Tuesday, September 23, 2025

Latest Posts

10 ದಿನದಲ್ಲಿ 10 ಮಂದಿ ಬಲಿ..!

- Advertisement -

ಚಿತ್ರದುರ್ಗ: ಗಾಡಿ ಹತ್ತಿದ್ರೆ ಸಣ್ಣ ಸಣ್ಣ ಗಲ್ಲಿಗಳಲ್ಲೇ ನಮ್ಮ ಜನ ಸ್ಪೀಡಾಗಿ ಹೋಗ್ತಾರೆ. ಇನ್ನು ರಾಷ್ಟ್ರೀಯ ಹೆದ್ದಾರಿ ಅಂದ್ರೆ ಕೇಳ್ಬೇಕಾ ಸುನಾಮಿಯಂತೆ ಮಿಂಚಿ ಮರೆಯಾಗ್ತಾರೆ. ಆದ್ರೆ ಈ ಹೈವೆಗಳಲ್ಲಿ ಮಾತ್ರ ಸಾಲು ಸಾಲು ಅಪಘಾತ ಆಗ್ತಾನೆ ಇದೆ. ವರ್ಷಕ್ಕೆ ನೂರಾರು ಮಂದಿ ಪ್ರಾಣ ಬಿಡ್ತಿದ್ದಾರೆ.

ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಗಳ ಸಂಗಮವಾಗಿರೋ ನಗರ. ಆದ್ರೆ ಇದೇ ಚಿತ್ರದುರ್ಗ ದ ಹೆದ್ದಾರಿಗಳು ಈಗ ಡೆಡ್ಲಿ ಹೈವೇಗಳಾಗಿವೆ. ಕಳೆದ 10 ದಿನಗಳಲ್ಲಿ ನಡೆದ ಎರಡು ಪ್ರತ್ಯೇಕ ಭೀಕರ ಅಪಘಾತಗಳಲ್ಲಿ 8 ಮಂದಿ ಸೇರಿದಂತೆ 10 ದಿನದಲ್ಲಿ 10 ಮಂದಿ ಅಪಘಾತಕ್ಕೆ ಬಲಿಯಾಗಿದ್ದಾರೆ. ಡಿಸೆಂಬರ್ 4 ರಂದು ಲಾರಿ ಅಪಘಾತದಲ್ಲಿ ನಾಲ್ವರು ಹಾಗೂ ಡಿಸೆಂಬರ್ 13 ರಂದು ಲಾರಿ ಪಲ್ಟಿಯಾಗಿ ನಾಲ್ವರು ಬಲಿಯಾಗಿದ್ರು. ಹೀಗೆ ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 300 ಮಂದಿ ಅಪಘಾತದಲ್ಲಿ ಪ್ರಾಣ ಬಿಟ್ಟಿದ್ದಾರೆ. ಅಷ್ಟಕ್ಕೂ ಈ ಅಪಘಾತಕ್ಕೆ ಕಾರಣವೇ ಅವಜ್ಞಾನಿಕ ಕಾಮಗಾರಿ ಹಾಗೂ ನಿರ್ಲಕ್ಷ್ಯ. ಅವೈಜ್ಞಾನಿಕವಾಗಿ ಹೆದ್ದಾರಿ ನಿರ್ಮಾಣ ಮಾಡಲಾಗಿದ್ದು ಕೆಲವೆಡೆ ತಿರುವು ಇದ್ದಲ್ಲಿಯೂ ವಿದ್ಯುತ್ ಕಂಬಗಳಿಲ್ಲ. ಮತ್ತೊಂದೆಡೆ ರಾತ್ರಿಹೊತ್ತು ಹೆದ್ದಾರಿ ಬದಿಯಲ್ಲೇ ಲಾರಿ ನಿಲ್ಲಿಸೋದ್ರಿಂದ ಅಪಘಾತಗಳಾಗ್ತಿವೆ.

- Advertisement -

Latest Posts

Don't Miss