ನಾವು ನಮಗೆ ಇಷ್ಟವಾಗುವ ಅಥವಾ ನಮ್ಮ ಸಂಬಂಧಿಕರಿಗೆ ಒಳ್ಳೆಯದಾಗಲೆಂದು ಹರಕೆ ಹೊರುತ್ತೇವೆ. ತಾನಿಷ್ಟಪಟ್ಟ ನಟ, ನಟಿಗೆ ಒಳ್ಳೆಯದಾಗಲೆಂದು, ಅಭಿಮಾನಿಗಳು ಹರಕೆ ಹೊರೊದನ್ನ ನೋಡಿದ್ದೇವೆ. ಇದೇ ರೀತಿ ಅಸಾವುದ್ದೀನ್ ಓವೈಸಿಯ ಫ್ಯಾನ್ ಓರ್ವ, ಅಸಾವುದ್ದೀನ್ ಓವೈಸಿಗೆ ಒಳ್ಳೆಯದಾಗಲೆಂದು, 101 ಕುರಿಗಳನ್ನು ಬಲಿ ಕೊಟ್ಟಿದ್ದಾನೆ.
ನಿನ್ನೆ ಅಸಾವುದ್ದೀನ್ ಒವೈಸಿ ಕಾರ್ ಮೇಲೆ ಅಟ್ಯಾಕ್ ಆಗಿತ್ತು, ಈ ಕಾರಣಕ್ಕಾಗಿ ಅಸಾವುದ್ದೀನ್ ಜೀವಕ್ಕೆ ಇನ್ನು ಮುಂದೆ ಏನೂ ಅಪಾಯವಾಗದಿರಲಿ ಎಂಬ ಕಾರಣಕ್ಕೆ, ಹರಕೆ ಹೊತ್ತ ಅಭಿಮಾನಿ, ಈ ರೀತಿ 101 ಕುರಿಗಳನ್ನ ಬಲಿ ಕೊಟ್ಟಿದ್ದಾನೆ. ಈ ಅಭಿಮಾನಿ ಉದ್ಯಮಿಯಾಗಿದ್ದು, ಹೈದರಾಬಾದ್‌ನ ಭಾಗ್- ಎ-ಜಹನಾರಾನದಲ್ಲಿ ಕುರಿಗಳನ್ನು ಬಲಿ ಕೊಟ್ಟಿದ್ದಾನೆ.
ನಿನ್ನೆ ಅಸಾವುದ್ದೀನ್ ಕಾರ್ ಮೇಲೆ ಉತ್ತರಪ್ರದೇಶದ ಮೀರತ್‌ನಲ್ಲಿ ಅಟ್ಯಾಕ್ ಆಗಿತ್ತು. ಈ ಕಾರಣಕ್ಕೆ ಜೆಡ್ ಸೆಕ್ಯೂರಿಟಿ ಕೂಡ ಕೊಡಲಾಗಿತ್ತು. ಆದ್ರೆ ಅಸಾವುದ್ದೀನ್ ಅದನ್ನ ನಿರಾಕರಿಸಿದ್ರು. ನನಗೆ ಜೆಡ್ ಸೆಕ್ಯೂರಿಟಿ ಬೇಡ. ತಪ್ಪು ಮಾಡಿದವರನ್ನ ಬಂಧಿಸಿ ಎಂದು ಹೇಳಿದ್ರು. ಇನ್ನು ಅಸಾವುದ್ದೀನ್ ಓವೈಸಿಗೆ ಒಳ್ಳೆಯದಾಗಲೆಂದು ಹಲವು ಇಸ್ಲಾಂ ಧರ್ಮೀಯರು ನಮಾಜ್ ಮಾಡುವ ಮೂಲಕ, ದೇವರಲ್ಲಿ ಪ್ರಾರ್ಥಿಸಿದ್ದಾರೆ.