Sunday, May 19, 2024

Latest Posts

ಎಲ್ಲ ಸಮಯದಲ್ಲೂ ಥಟ್ ಅಂತಾ ಮಾಡಬಹುದು ಈ ಡೆಸರ್ಟ್..

- Advertisement -

ಆರೋಗ್ಯಕ್ಕೆ ಒಳ್ಳೆಯದಾದ ಆಹಾರಗಳಲ್ಲಿ ಹಣ್ಣಿಗೆ ಪ್ರಮುಖ ಸ್ಥಾನವಿದೆ. ಆಯಾ ಸೀಸನ್‌ಗೆ ತಕ್ಕಂತೆ ವೆರೈಟಿ ವೆರೈಟಿ ಹಣ್ಣುಗಳು ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಇಂಥ ಹಣ್ಣಿನಿಂದ ವಿವಿಧ ತರಹದ ತಿಂಡಿ ತಿನಿಸು ಮಾಡುತ್ತಾರೆ. ಅಂತಹುದರಲ್ಲಿ ಹಣ್ಣಿನ ಪಾಯಸ ಕೂಡ ಒಂದು.

ಮನೆಗೆ ಅತಿಥಿ ಬಂದಾಗ ಅಥವಾ ಯಾವುದಾದರೂ ಕಾರ್ಯಕ್ರಮವಿದ್ದಾಗ 10 ನಿಮಿಷದಲ್ಲಿ ಮಾಡಬಹುದಾದ ಸ್ವೀಟ್ ಅಂದ್ರೆ ಹಣ್ಣಿನ ಪಾಯಸ. ಅಲ್ಲದೇ, ಉಪವಾಸ ಸಂದರ್ಭದಲ್ಲೂ ಕೂಡ ಹಣ್ಣಿನ ಪಾಯಸ ಸೇವನೆ ಮಾಡಬಹುದು.

ಇವತ್ತು ನಾವು ಈಸಿಯಾಗಿ ತಯಾರಿಸಬಹುದಾದ ಹಣ್ಣಿನ ಪಾಯಸದ ರೆಸಿಪಿ ಹೇಳಲಿದ್ದೇವೆ. ಹಣ್ಣಿನ ಪಾಯಸಕ್ಕೆ ಬೇಕಾಗುವ ಸಾಮಗ್ರಿ ನೋಟ್ ಮಾಡಿಕೊಳ್ಳಿ.

ಒಂದು ಕಪ್ ಹಾಲು, 5ರಿಂದ 6 ಕೇಸರಿ ದಳ, 3ಸ್ಪೂನ್ ಸಕ್ಕರೆ, ಕಾಜು- ಪಿಸ್ತಾ- ಬಾದಾಮ್ ಮಿಶ್ರಣ, ಖರ್ಜೂರ, ಒಣ ದ್ರಾಕ್ಷಿ, ಬಾಳೆಹಣ್ಣು, ಸೇಬುಹಣ್ಣು, ಚಿಕ್ಕುಹಣ್ಣು, ಮಾವಿನಹಣ್ಣು, ದ್ರಾಕ್ಷಿ ಹಣ್ಣು.

https://youtu.be/IIVqhQEJptM

ಮೊದಲು ಒಂದು ಪಾತ್ರೆಗೆ ಒಮ್ಮೆ ಕಾಯಿಸಿದ ಹಾಲು, ಕೇಸರಿ ದಳ, ಸಕ್ಕರೆ, ಕಾಜು- ಪಿಸ್ತಾ- ಬಾದಾಮ್ ಮಿಶ್ರಣವನ್ನ ಹಾಕಿ 3 ನಿಮಿಷ ಕುದಿಸಿ, ತಣ್ಣಗಾಗಲು ಬಿಡಿ. ಅವಶ್ಯಕತೆ ಇದ್ದಲ್ಲಿ ಫ್ರಿಜ್‌ನಲ್ಲಿರಿಸಿ. ನಂತರ ಇದಕ್ಕೆ ಬಾಳೆಹಣ್ಣು, ಸೇಬುಹಣ್ಣು, ಚಿಕ್ಕು, ಮಾವು, ದ್ರಾಕ್ಷಿ ಸೇರಿಸಿ ಮಿಕ್ಸ್ ಮಾಡಿ. ರೆಡಿಯಾದ ಮಿಶ್ರಣಕ್ಕೆ ಖರ್ಜೂರ, ಒಣ ದ್ರಾಕ್ಷಿ ಹಾಕಿ ಸವಿಯಲು ಕೊಡಿ.

ಈ ಪಾಯಸಕ್ಕೆ, ಚೆರ್ರಿ ಹಣ್ಣು, ಮಸ್ಕ್‌ಮೆಲನ್, ಅನಾನಸ್ ಸೇರಿ ನಿಮಗಿಷ್ಟವಾದ ಹಣ್ಣು, ಡ್ರೈಫ್ರೂಟ್ಸ್‌ನ್ನು ಬಳಸಬಹುದು.

ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ

- Advertisement -

Latest Posts

Don't Miss