ದೆಹಲಿ: ರಾಜ್ಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಜೊತೆ ನಡೆಸುತ್ತಿರೋ ಸಭೆಯಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರೋ ಅಸಮಾಧಾನದ ಬಗ್ಗೆ ಚರ್ಚೆ ನಡೀತಿದೆ. ಆದ್ರೆ ಈ ಭಿನ್ನಾಭಿಪ್ರಾಯ ಮೈತ್ರಿ ಸರ್ಕಾರದಲ್ಲಿ ಸಹಜ ಅಂತ ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ನಡೆದ ಚರ್ಚೆ ವೇಳೆ ಮಾತನಾಡಿದ ಪರಮೇಶ್ವರ್, ಜೆಡಿಎಸ್ ನಾಯಕರು ಪದೇ ಪದೇ ಹೇಳಿಕೆ ನೀಡ್ತಾರೆ, ಮೈತ್ರಿ ಬಗ್ಗೆ ಕೂಡ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಅಂದ ಮೇಲೆ ಕೆಲವು ಸಮಸ್ಯೆ ಇರುತ್ತೆ. ಚಿಕ್ಕ ವಿಷಯವನ್ನೇ ದೊಡ್ಡದು ಮಾಡಿ ಹೇಳಿಕೆ ಕೊಡುವುದು ಸರಿಯಲ್ಲ. ಹಿರಿಯ ನಾಯಕರು ಯಾರೂ ಹಾಗೆ ಮಾತನಾಡಲ್ಲ. ಆದರೆ ಎರಡನೇ ಹಂತದ ಮುಖಂಡರೇ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಸರ್ಕಾರಕ್ಕೂ ಮುಜುಗರ, ಮೈತ್ರಿಗೂ ಮುಜುಗರ. ಕೆಲವೊಂದು ಸಣ್ಣ ಪುಟ್ಟ ಸಮಸ್ಯೆಗಳಿವೆ ನಿಜ, ಅವುಗಳನ್ನ ಜೆಡಿಎಸ್ ವರಿಷ್ಠ ದೇವೇಗೌಡರ ಗಮನಕ್ಕೆ ತಂದು ಚರ್ಚಿಸಿ ಬಗೆಹರಿಸಿಕೊಂಡ್ರೆ ಒಳ್ಳೇಯದು ಅಂತ ಡಿಸಿಎಂ ಜಿ.ಪರಮೇಶ್ವರ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.