ಕಾಂಗೋದಲ್ಲಿ ಧಾರಾಕಾರ ಮಳೆಗೆ 22 ಮಂದಿ ಸಾವು

International News: ಕಾಂಗೋದ ಕಸಾಯಿ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿದಿದ್ದು, 22 ಮಂದಿ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ಪ್ರವಾಹ ಉಂಟಾಗಿದ್ದು, ಸ್ಥಳೀಯರ ಪರಿಸ್ಥಿತಿ ಚಿಂತಾಜನಕವಾಗಿದೆ.

ಕಸಾಯಿ ಪ್ರದೇಶದಲ್ಲಿ ಧಾರಾಕಾರ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ಮನೆ, ಶಾಲೆ, ಅಂಗಡಿ ಸೇರಿ, ಹಲವು ಕಟ್ಟಡಗಳು ಧರೆಗುರುಳಿದೆ. ಮನೆ ಕಟ್ಟಲು ಯೋಗ್ಯವಲ್ಲದ ಪ್ರದೇಶದಲ್ಲಿ, ಈ ಕಟ್ಟಡಗಳನ್ನು ಕಟ್ಟಿರುವುದೇ ಈ ಪ್ರಮಾದಕ್ಕೆ ಕಾರಣವೆನ್ನಲಾಗಿದೆ.

ಇನ್ನು ಮಳೆ ಬಂದು ಎಲ್ಲ ಕೊಚ್ಚಿ ಹೋಗಿದ್ದು, ಮೂಲ ಸೌಕರ್ಯವಿಲ್ಲದೇ, ಜನ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದಿಂದ ನಿರಾಶ್ರಿತರಿಗೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಮೃತರ ಅಂತ್ಯಸಂಸ್ಕಾರವನ್ನು ಮಾಡಲು, ಸರ್ಕಾರ ವ್ಯವಸ್ಥೆ ಮಾಡಿದೆ.

‘ಶಿವಾನಂದ ಪಾಟೀಲ್ ರೈತರ ಬಗ್ಗೆ ದುರುದ್ದೇಶದಿಂದ ಮಾತನಾಡಿಲ್ಲ, ಸಲುಗೆಯಿಂದ ಮಾತನಾಡಿದ್ದಾರೆ’

‘ಮಿಸ್ಟರ್ ನರೇಂದ್ರ ಮೋದಿ ಅವರೇ, ಎಷ್ಟು ಉದ್ಯೋಗ ಸೃಷ್ಟಿಯಾಗಿದೆ ಎಂದು ದೇಶದ ಜನರಿಗೆ ಲೆಕ್ಕ ಕೊಡಿ’

‘ನಮ್ಮ ಆರೋಪಕ್ಕೆ ಬಸನಗೌಡ ಪಾಟೀಲ್ ಯತ್ನಾಳರೇ ಸಾಕ್ಷಿ ಒದಗಿಸಿದ್ದಾರೆ’

About The Author