ಕೊರೋನಾ ರೂಪಾಂತರಿ ಒಮಿಕ್ರಾನ್ ಕೇಸುಗಳು 1700 ಆಗಿದೆ. ಅದರಲ್ಲಿ 639 ಮಂದಿ ಚೇತರಿಸಿಕೊಂಡಿದ್ದಾರೆ. ಮಹಾರಾಷ್ಟ್ರ 510 ಒಮಿಕ್ರನ್ ಪ್ರಕರಣಗಳೊಂದಿಗೆ ಮೊದಲಸ್ಥಾನದಲ್ಲಿದೆ. ದೆಹಲಿ 351 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಭಾರತದಲ್ಲಿ ಇಂದು 33750 ಹೊಸ ಕೊರೋನಾ ಕೇಸ್ ಪತ್ತೆಯಾಗಿದ್ದು, 123 ಮಂದಿ ಸಾವನ್ನಪ್ಪಿದ್ದಾರೆ. 10846 ಮಂದಿ ಚೇತರಿಸಿಕೊಂಡಿದ್ದಾರೆ. ದೇಶದಲ್ಲಿ 145589 ಕೊರೋನಾ ಕೇಸ್‌ಗಳು ಸಕ್ರಿಯವಾಗಿವೆ. ಕೊರೋನಾ ಕೇಸ್‌ಗಳು ಎಚ್ಚಾಗುತಿರುವುದರಿಂದ ಜನರು ಕೋವಿಡ್ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗು ಯಾರು ಕೊರೋನಾ ಲಸಿಕೆ ಹಾಕಿಸಿಕೊಂಡಿಲ್ಲವೋ ಅವರು ಲಸಿಕೆ ಹಾಕಿಸಿಕೊಳ್ಳಬೇಕು. ಇಂದಿನಿಂದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಲು ಸರ್ಕಾರ ಪ್ರಾರಂಭಿಸಲಾಗಿದೆ. ಇದರ ಜೋತೆಗೆ ಜನವರಿ 10 ರಿಂದ ಆರೋಗ್ಯ ಕಾರ್ಯಕರ್ತರು 60 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ ಅಸ್ವಸ್ಥತೆ ಗೊಂಡವರಿಗೆ ಬೂಸ್ಟರ್ ಡೋಸ್ ನೀಡಲು ಸರ್ಕಾರ ಮಂದಾಗಿದೆ.