Friday, February 7, 2025

Latest Posts

Indira Canteenಗಳು ಈಗ ಖಾಲಿ ಖಾಲಿ..!

- Advertisement -

ಇಂದಿರಾ ಕ್ಯಾಂಟೀನ್ (Indira Canteen) ಆರಂಭದಲ್ಲಿ ಕ್ಯಾಂಟೀನ್ ಆಹಾರಕ್ಕೆ ಬರುವ ಗ್ರಾಹಕರ ಸಂಖ್ಯೆ 3 ಲಕ್ಷಕ್ಕೂ ಹೆಚ್ಚಿತ್ತು. ಆದರೆ ಕೊರೋನಾ ನಂತರ (After Corona) ಇದರಲ್ಲಿ ತೀವ್ರ ಇಳಿಮುಖ ಕಂಡುಬಂದಿದೆ. ಕಳೆದ ವರ್ಷದ ಕೊನೆಯಲ್ಲಿ ಕ್ಯಾಂಟೀನ್‌ಗೆ ಬರುವವರ ಸಂಖ್ಯೆ ಎರಡು ಲಕ್ಷಗಳಲ್ಲಿ ಕಡಿಮೆಯಾಗಿತ್ತು. ಬರೀ 1 ಲಕ್ಷದಷ್ಟು ಜನರು ಮಾತ್ರ ಬರುತ್ತಿದ್ದರು. ಮುಖ್ಯವಾಗಿ ಕಟ್ಟಡ ಕೆಲಸಗಾರರು, ದಿನಗೂಲಿ ಕಾರ್ಮಿಕರು (Day laborers) ಕ್ಯಾಂಟೀನ್ ಅವಲಂಬಿಸಿದ್ದರು. ಬಹುತೇ ಹೆಚ್ಚಿನ ಕ್ಷೇತ್ರಗಳಲ್ಲಿ ಉದ್ಯೋಗ’ಗಳಿಗೆ ಮನೆಯಿಂದ ಕೆಲಸಮಾಡುವ ಅವಕಾಶ ಸಿಕ್ಕಿದ್ದೇ ತಡ ಬೆಂಗಳೂರು ಖಾಲಿಯಾಗುತ್ತಾ ಬಂತ್ತು, ಈ ಹಿಂದೆ ಕೊರೋನಾ ಇಲ್ಲದಿದ್ದಾಗ ದಿನದಲ್ಲಿ 350 ಬ್ರೇಕ್ ಫಾಸ್ಟ್ ಆದರೂ ಸೇಲ್ ಆಗುತ್ತಿತ್ತು. ಆದರೆ ನಂತರ ತಿಂಡಿಗೆ ಬರುವವರ ಸಂಖ್ಯೆ 100 ತಲುಪಿದೆ. ಮಧ್ಯಾಹ್ನದ ಊಟಕ್ಕೆ 40 ಮಂದಿ ಬಂದರೆ ಹೆಚ್ಚು. ಗ್ರಾಹಕರನ್ನು ಸೆಳೆಯುವ ಉದ್ದೇಶಿದಿಂದ ಪಾಯಸವನ್ನೂ ಮೆನುವಿನಲ್ಲಿ ಸೇರಿಸಲಾಗಿದೆ. ಮುದ್ದೆ, ಸೊಪ್ಪಿನ ಸಾರಿನ ಮೂಲಕ ಗ್ರಾಹಕರನ್ನು ಆಕರ್ಷಿಸುವ ಕೆಲಸದ ಬಗ್ಗೆ ಚಿಂತಿಸಲಾಗಿದೆ, ಇನ್ನೂ ಮುಖ್ಯವಾಗಿ ಸಬ್ಸಿಡಿ ಹಣ (Subsidy money) ಬರದೆ ಕ್ಯಾಂಟೀನ್ ನಿರ್ವಹಿಸಲು ಕಷ್ಟಪಡುವಂತಾಗಿದೆ. ಕೊರೋನಾ ಸಮಯದಲ್ಲಿ ಕೆಲವೊಂದು ಯಂತ್ರಗಳೂ(Machines) ಹಾಳಾಗಿದ್ದು ಇದು ಇನ್ನೊಂದು ಹೊಡೆತ. ಅಂತೂ ಕ್ಯಾಂಟೀನ್ ಕಡೆಗೂ ನಷ್ಟವಾಗಿದ್ದು, ಆದರೆ ಈಗ ಚಿತ್ರಣ ಸಂಪೂರ್ಣ ಬದಲಾಗಿದೆ. ಕ್ಯಾಂಟೀನ್‌ಗಳು ಅಳಿವಿನಂಚಿಗೆ ತಲುಪಿವೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಏನು ನಿರ್ಧಾರವಾಗಲಿದೆ ಎನ್ನುವುದನ್ನು ಕಾದು ನೋಡಬೇಕು.

- Advertisement -

Latest Posts

Don't Miss