Thursday, December 4, 2025

Latest Posts

ಸ್ಕೂಟರ್ಗೆ ಸೀಟ್ ಬೆಲ್ಟ್ ಇಲ್ಲವೆಂದು ದಂಡ ಹಾಕಿದ ಟ್ರಾಫಿಕ್ ಪೊಲೀಸ್..?

- Advertisement -

ಬಿಹಾರ: ಬಿಹಾರದಲ್ಲಿ ಸ್ಕೂಟಿ ಹೊಂದಿರುವ ವ್ಯಕ್ತಿಗೆ, ಸೀಟ್ ಬೆಲ್ಟ್ ಹಾಕಿಲ್ಲವೆಂದು, 1000 ರೂಪಾಯಿ ದಂಡ ಹಾಕಿದ್ದಾರೆ. ಈ ಬಗ್ಗೆ ಚಲನ್ ಬಂದಿದ್ದು, ಸೀಟ್ ಬೆಲ್ಟ್ ಹಾಕೋದು ಕಾರಿನಲ್ಲಿ, ನನ್ನ ಬಳಿ ಇರೋದು ಸ್ಕೂಟಿ. ಇವರೇನು ಹೀಗೆ ಹೇಳುತ್ತಿದ್ದಾರೆಂದು ಆ ವ್ಯಕ್ತಿಗೆ ಕನ್ಫ್ಯೂಸ್ ಆಗಿದೆ.

ಬಿಹಾರದ ಕೃಷ್ಣಕುಮಾರ್ ಝಾ ಎಂಬುವವರು ಈ ಥರದ ಸನ್ನಿವೇಶವನ್ನ ಅನುಭವಿಸಿದ್ದಾರೆ. 2020ರಲ್ಲಿ ಸೀಟ್‌ ಬೆಲ್ಟ್‌ ಹಾಕದೇ, ನೀವು ವಾಹನ ಚಲಾಯಿಸಿದ್ದೀರಿ. ಇದಕ್ಕಾಗಿ 1000 ರೂಪಾಯಿ ದಂಡ ಪಾವತಿಸಿ ಎಂದು ಚಲನ್‌ ನೀಡಲಾಗಿದೆ. ಅಲ್ಲದೇ, ಈಗಾಗಲೇ ಈ ದಂಡ ಕೂಡ ಪಾವತಿಯಾಗಿದೆ ಅಂತಲೂ ಸಂದೇಶ ಬಂದಿದೆ.

ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಕೇಳಿದಾಗ, ತಾಂತ್ರಿಕ ದೋಷದಿಂದಾಗಿ, ಈ ರೀತಿಯಾಗಿರಬಹುದು. ಕೃಷ್ಣಕುಮಾರ್‌ಗೆ ಕೊಟ್ಟಿರುವ ಚಲನ್ ಮ್ಯಾನುವಲ್ ಆಗಿದೆ. ಅದನ್ನೆಲ್ಲ ನಾವು ಇ- ಚಲನ್‌ಗಳಾಗಿ ಪರಿವರ್ತನೆ ಮಾಡಲಿದ್ದೇವೆ. ದೋಷ ಎಲ್ಲಿಯಾಗಿದೆ ಎಂದು ನಾವು ಪರಿಶೀಲನೆ ಮಾಡುತ್ತೇವೆಂದು, ಬಿಹಾರ ಟ್ರಾಫಿಕ್ ಪೊಲೀಸ್ ಅಧಿಕಾರಿ ಬಲ್ಬೀರ್ ದಾಸ್ ಹೇಳಿದ್ದಾರೆ.

ಇದೇ ರೀತಿಯ ಘಟನೆ ಫೆಬ್ರವರಿ ತಿಂಗಳಲ್ಲಿ ಓಡಿಶಾದಲ್ಲಿ ನಡೆದಿತ್ತು. ಸ್ಕೂಟಿ ಸವಾರನಿಗೆ ಸೀಟ್ ಬೆಲ್ಟ್‌ ಧರಿಸಿಲ್ಲವೆಂಬ ಕಾರಣಕ್ಕೆ 1000 ರೂಪಾಯಿ ದಂಡ ವಿಧಿಸಲಾಗಿತ್ತು. ಈ ಬಗ್ಗೆ ವಿಚಾರಿಸಿದಾಗ, ಮತ್ತೊಮ್ಮೆ ಇಂಥ ತಪ್ಪು ಮಾಡಬಾರದು ಎಂದು ಎಚ್ಚರಿಸಲಾಗಿದ್ದು, ಆ ದಂಡ ಬೇರೆಯವರಿಗೆ ಹಾಕಿದ್ದು ಎಂದು ಗೊತ್ತಾಯಿತು.

ವಿಚ್ಛೇದನಕ್ಕಾಗಿ ಇನ್ನು 6 ತಿಂಗಳು ಕಾಯುವ ಅಗತ್ಯವಿಲ್ಲ ಎಂದ ಸುಪ್ರೀಂಕೋರ್ಟ್..

ತಾನು ಸಾಕಿದ್ದ ಗಿಣಿ ಸಾವು: ಹಿಂದೂ ಪದ್ಧತಿ ಪ್ರಕಾರ ಅಂತ್ಯಕ್ರಿಯೆ..

Met Gala 2023: ಅಂಬಾನಿ ಪುತ್ರಿಯ ಕೋಟಿ ಬೆಲೆಬಾಳುವ ಡ್ರೆಸ್ ವಿಶೇಷತೆಗಳೇನು ಗೊತ್ತಾ..?

- Advertisement -

Latest Posts

Don't Miss