ್ಯಕ್ಕೂ ಒಳ್ಳೆಯದು.

4.. ಮಕ್ಕಳು ನುಗ್ಗೇಕಾಯಿ ತಿನ್ನುವುದರಿಂದ ಅವರ ಬೆಳವಣಿಗೆಗೆ ಇದು ಸಹಕಾರಿಯಾಗಿದೆ. ನುಗ್ಗೇಕಾಯಿಯಲ್ಲಿ ಕ್ಯಾಲ್ಶಿಯಂ ಪ್ರಮಾಣ ಹೆಚ್ಚಿದ್ದು, ಮಕ್ಕಳಿಗೆ ಕ್ಯಾಲ್ಶಿಯಂನ ಅವಶ್ಯಕತೆ ಹೆಚ್ಚಿರುತ್ತದೆ.ಹೀಗಾಗಿ ಮಕ್ಕಳು ನುಗ್ಗೇಕಾಯಿ ತಿನ್ನುವುದು ಒಳ್ಳೆಯದು.

5.. ಪುರುಷರಲ್ಲಿ ಲೈಂಗಿಕ ಸಮಸ್ಯೆ ಇದ್ದಲ್ಲಿ ನುಗ್ಗೇಕಾಯಿ ಸೇವನೆ ಇದಕ್ಕೆ ಉತ್ತಮ ಪರಿಹಾರ.

6.. ವಿದೇಶದಲ್ಲಿ ನುಗ್ಗೇಕಾಯಿಯನ್ನ ಸೂಪರ್ ಫುಡ್ ಎನ್ನಲಾಗತ್ತೆ. ಅಲ್ಲದೇ, ಇದರಿಂದ ಹಲವು ಪ್ರಾಡಕ್ಟ್‌ಗಳನ್ನ ಮಾಡಿ, ಹೆಲ್ತ್ ಮೆಬ್‌ಸೈಟ್‌ಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗತ್ತೆ. ಆದ್ರೆ ಉತ್ತಮ ಗುಣಗಳನ್ನ ಹೊಂದಿದ ನುಗ್ಗೇಕಾಯಿ ಕೈಗೆಟುಕುವ ದರಕ್ಕೆ ಸಿಕ್ಕರೂ ಕೆಲವರು ತಿನ್ನಲು ಹಿಂಜರಿಯುತ್ತಾರೆ.

7.. ಮಂಡಿ ನೋವು, ಮೈ ಕೈ ನೋವಿನಿಂದ ನೀವು ಬಳಲುತ್ತಿದ್ದಲ್ಲಿ, ನುಗ್ಗೇಕಾಯಿ ಸೇವನೆ ಮಾಡಿ. ನುಗ್ಗೇಕಾಯಿಯನ್ನು ಎಣ್ಣೆಯಲ್ಲಿ ಕಾಯಿಸಿ, ನುಗ್ಗೇ ಎಣ್ಣೆ ತಯಾರಿಸಿ, ಆ ಎಣ್ಣೆಯನ್ನ ಮಂಡಿ ನೋವಿಗೆ ಅಥವಾ ಮೊಣಕೈ ನೋವಿದ್ದ ಜಾಗದಲ್ಲಿ ಮಸಾಜ್ ಮಾಡಿಕೊಂಡು, ಆ ಜಾಗದಲ್ಲಿ ಬಟ್ಟೆ ಸುತ್ತಿಕೊಳ್ಳಿ.

8.. ಹೈ ಬಿಪಿ ಇದ್ದವರು ನುಗ್ಗೇಕಾಯಿ ಸೇವಿಸಬೇಕು.

9.. ರಕ್ತಶುದ್ಧಿಗೊಳಿಸುವಲ್ಲಿ ನುಗ್ಗೇಕಾಯಿ ಸಹಕಾರಿಯಾಗಿದೆ.

10.. ನಿಯಮಿತ ರೂಪದಲ್ಲಿ ನುಗ್ಗೇಕಾಯಿ ಸೇವಿಸಿದ್ದಲ್ಲಿ ಸಮಯಕ್ಕೂ ಮೊದಲು ಚರ್ಮ ಸುಕ್ಕುಗಟ್ಟುವುದನ್ನು ತಡಿಯಬುಹುದು.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

https://youtu.be/xC0WJiPGytU

- Advertisement -

Latest Posts

Don't Miss