- Advertisement -
ದೆಹಲಿ: ಯಾವುದೇ ಕಾರಣಕ್ಕೂ ಮೈತ್ರಿಗೆ ಧಕ್ಕೆಯಾಗೋ ರೀತಿ ಹೇಳಿಕೆ ನೀಡಬೇಡಿ ಅಂತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಕೈ ನಾಯಕರಿಗೆ ಸಲಹೆ ನೀಡಿದ್ದಾರೆ.
ದೆಹಲಿಯಲ್ಲಿ ನಿನ್ನೆರಾಹುಲ್ ಗಾಂಧಿ ಜೊತೆ ನಿನ್ನೆ ನಡೆದ ರಾಜ್ಯ ಕಾಂಗ್ರೆಸ್ ನಾಯಕರ ಸಮಾಲೋಚನಾ ಸಭೆಯಲ್ಲಿ ಸಲಹೆ ನೀಡಿರುವ ಯುವರಾಜ ರಾಹುಲ್ ಗಾಂಧಿ ಮೈತ್ರಿಭಂಗಕ್ಕೆ ಕಾರಣವಾಗೋ ಹೇಳಿಕೆಗಳನ್ನು ಯಾರೂ ನೀಡಬಾರದು. ಇಷ್ಟಬಂದಂತೆ ಹೇಳಿಕೆ ನೀಡೋದನ್ನ ಕೂಡಲೇ ನಿಲ್ಲಿಸಬೇಕು . ಇದರಿಂದ ಎದುರಾಳಿಗಳಿಗೇ ಲಾಭವಾಗುತ್ತೆ ಅಂತ ಎಚ್ಚರಿಸಿದ್ದಾರೆ.
ಮೈತ್ರಿಯಿಂದಲೇ ಬಿಜೆಪಿಯನ್ನ ಅಧಿಕಾರದಿಂದ ದೂರ ಇಡೋದಕ್ಕೆ ಸಾಧ್ಯವಾಗಿದೆ. ಇದಕ್ಕೆ ಯಾವುದೇ ಕಾರಣಕ್ಕೂ ಮೈತ್ರಿಭಂಗ ಮಾಡಬೇಡಿ ಅಂತ ರಾಹುಲ್ ಸಲಹೆ ನೀಡಿದ್ದಾರೆ.
- Advertisement -