Friday, August 29, 2025

Latest Posts

2 ಡೋಸ್‌ ಪಡೆದವರ ಮನೆ ಬಾಗಿಲಿಗೆ ‘ಸೋಂಕು ಮುಕ್ತ ಸ್ಟಿಕರ್‌ʼ

- Advertisement -

ನವದೆಹಲಿ: ಕೊರೊನಾ ಲಸಿಕೆ ಅಭಿಯಾನದ ವೇಗ ಹೆಚ್ಚಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದ್ದು, ಎರಡು ಡೋಸ್‌ ಲಸಿಕೆ ಪೂರ್ಣಗೊಳಿಸಿದ ಕುಟುಂಬಗಳ ಮನೆ ಬಾಗಿಲಿಗೆ ಸ್ಟಿಕರ್‌ ಅಂಟಿಸಬೇಕು ಎಂದಿದೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವೀಯಾ ಅವ್ರು, ಸರಕಾರೇತರ ಸಂಸ್ಥೆಗಳು, ನಾಗರಿಕ ಸಂಘಟನೆಗಳು ಮತ್ತು ಅಭಿವೃದ್ಧಿ ಪಾಲುದಾರರ ಜತೆ ನಡೆಸಿದ ಸಮಾಲೋಚನೆಯಲ್ಲಿ ಈ ಸಲಹೆ ನೀಡಿದ್ರು.
ಇನ್ನು ‘ಭಾರತದಂತಹ ಬೃಹತ್‌ ರಾಷ್ಟ್ರದಲ್ಲಿ ಮನೆ ಬಾಗಿಲಿಗೆ ಲಸಿಕೆ ತಲುಪಿಸುವುದು ಸಾಹಸದ ಕೆಲಸವೇ ಸರಿ. ಇದರಲ್ಲಿ ಸರಕಾರದಷ್ಟೇ ಮುತುವರ್ಜಿಯನ್ನ ಜನರು ಕೂಡ ವಹಿಸಬೇಕು. ಇದರಲ್ಲಿ ಜನರ ಪಾಲುದಾರಿಕೆ ತುಂಬ ಮುಖ್ಯ. ಲಸಿಕೆ ಪಡೆಯದೇ ದೂರ ಉಳಿದವರನ್ನ ಪ್ರೋತ್ಸಾಹಿಸಿ ಕರೆ ತರಬೇಕು. ಎರಡು ಡೋಸ್‌ ಪೂರ್ಣಗೊಳಿಸಿದ ಮನೆಗಳ ಬಾಗಿಲಿಗೆ ‘ಸೋಂಕು ಮುಕ್ತ’ ಎನ್ನುವ ಸ್ಟಿಕರ್‌ ಅಂಟಿಸಬೇಕು. ಇದರಿಂದ ಉಳಿದವರಲ್ಲೂ ಲಸಿಕೆ ಪಡೆಯುವ ಉಮೇದು ಸೃಷ್ಟಿಯಾಗುತ್ತದೆ’ ಎಂದರು.

- Advertisement -

Latest Posts

Don't Miss