Monday, December 23, 2024

Latest Posts

2024 ಡಿಕೆಶಿಗೆ ಲಕ್ಕಿನಾ..? ಸಿಎಂ ಆಗೇ ಆಗ್ತಾರಾ ಡಿ.ಕೆ.ಶಿವಕುಮಾರ್‌..?

- Advertisement -

Spiritual: ಕಾಂಗ್ರೆಸ್ ಗೆದ್ದಾಗ ಸಿಎಂ ಯಾರಾಗ್ತಾರೆ ಅನ್ನೋ ಗೊಂದಲ ಎಲ್ಲರಲ್ಲೂ ಇತ್ತು. ಸಿಎಂ ಪಟ್ಟ ಸಿದ್ದರಾಮಯ್ಯನವರಿಗೆ ಕೊಡುವುದಾ ಅಥವಾ ಡಿಕೆಶಿಗೆ ಕೊಡುವುದಾ ಅಂತಾ ಹೈಕಮಾಂಡ್ ಕೂಡ ತಲೆಕೆಡಿಸಿಕೊಂಡಿತ್ತು. ಹಾಗಾಗಿ ಒಂದು ವಾರದ ಬಳಿಕ ಸಿಎಂ ಪದಗ್ರಹಣ ಕಾರ್ಯಕ್ರಮ ಮಾಡಲಾಯಿತು. ಫೈನಲಿ ಸಿದ್ದರಾಮಯ್ಯರನ್ನ ಸಿಎಂ ಮಾಡಲಾಯಿತು. ಹಾಗಾದರೆ ಡಿಕೆಶಿಗೆ ಸಿಎಂ ಪದವಿ ಸಿಗುವ ಭಾಗ್ಯವಿಲ್ಲವಾ ಅನ್ನೋ ಪ್ರಶ್ನೆಗೆ ಖಂಡಿತ, ಅವರಿಗೆ ಸಿಎಂ ಭಾಗ್ಯವಿದೆ ಎಂದಿದ್ದಾರೆ. ಜ್ಯೋತಿಷಿ ನಾರಾಯಣ ರೆಡ್ಡಿ ಗುರೂಜಿ.

2023 ಡಿಕೆಶಿಗೆ ಅಷ್ಟು ಅತ್ಯುತ್ತಮ ವರ್ಷವಲ್ಲದ ಕಾರಣ, ಈ ಬಾರಿ ಸಿಎಂ ಪಟ್ಟ ಅವರ ಕೈ ತಪ್ಪಿದೆ. ಆದರೆ ಡಿಸಿಎಂ ಪಟ್ಟಕ್ಕೆ ಅವರು ಸಮಾಧಾನ ಪಟ್ಟಿದ್ದಾರೆ. ಧರ್ಮ-ಕರ್ಮ ಸಂಯೋಗವಿರುವ ಕಾರಣಕ್ಕೆ, ಡಿಕೆಶಿ ಸಿಎಂ ಆಗಬೇಕು ಎಂದರೆ, ಧರ್ಮಕ್ಕಾಗಿ ಅವರು ಕರ್ಮ ಮಾಡಬೇಕಾಗಿದೆ. ಅಂದರೆ ಧರ್ಮ ಕಾರ್ಯವನ್ನು ಮಾಡಿದಾಗ, ಅವರಿಗೆ ಅದರ ಸರಿಯಾದ ಪ್ರತಿಫಲ ಸಿಗುತ್ತದೆ.

ಅದರಂತೆ ಡಿಕೆಶಿಯವರಿಂದ ಭವಿಷ್ಯದಲ್ಲಿ ಅನೇಕ ದೇವಾಲಯಗಳು ಪ್ರತಿಷ್ಠಾಪನೆಯಾಗಲಿದೆ. ಮತ್ತು ದೇವಾಲಯದ ಕಾರ್ಯಗಳು ನಡೆಯಲಿದೆ ಎಂದು ನಾರಾಯಣ ಗುರೂಜಿ ಹೇಳಿದ್ದಾರೆ. ಇನ್ನು ಸಿದ್ದರಾಮಯ್ಯ ಅವರು ಒಂದೂವರೆ ವರ್ಷಗಳ ಕಾಲ ಸಿಎಂ ಆಗಿರಲಿದ್ದು, ಬಳಿಕ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಹಾಗೆ ಸರಿಯಾಗಿ ಆರೋಗ್ಯದ ಕಡೆ ಗಮನ ಹರಿಸಿದಾಗ ಮಾತ್ರ, ಅವರು ಮುಂದಿನ ಕಾಲವೂ ಕೂಡ ಸಿಎಂ ಆಗಿ ಮುಂದುವರಿಯುತ್ತಾರೆ ಎಂದು ನಾರಾಯಣ ರೆಡ್ಡಿ ಭವಿಷ್ಯ ನುಡಿದಿದ್ದಾರೆ.

Congress : ನಾಯಕತ್ವವಿಲ್ಲದ ಬಿಜೆಪಿಗೆ ಜೆಡಿಎಸ್ ನಿಂದ  ನಾಯಕನ ಎರವಲು….?! : ಕಾಂಗ್ರೆಸ್  ಟ್ವೀಟ್

‘ಕಾಂಗ್ರೆಸ್ ಸರ್ಕಾರ ಹಾಲಿನ ಬೆಲೆ ಹೆಚ್ಚಿಸಿ, ಶ್ರಮಜೀವಿಗಳ ಕಿಸೆಗೆ ಕನ್ನ ಕೊರೆದಿದೆ’

VidhanaSabha : ವಿಪಕ್ಷನಾಯಕನಿಲ್ಲದೆ ಸದನ ಕಲಾಪ ಮುಕ್ತಾಯ ..! ಇತಿಹಾಸದಲ್ಲೇ ಮೊದಲು..!

- Advertisement -

Latest Posts

Don't Miss