Saturday, July 20, 2024

Latest Posts

144 ಸೆಕ್ಷನ್ ಚಾರಿಯಿಂದ ಪುನೀತ್ ಸಂಭ್ರಮಾಚರಣೆಗೆ ಬ್ರೇಕ್

- Advertisement -

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕೋಟ್ಯಾಂತರ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಏಕೆಂದರೆ ನಾಳೆ ಮಾರ್ಚ್ 17 ಅಪ್ಪು ಹುಟ್ಟುಹಬ್ಬ ಮತ್ತು ಅವರ ಬಹು ನಿರೀಕ್ಷತ ಚಿತ್ರ ಜೇಮ್ಸ್ ಬಿಡುಗಡೆಯಾಗುವ ದಿನ. ಇದು ಅಭಿಮಾನಿಗಳಿಗೆ ಖುಷಿಯ ದಿನವಾಗಿತ್ತು. ಆದರೆ ಹಿಜಾಬ್ ಕುರಿತು ಹೈಕೋರ್ಟ್ನ ತೀರ್ಪಿನ ನಂತರ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಕೆಲವು ಮುಸ್ಲಿಂ ಮುಖಂಡರು ಶಾಲಾ-ಕಾಲೇಜುಗಳಲ್ಲಿ ಗಲಾಟೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ 144 ಸೆಕ್ಷನ್ ಜಾರಿಯಲ್ಲಿ ಇರಲ್ಲಿದೆ. ಇದರಿಂದ ಅಪ್ಪು ಅಭಿಮಾನಿಗಳ ಸಂಭ್ರಮಾಚರಣೆ ತಣ್ಣೀರು ಎರೆಚಿದಂತಾಗಿದೆ.

ಬೆAಗಳೂರಿನ ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರದಲ್ಲಿ ಪುನೀತ್ ಅವರ ಕಟ್‌ಔಟ್‌ಗಳನ್ನು ನಿಲ್ಲಿಸಲಾಗಿದ್ದು, ಅವುಗಳಿಗೆ ಹೆಲಿಕಾಪ್ಟರ್‌ನಿಂದ ಪುಷ್ಪಾರ್ಚನೆ ಮಾಡಲು ಅಭೀಮಾನಿಗಳು ಉತ್ಸುಕರಾಗಿದ್ದರು. ಆದರೆ ನಿಷೇಧಾಜ್ಞೆ ಮಾಡಿರುವುದರಿಂದ ಕೆಲವೆಡೆ ಸಂಭ್ರಮಾಚರಣೆಗೂ ಪೊಲೀಸರು ಅನುಮತಿ ಕೊಡುತ್ತಿಲ್ಲ.

ಇದರ ನಡುವೇ ಅಭಿಮಾನಿಗಳು 2 ಹೆಲಿಕಾಪ್ಟರ್‌ನಿಂದ ಪುನೀತ್ ಕಟ್‌ಔಟ್‌ಗಳಿಗೆ ಪುಷ್ಪಾರ್ಚನೆ ಮಾಡುವ ಕಾರ್ಯಕ್ರಮಕ್ಕೆ ತಡೆಯಿಡಿಯಲ್ಲಾಗಿದೆ. ಇದರಿಂದ ಪುನೀತ್ ಅಭಿಮಾನಿಗಳಿ ನಿರಾಸೆಯಾಗಿದೆ ಮತ್ತು ಪುನೀತ್ ಅಭಿಮಾನಿಗಳು ಬೆಳಗಿನ ಜಾವ 5 ಗಂಟೆಗೆ ಬಿರಿಯಾನಿ ಊಟ ಹಂಚುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದನ್ನು ಮಧ್ಯಾಹ್ನಕ್ಕೆ ಮೂಂದೂಡಲಾಗಿದೆ ಎಂದು ಪುನೀತ್ ಅಭಿಮಾನಿಗಳು ತಿಳಿಸಿದ್ದಾರೆ.

- Advertisement -

Latest Posts

Don't Miss